ಪಿ.ಜಿಗೆ ತೆರಳುತ್ತಿದ್ದ ಹುಡುಗಿಯನ್ನ ಎಳೆದಾಡಿ ಹಿಂಸಿಸಿದ ಕಾಮುಕರು: ಬೆಚ್ಚಿಬಿದ್ದ ಸಿಲಿಕಾನ್ ಸಿಟಿ


Updated:March 21, 2018, 10:55 PM IST
ಪಿ.ಜಿಗೆ ತೆರಳುತ್ತಿದ್ದ ಹುಡುಗಿಯನ್ನ ಎಳೆದಾಡಿ ಹಿಂಸಿಸಿದ ಕಾಮುಕರು: ಬೆಚ್ಚಿಬಿದ್ದ ಸಿಲಿಕಾನ್ ಸಿಟಿ
  • Share this:
-ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.21): ಸಿಲಿಕಾನ್ ಸಿಟಿ ಹೆಣ್ಮಕ್ಕಳಿಗೆ ಸೇಫ್ ಅಲ್ಲ. ಇಂಥದೊಂದು ಮಾತು ಪದೇ ಪದೇ ಏಳಲಾರಂಭಿಸಿದೆ. ಯಾಕಂದ್ರೆ, ಪಿ.ಜಿಗೆ ಹೋಗುತ್ತಿದ್ದ ಯುವತಿಯನ್ನು ಎಳೆದಾಡಿ ಕಾಮುಕರು ವಿಕೃತಿ ಮೆರೆದಿದ್ದಾರೆ.

ಹೌದು, ಅಮೃತಹಳ್ಳಿ ಬಳಿಯ ಪಂಪಾ ಲೇಔಟ್‌ನಲ್ಲಿ ಪಿಜಿಗೆ ಹೋಗುತ್ತಿದ್ದಾಗ ಯುವತಿಯನ್ನು ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಕಿಡಿಗೇಡಿಗಳು, ಎಳೆದಾಡಿ ವಿಕೃತಿ ಮೆರೆದಿದ್ದಾರೆ. ಇನ್ನು ಕಾಮುಕರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಮೃತಹಳ್ಳಿ ಸುತ್ತಮುತ್ತ ಲೇಡಿಸ್ ಪಿಜಿಗಳೆ ಹೆಚ್ಚಾಗಿವೆ. ಇಲ್ಲಿ ಪ್ರತಿನಿತ್ಯ ಉತ್ತರ ಭಾರತದಿಂದ ಬರುವ ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡುವ ಕಾಮುಕರು ನೀಚ ಕೃತ್ಯ ಎಸಗುತ್ತಿದ್ದಾರೆ. ಪೊಲೀಸರು ಸರಿಯಾಗಿ ರಾತ್ರಿ ಸಮಯದಲ್ಲಿ ಬೀಟ್ ನಡೆಸುತ್ತಿಲ್ಲ. ಹೀಗಾಗಿ, ವಿಕೃತಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.

ಸದ್ಯ, ನೊಂದ ಯುವತಿ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು,ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 
First published:March 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading