• Home
  • »
  • News
  • »
  • state
  • »
  • Davanagere: ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ ಧರ್ಮದೇಟು

Davanagere: ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ ಧರ್ಮದೇಟು

ಶಿಕ್ಷಕ ಲೋಕೇಶ್

ಶಿಕ್ಷಕ ಲೋಕೇಶ್

ಕಳೆದ ಕೆಲವು ದಿನಗಳಿಂದ ಶಿಕ್ಷಕ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದ ಎಂದು ವರದಿಯಾಗಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • Share this:

ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ (Students) ಲೈಂಗಿಕ ಕಿರುಕುಳ (Sexual Harassment)  ನೀಡಿದ ಆರೋಪದಡಿ ಶಿಕ್ಷಕನೋರ್ವನಿಗೆ ಧರ್ಮದೇಟು ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ (Channagiri, Davanagere) ತಾಲೂಕಿನ ಯರಗಟ್ಟೆಹಳ್ಳಿ (Yaragattehalli) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ (Primary School Teacher) ಲೋಕೇಶ್ ಗೆ ಗ್ರಾಮಸ್ಥರು ಥಳಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕ ಲೋಕೇಶ್ ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡಿರುವ ಬಗ್ಗೆ  ಮಕ್ಕಳು (Children) ಪೋಷಕರಿಗೆ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಶಿಕ್ಷಕ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದ ಎಂದು ವರದಿಯಾಗಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಂಚನೆ ಪ್ರಕಣದಲ್ಲಿ ಬೆಂಗಳೂರು ಮೂಲದ ಗಿರೀಶ್ ಎಂಬಾತನನ್ನು ಬಂಧಿಸಲಾಗಿದ್ದ, ಮತ್ತೊಬ್ಬನಿಗೆ ಶೋಧ ಕಾರ್ಯ ಮುಂದುವರಿದಿದೆ. ಕೇರಳ, ವಯನಾಡು ಮೂಲದ ಮುರುಳಿಧರ್ ಎಂಬುವರಿಗೆ  ಬ್ರಿಟಿಷರ ಕಾಲದ ಚಿನ್ನ ಎಂದು ಹೇಳಿ 30 ಲಕ್ಷ ರೂಪಾಯಿ ವಂಚಿಸಿದ್ದರು.


ದಾವಣಗೆರೆ ಭಾಗದಲ್ಲಿ ನಕಲಿ ಚಿನ್ನದ ವಂಚನೆ (Gold Cheating Case) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗ್ತಿದೆ. ಜಿಲ್ಲೆಯ ಗಾಂಧಿನಗರ, ಸಂತೆಬೆನ್ನೂರು, ಚನ್ನಗಿರಿ ಸೇರಿ ಅನೇಕ ಕಡೆ ವಂಚನೆ ಪ್ರಕರಣ ದಾಖಲಾಗಿವೆ. 22 ಲಕ್ಷ ಹಣ ಒಬ್ಬ ಆರೋಪಿಯನ್ನು ಡಿಸಿಆರ್​ಬಿ ಪೊಲೀಸರು ಬಂಧಿಸಿದ್ದಾರೆ.


ಟ್ರ್ಯಾಕ್ಟರ್ ಪಲ್ಟಿ, ಆರು ಸಾವು


ಟ್ರಾಕ್ಟರ್ ಪಲ್ಟಿಯಾಗಿ (Tractor Overturn Accident) ಓರ್ವ ಸಾವನ್ನಪ್ಪಿ 6 ಜನರು ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯಲ್ಲಿ ನಡೆದಿದೆ. ಭತ್ತದ ಗದ್ದೆಗೆ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ. ಭದ್ರಾವತಿ ತಾಲೂಕಿನ ಚಂದನಕೇರೆ ಗ್ರಾಮದ ಯಶವಂತರಾವ್ (39) ಮೃತ ದುರ್ದೈವಿ.


ಹಾಳಾದ ಅಡಿಕೆ ಮರಗಳನ್ನ ಕಡೆಯಲು ಕೂಲಿ ಕಾರ್ಮಿಕರೊಂದಿಗೆ ಯಶವಂತರಾಯ್ ಬಂದಿದ್ದರು. ಈ ವೇಳೆ ಅಡಿಕೆ ಮರ ಕಡಿದು ವಾಪಸ್ ಸಾಗಿಸುತ್ತಿದ್ದಾಗ ಗದ್ದೆಗೆ ಟ್ರ್ಯಾಕ್ಟರ್ ಅಪಘಾತಕ್ಕೆ ಒಳಗಾಗಿದೆ.


ಇದನ್ನೂ ಓದಿ:  Hubballi: ಗಂಡನ ಕೊಲೆ, ಹೆಂಡತಿಯ ಆತ್ಮಹತ್ಯೆ, ತಬ್ಬಲಿಯಾದ ಮಕ್ಕಳು; ಪ್ರೇಮಿಗಳ ದುರಂತ ಅಂತ್ಯ


ರಾಯಚೂರು: ವಿದ್ಯಾರ್ಥಿನಿ ಆತ್ಮಹತ್ಯೆ


ಗಣೇಶ ವಿಸರ್ಜನೆ ಮಾಡಿದ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ (Student Death) ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಸಿಂಧನೂರಿನ ಸರ್ವೋದಯ ಶಾಲೆಯ ವಿದ್ಯಾರ್ಥಿನಿ (Navodaya School Student) ಸಾರಿಕಾ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಇಂದು ಬೆಳಗ್ಗೆ ಸುಮಾರು 9.30ಕ್ಕೆ ಕೆರೆಯಲ್ಲಿ ಶವ ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


ಮನೆ ಕುಸಿದು ವೃದ್ಧ ಸಾವು


ರಾಯಚೂರು ಜಿಲ್ಲೆ ವಿವಿಧೆಡೆ ಭಾರೀ ಮಳೆಯಾಗ್ತಿದೆ (Raichur Heavy Rainfall). ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಿರಂತರ ಮಳೆಗೆ ಮನೆ ಕುಸಿದು ವೃದ್ಧ ಸಾವನ್ನಪ್ಪಿದ್ದಾನೆ. ಬಳಗಾನೂರ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ರು. ರಾಯಚೂರು ಜಿಲ್ಲೆಯ ಯರಗೇರಾ ಸುತ್ತಮುತ್ತಲಿನ ಗ್ರಾಮದ ರೈತರು ಮಳೆಗೆ ನಲುಗಿ ಹೋಗಿದ್ದಾರೆ. ಗುಜ್ಜಳ್ಳಿ ಗ್ರಾಮದ ಕೆರೆ ಭರ್ತಿಯಾಗಿದ್ದು, ರೈತರ ಜಮೀನಿನಲ್ಲಿ ಹಳ್ಳದಂತೆ ನೀರು ಹರಿದು ಹೋಗುತ್ತಿದೆ.


ಇದನ್ನೂ ಓದಿ:  SM Krishna: ಮಾಜಿ ಸಿಎಂ ಎಸ್ಎಂ ಕೃಷ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್


ಮಳೆಗೆ 100ಕ್ಕೂ ಹೆಚ್ಚು ಕುರಿಗಳ ಸಾವು


ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ (Hubballi Rains) ಗೋಡೌನ್​ನಲ್ಲಿ ಬಿಡಲಾಗಿದ್ದ 100ಕ್ಕೂ ಹೆಚ್ಚು ಕುರಿಗಳು (Sheeps) ಸಾವನ್ನಪ್ಪಿವೆ. ಹುಬ್ಬಳ್ಳಿಯ ಮಟನ್ ಮಾರ್ಕೆಟ್ ನಲ್ಲಿರುವ ಗೋಡೌನ್​ನಲ್ಲಿ ಘಟನೆ ನಡೆದಿದೆ. ಕುರಿಗಳ ಸಾವಿನ ಸುದ್ದಿ ತಿಳಿದು ಮಾಲೀಕರು ಕಣ್ಣೀರು ಹಾಕಿದ್ದಾರೆ.

Published by:Mahmadrafik K
First published: