Crime News: ಒಂಟಿ ಮಹಿಳೆಯ ಕೊಲೆ, ಪತ್ನಿ ಹುಡುಕಿಕೊಡಿ ಪತಿಯ ಮೊರೆ, ಇತ್ತ ಹೆಂಡ್ತಿಯನ್ನ ಕೊಂದ ಕಿರಾತಕ

ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದಿದ್ದಾನೆ. ಪ್ರೇಮಾ (25) ಕೊಲೆಯಾದ ಮಹಿಳೆ. ವೆಂಕಟೇಶಾಚಾರಿ ಕೊಲೆ ಮಾಡಿದ ಪಾಪಿ ಪತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಒಂಟಿ ಮಹಿಳೆಯ (Woman Murder) ಕೊಲೆಗೈದು, ದರೋಡೆ (Robbery) ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ಪಟ್ಟಣದ ಐಶ್ವರ್ಯ ಬಡಾವಣೆಯಲ್ಲಿ ನಡೆದಿದೆ.  ಅಂಚನಾ ತುಳಸಿಯಾನ (೫೭) ಕೊಲೆಯಾದ ದುರ್ದೈವಿ. ಖದೀಮರು ಮಹಿಳೆಯ ಕುತ್ತಿಗೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.ಕೊಲೆ ನಂತರ ಮನೆಯಲ್ಲಿದ್ದ 12 ಲಕ್ಷ ಮೌಲ್ಯದ ಚಿನ್ನಾಭರಣ (Gold Jwellery) ಮತ್ತು 4 ಲಕ್ಷ ನಗದು (Cash) ದೋಚಿರುವ ಮಾಹಿತಿ ಲಭ್ಯವಾಗಿದೆ. ಮನೆಯ ಇತರೆ ಸದಸ್ಯರು ಅಂಗಡಿಗೆ ಹೋಗಿದ್ದ ವೇಳೆ ಕಂಡು ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಪರಿಚಿತರೇ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನಾ  ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಂಡ ಮತ್ತು ಶ್ವಾನದಳದಿಂದಲೂ ಪರಿಶೀಲನೆ ನಡೆಸಲಾಗಿದೆ. ಪ್ರಕರಣ ಬೆಳಕಿಗೆ ಬಾರದಂತೆ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಹ ಹಂತಕರು ತೆಗೆದುಕೊಂಡು ಹೋಗಿದ್ದಾರೆ.

ಎಲ್ಲಾ ಆಯಾಮದಿಂದಲೂ ಪೊಲೀಸರ ತನಿಖೆ ಆರಂಭ

ಹಂತಕರು ನೇರವಾಗಿ ಲಾಕರ್ ತೆರೆದು ಚಿನ್ನಾಭರಣ ದೋಚರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:  Siddaramaiah: ಏ ಅದನ್ನ ತರಬೇಡಪ್ಪ, ಅದರಲ್ಲಿ ಹುಳು ಇರುತ್ತೆ: ಸಿದ್ದರಾಮಯ್ಯ

ಮೈಸೂರು: ಹಸುಗಳು ಬೆಂಕಿಗಾಹುತಿ

ದನದ ಕೊಟ್ಟಿಗೆಯಲ್ಲಿ ಮೂರು ಹಸುಗಳು ಬೆಂಕಿಗಾಹುತಿಯಾದ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಮುಳ್ಳೂರು ಗ್ರಾಮದ ಜಯಮ್ಮ ಎಂಬುವವರಿಗೆ ಸೇರಿದ ಹಸುಗಳು ಬೆಂಕಿಗಾಹುತಿಯಾಗಿವೆ.

ಕೂಲಿ ಕೆಲಸ ಮಾಡುತ್ತಿದ್ದ ಜಯಮ್ಮ ಅವರ ಕುಟುಂಬಕ್ಕೆ ಈ ಮೂರು ಹಸುಗಳು ಆಧಾರ ಸ್ಥ೦ಭವಾಗಿದ್ದವು. ನಿನ್ನೆ ರಾತ್ರಿ ಸೊಳ್ಳೆ ಓಡಿಸಲು ಬಾಂಡಲಿಯಲ್ಲಿ ಬೆಂಕಿ ಇಟ್ಟಿದ್ದರು. ಈ ಬೆಂಕಿಯ ಕಿಡಿ ಹುಲ್ಲಿಗೆ ತಗುಲಿದ ಪರಿಣಾಮ ಹಸುಗಳಿದ್ದ ಗುಡಿಸಲು ಹೊತ್ತಿ ಉರಿದಿದೆ. ಜೀವನಕ್ಕೆ ಆಧಾರವಾಗಿದ್ದ ಹಸುಗಳನ್ನು ಕಳೆದುಕೊಂಡ ಜಯಮ್ಮ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

ಆನೇಕಲ್: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದಿದ್ದಾನೆ. ಪ್ರೇಮಾ (25) ಕೊಲೆಯಾದ ಮಹಿಳೆ. ವೆಂಕಟೇಶಾಚಾರಿ ಕೊಲೆ ಮಾಡಿದ ಪಾಪಿ ಪತಿ. ಪ್ರೇಮಾ ಮತ್ತು ವೆಂಕಟೇಶಾಚಾರಿ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

ದಂಪತಿಗೆ ಏಳು ವರ್ಷದ ಮಗಳಿದ್ದಾಳೆ. ಆದ್ರೆ ದಂಪತಿ ನಡುವೆ ಅನೈತಿಕ ಸಂಬಂಧ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಪತ್ನಿ ಪ್ರೇಮಾ ಮೊಬೈಲ್ ನಲ್ಲಿ ಬೇರೊಬ್ಬನ ಜೊತೆ ಮಾತನಾಡುತ್ತಿದ್ರು. ಇದನ್ನ ಶುಕ್ರವಾರ ರಾತ್ರಿ ಕೇಳಿಸಿಕೊಂಡಿದ್ದಾನೆ.

ಇಂದು ಬೆಳಗ್ಗೆ ಸುಮಾರು 6 ಗಂಟೆಯ ಮಚ್ಚಿನಿಂದ ಕೊಲೆ ಮಾಡಿದ್ದಾನೆ.  ಕತ್ತು ಹಾಗೂ ಕೈ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಘಟನಾ ಸ್ಥಳಕ್ಕೆ ಆನೇಕಲ್ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪತ್ನಿಗಾಗಿ ಟ್ವಿಟರ್ ಮೊರೆ

ಪತ್ನಿಯನ್ನ ಹುಡುಕಿಕೊಡಿ‌ ಎಂದು ಪತಿಯೋರ್ವ ಟ್ವಿಟರ್ ಮೊರೆ ಹೋಗಿದ್ದಾನೆ.  ದೆಹಲಿ ನಿವಾಸಿ ಅರವಿಂದ್ ಎಂಬವರು ಬೆಂಗಳೂರು ಪೊಲೀಸರಿಗೆ ಪತ್ನಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಪತ್ನಿಯನ್ನು ವ್ಯಕ್ತಿಯೋರ್ವ ಬಲವಂತವಾಗಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾನೆ.

ಇದನ್ನೂ ಓದಿ:  Ramanagara: ವಿದ್ಯಾರ್ಥಿ ಮೇಲೆ ಸಬ್ ಇನ್ಸ್‌ಪೆಕ್ಟರ್‌ ಹಲ್ಲೆ; ಠಾಣೆಗೆ ಮುತ್ತಿಗೆಹಾಕಿ‌ ಪ್ರತಿಭಟನೆ, SP ಸ್ಪಷ್ಟನೆ

ನಾನು ಸಹ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದೇನೆ. ದಯವಿಟ್ಟು ಪತ್ನಿಯನ್ನು ಹುಡುಕಿ ಕೊಡಿ ಎಂದು ಟ್ವಿಟರ್ ಮೂಲದ ದೂರು ಸಲ್ಲಿಸಿದ್ದರು. ಇನ್ನೂ ಈ ಟ್ವೀಟ್ ಗೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವಂತೆ ಸೂಚಿಸಿದ್ದಾರೆ.

90 ಲಕ್ಷದ ಮಾದಕ ವಸ್ತು ವಶಕ್ಕೆ, ಮೂವರು ಅರೆಸ್ಟ್

ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸುಮಾರು 90 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಿತ್ರಾ, ಸೀತಾ, ಚಂದ್ರಶೇಖರ್ ಬಂಧಿತ ಆರೋಪಿಗಳು.

ಬಂಧಿತರಿಂದ 940 ಗ್ರಾಂ ಅಶಿಶ್ ಆಯಿಲ್ ಹಾಗೂ 10 ಕೆಜಿ ಗಾಂಜಾ 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಂನ ತುನಿ ಗ್ರಾಮದಿಂದ ಮಾದಕವಸ್ತು ತಂದು ಬೆಂಗಳೂರಿನ ಮಾಗಡಿ ರಸ್ತೆ ಬಳಿ ಮಾರಾಟ ಮಾಡುತ್ತಿರುವ ವೇಳೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರ ವಿರುದ್ಧ NDPS ಕಾಯ್ದೆಯಡಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Mahmadrafik K
First published: