ಸತೀಶ್ ಜಾರಕಿಹೋಳಿ ಆಪ್ತರ ಮೇಲೆ ಗುಂಡಿನ ದಾಳಿ; ರಾಜಕೀಯ ವೈಷಮ್ಯವೋ, ಆಸ್ತಿ ಕಲಹವೋ..!?

ಘಟನೆಯಲ್ಲಿ ಕಿರಣ್ ರಜಪೂತ ಪಾರಾಗಿದ್ದು, ಭರಮಾ ದುಪದಾಳೆ ಅವರ ಎದೆಯ ಮೇಲ್ಬಾಗದ ಭುಜಕ್ಕೆ ಗುಂಡು ತಗುಲಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಚಿಕ್ಕೋಡಿ(ಡಿಸೆಂಬರ್​. 17): ರಾಜ್ಯದಲ್ಲಿ ಗ್ರಾಂಮ ಪಂಚಾಯತ್​ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗಗುತ್ತಿದೆ. ಪ್ರತಿಯೊಬ್ಬರೂ ಸಹ ತಮ್ಮ ತಮ್ಮ ಆತ್ಮೀಯರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೆ ರೀತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ 3 ನೇ ನಂಬರ್ ವಾರ್ಡ್ ನ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿ ರಾತ್ರಿ ಹೊತ್ತು ಕಟ್ಟೆಯ ಮೇಲೆ ಕುಳಿತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಫೈರಿಂಗ್ ನಡೆದಿದೆ. ಕಳೆದ ರಾತ್ರಿ 11 ಗಂಟೆ ಸುಮಾರು ಅಪರಿಚಿತ ವ್ಯಕ್ತಿಯೋರ್ವ ಬಂದು ಇಬ್ಬರೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಇನ್ನು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರಾದ ಕಿರಣ್ ರಜಪೂತ ಹಾಗೂ ಭರಮಾ ದುಪದಾಳೆ ಎನ್ನಲಾಗಿದೆ. ಇವರು ಶಾಸಕ ಸತೀಶ್ ಜಾರಕಿಹೋಳಿ ಆಪ್ತರಾಗಿ ಯಮಕಣಮರಡಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಘಟನೆಯಲ್ಲಿ ಕಿರಣ್ ರಜಪೂತ ಪಾರಾಗಿದ್ದು, ಭರಮಾ ದುಪದಾಳೆ ಅವರ ಎದೆಯ ಮೇಲ್ಬಾಗದ ಭುಜಕ್ಕೆ ಗುಂಡು ತಗುಲಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಯಮಕಣಮರಡಿಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರಲ್ಲಿ ಆತಂಕ ಮನೆ ಮಾಡಿದೆ. ಗುಂಡು ಹಾರಿಸಿದ ವ್ಯಕ್ತಿ ಕುರಿತು ಯಾವುದೆ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಕೆಲವರು ಇದು ರಾಜಕೀಯ ದಾಳಿ ಎಂದರೆ ಇನ್ನು ಕೆಲವರು ಹಳೆ ವೈಷಮ್ಯ ದಿಂದಾಗಿ ನಡೆದಿರು ಗುಂಡಿನ ದಾಳಿ ಎನ್ನುವ ಮಾತು ಕೇಳಿ ಬರುತ್ತಿವೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ ಪಿ. ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೆ ವೇಳೆ ಘಟನೆ ಕುರಿತು ಮಾತನಾಡಿದ ಎಸ್ ಪಿ. ಲಕ್ಷ್ಮಣ ನಿಂಬರಗಿ. ಈ ಹಿಂದೆಯೂ ಸಹ ಭರಮಾ ದುಪದಾಳೆಯನ್ನು  ಕೊಲ್ಲಲು ಅವರ ಸೋದರ ಸಂಬಂದಿ ಮಹಾವೀರ ದುಪದಾಳೆ ಎನ್ನುವವರು ಸುಪಾರಿ ನೀಡಿದ್ದು, ಪೊಲೀಸರ ಗಮನಕ್ಕೆ ಬಂದಿದೆ.

ಇದನ್ನೂ ಓದಿ : ರಾಜ್ಯ ಸರ್ಕಾರ ಐಸಿಯುನಲ್ಲಿ - ಕೆಕೆಆರ್​​ಡಿಬಿ ಕೋಮಾ ಸ್ಥಿತಿಯಲ್ಲಿ: ಪ್ರಿಯಾಂಕ್ ಖರ್ಗೆ ಲೇವಡಿ

ಭರಮಾ ಹಾಗೂ ಮಹಾವೀರ ಮಧ್ಯೆ ನಡುವಿನ  ಆಸ್ತಿ ವಿವಾದದ ಹಿನ್ನಲೆಯನ್ನು ಕೆದಕಿರುವ ಪೊಲೀಸರು ಆ ಮಗ್ಗಲಿನಲ್ಲೂ ಸಹ ತನಿಖೆ ಆರಂಭಸಿದ್ದಾರೆ. ಈಗಾಗಲೆ ಗೋಕಾಕ್ ಡಿ.ಎಸ್.ಪಿ ನೇತೃತ್ವದ ತಂಡ ರಚನೆ ಮಾಡಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಆರೋಪಿ ಬಂಧಿಸಲು ಪೊಲೀಸರ ಬಲೆ ಬಿಸಿದ್ದಾರೆ.

ಒಟ್ಟಿನಲ್ಲಿ ಮೇಲ್ನೋಟಕ್ಕೆ ಇದು ಆಸ್ತಿ ವ್ಯಾಜ್ಯ ಹಾಗೂ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿರುವ ಫೈರಿಂಗ್ ಎಂದು ತಿಳಿದುಬಂದಿದ್ದು ಪೊಲೀಸರ ತನಿಖೆಯ ನಂತವರಷ್ಟೆ ಪೈರಿಂಗ್ ಆಗಿರುವುದಕ್ಕೆ ನಿಖರ ಕಾರಣ ತಿಳಿದು ಬರಲಿದೆ.
Published by:G Hareeshkumar
First published: