• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru: 50 ವರ್ಷ ಇತಿಹಾಸವಿರುವ ದೇವಸ್ಥಾನದ ವಿಗ್ರಹಗಳನ್ನು ನಾಶಗೊಳಿಸಿದ ದುಷ್ಕರ್ಮಿಗಳು; ಭಕ್ತರಿಂದ ಪುಂಡರ ಬಂಧನಕ್ಕೆ ಆಕ್ರೋಶ

Bengaluru: 50 ವರ್ಷ ಇತಿಹಾಸವಿರುವ ದೇವಸ್ಥಾನದ ವಿಗ್ರಹಗಳನ್ನು ನಾಶಗೊಳಿಸಿದ ದುಷ್ಕರ್ಮಿಗಳು; ಭಕ್ತರಿಂದ ಪುಂಡರ ಬಂಧನಕ್ಕೆ ಆಕ್ರೋಶ

ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

ಬೆಂಗಳೂರಿನ ಬಾಪೂಜಿನಗರದ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ, ಸುಮಾರು 50 ವರ್ಷಗಳಿಂದಲೂ ಇರುವ ದೇವರು ಹಾಗೂ ನಾಗರಕಲ್ಲುಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿ, ಅಲ್ಲಿದ್ದ ವಿಗ್ರಹವನ್ನೂ ಕಿತ್ತಾಕಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಅದು ದಿನನಿತ್ಯ ಜನರು ಪೂಜಿಸುವ ನಾಗರ ಕಲ್ಲುಗಳು (Nagara Kallu), ಸುಮಾರು 50 ವರ್ಷಗಳಿಂದಲೂ ಈ ದೇವಾಲಯದಲ್ಲಿ (Temple) ಭಕ್ತರು (Devotees) ಬಂದು ಪೂಜೆ ಮಾಡಿ ಹೋಗುತ್ತಿದ್ದರು. ಆದರೆ ಶುಕ್ರವಾರ ಸಂಜೆ ಬಂದವರಿಗೆ ಅಲ್ಲಿ ಶಾಕ್ ಕಾದಿತ್ತು. ಹೌದು, ಇದು ನಿತ್ಯವೂ (Daily) ಹಲವು ಮಂದಿ ಬಂದು ನಮ್ಮ ಪಾಪ ಕಳಿಯಪ್ಪಾ, ದೋಷ ಏನಾದರೂ ಇದ್ದರೆ ಸರಿ ಮಾಡಪ್ಪ ಅಂತ ಬೇಡಿಕೊಳ್ಳುವ ಜಾಗ. ಹಿಂದೂಗಳು (Hindu) ಭಯ-ಭಕ್ತಿಯಿಂದ ಪೂಜೆ ಸಲ್ಲಿಸುವ ದೇವರು (God) ಹಾಗೂ ನಾಗರಕಲ್ಲುಗಳು. ಇಂತಹ ಜಾಗದಲ್ಲಿ ಯಾರೂ ಊಹಿಸಿರದ ಘಟನೆ ನಡೆದಿದ್ದು, ಭಕ್ತರು ಬೇಸರಗೊಂಡಿದ್ದಾರೆ.


ವಿಗ್ರಹಗಳನ್ನು ಕಿತ್ತು ಹಾಕಿ ಆಕ್ರೋಶ


ಬೆಂಗಳೂರಿನ ಬಾಪೂಜಿನಗರದ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ, ಸುಮಾರು 50 ವರ್ಷಗಳಿಂದಲೂ ಇರುವ ದೇವರು ಹಾಗೂ ನಾಗರಕಲ್ಲುಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿ, ಅಲ್ಲಿದ್ದ ವಿಗ್ರಹವನ್ನೂ ಕಿತ್ತಾಕಿದ್ದಾರೆ. ಸಂಜೆ 6 ಗಂಟೆಯ ಪೂಜಾ ಸಮಯಕ್ಕೆ ದೇವಾಲಯದ ಅರ್ಚಕರು ಬಂದಾಗ ವಿಗ್ರಹಗಳು ಒಡೆದ ಸ್ಥಿತಿಯಲ್ಲಿವೆ. ಕೂಡಲೇ ದೇವಾಲಯದವರು ಪೊಲೀಸರಿಗೆ ತಿಳಿಸಿದ್ದಾರೆ.


ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು


ಇದನ್ನೂ ಓದಿ:  DK Shivakumar: ಸಿ ಟಿ ರವಿ ವಿರುದ್ಧ ಮೊಕದ್ದಮೆ ಹೂಡಲು ಡಿಕೆ ಶಿವಕುಮಾರ್​ ನಿರ್ಧಾರ!


ಹಿಂದೂಗಳು ಬರಲೇ ಬಾರದು ಅಂತ ಕೃತ್ಯ 


ಘಟನೆ ಕುರಿತಂತೆ ಮಾಹಿತಿ ನೀಡಿರುವ ದೇವಾಲಯದ ಟ್ರಸ್ಟಿ ರವಿ ಕುಮಾರ್ ಅವರು, ದೇವಾಲಯಕ್ಕೆ 50 ಇತಿಹಾಸವಿದ್ದು, ಉದ್ದೇಶ ಪೂರ್ವಕವಾಗಿಯೇ ವಿಗ್ರಹಗಳನ್ನು ಧ್ವಂಸ ಮಾಡುವ ಕಾರ್ಯ ಮಾಡಿದ್ದಾರೆ. ಈ ಭಾಗದಲ್ಲಿ ಹಿಂದೂಗಳು ಬರಲೇಬಾರದು ಎಂಬ ಉದ್ದೇಶದಿಂದ ಪದೇ ಪದೇ ಈ ರೀತಿ ಮಾಡುತ್ತಿದ್ದಾರೆ.


ಈ ಹಿಂದೆ ಕೂಡ ಇಂತಹ ಘಟನೆ ನಡೆದ ಸಂದರ್ಭದಲ್ಲಿ ಸಿಸಿಟಿವಿ ಅವಳಡಿಸಿದ್ದೆವು, ಆದರೆ ಅವುಗಳನ್ನು ಕೂಡ ಅವರು ಧ್ವಂಸ ಮಾಡಿದ್ದರು. ನಮಗೆ ತಾತ್ಕಾಲಿಕ ಪರಿಹಾರ ನೀಡಲು ಮಾಡುತ್ತಿದ್ದಾರೆ. ಶಾಶ್ವತ ಪರಿಹಾರ ಸಿಗುತ್ತಿಲ್ಲ. ಮೊದಲು ಇದೇ ರೀತಿ ಮಾಡಿದ್ದರು, ಆಗ ವಿಗ್ರಹ ಬದಲಾವಣೆ ಮಾಡಿ ಹೋಮ-ಯಾಗ ಕೂಡ ಮಾಡಿದ್ದೇವು ಎಂದು ತಿಳಿಸಿದ್ದಾರೆ.


ರಿಸರ್ವ್ ಪೊಲೀಸರನ್ನು ನಿಯೋಜನೆ ಮಾಡಬೇಕೆಂದು ಒತ್ತಾಯ


ಘಟನೆ ಬಳಿಕ ದೇಗುಲ ಬಳಿ ಕಾವಲಿಗೆ ಪೊಲೀಸರನ್ನು ನೇಮಿಸಲಾಗಿದ್ದು, ಪುಂಡರನ್ನು ಹುಡುಕಲು ಕಾರ್ಯಾಚರಣೆ ನಡೆಸಿದ್ದಾರೆ. ಈ ಹಿಂದೆಯೂ ಇದೇ ರೀತಿ ದೇಗುಲದಲ್ಲಿ ಆಗಿತ್ತು. ಮತ್ತೆ ಹೀಗೆ ಆಗಿರುವುದರಿಂದ ಸ್ಥಳೀಯರು ನಮಗೆ ರಿಸರ್ವ್ ಪೊಲೀಸರನ್ನು ನಿಯೋಜನೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಇದುವರೆಗೂ ವಿಗ್ರಹಗಳನ್ನು ಒಡೆದು ಹಾಕಿರುವುದು ಯಾರು ಅಂತ ತಿಳಿದು ಬಂದಿಲ್ಲ. ಮತ್ತೆ ಇದು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಸ್ಥಳೀಯರು, ಭಕ್ತರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: Tirumala: ಏಪ್ರಿಲ್​​​ನಲ್ಲಿ ತಿರುಪತಿಗೆ ಹೋಗುತ್ತಿದ್ದೀರಾ? ಹಾಗಾದರೆ ನೀವು ಈ ಸುದ್ದಿಯನ್ನು ಓದಲೇಬೇಕು!


ಮನೆ ಕಾಮಗಾರಿ ವೇಳೆ ಮೂವರು ಕಾರ್ಮಿಕರ ದುರ್ಮರಣ


ಮನೆ ಕಾಮಗಾರಿ ನಡೆಯುತ್ತಿದ್ದ ವೇಳೆ ತಡೆಗೋಡೆ ಕುಸಿದು ಬಿದ್ದು, ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರ ಎಂಬಲ್ಲಿ ನಡೆದಿದೆ.


ಅಬುಬಕ್ಕರ್ ಎಂಬುವರಿಗೆ ಸೇರಿದ ಮನೆಯ ಕೊಟ್ಟಿಗೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಪಿಲ್ಲರ್ ನಿರ್ಮಾಣ ಮಾಡ್ತಿದ್ದ ವೇಳೆ ತಡೆಗೋಡೆ ಕುಸಿದು ಬಿದ್ದಿದ್ದು, 45 ವರ್ಷದ ಸೋಮಶೇಖರ್, 40 ವರ್ಷದ ಶಾಂತ, ಇನ್ನೋರ್ವ ಕಾರ್ಮಿಕ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಶಾಸಕ, ಸಚಿವ ಎಸ್ ಅಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

First published: