• Home
 • »
 • News
 • »
 • state
 • »
 • Miracle: ಅನಂತಶಯನನ ಪಾದದಡಿ ಉದ್ಭವಿಸುತ್ತಾಳೆ ಗಂಗೆ! ಲಕ್ಷ್ಮೀವೆಂಕಟೇಶ್ವರನ ಪವಾಡಕ್ಕೆ ಕೈಮುಗಿದ ಭಕ್ತರು

Miracle: ಅನಂತಶಯನನ ಪಾದದಡಿ ಉದ್ಭವಿಸುತ್ತಾಳೆ ಗಂಗೆ! ಲಕ್ಷ್ಮೀವೆಂಕಟೇಶ್ವರನ ಪವಾಡಕ್ಕೆ ಕೈಮುಗಿದ ಭಕ್ತರು

ಅನಂತಶಯನನ ಪಾದ ಸ್ಪರ್ಶಿಸಿರುವ ಗಂಗೆ

ಅನಂತಶಯನನ ಪಾದ ಸ್ಪರ್ಶಿಸಿರುವ ಗಂಗೆ

ಪ್ರತಿ ವರ್ಷ ಶ್ರಾವಣ ಮಾಸ ಮತ್ತು  ಭಾದ್ರಪದ ಮಾಸದಲ್ಲಿ ದೇಗುಲದ ಸುತ್ತಲೂ ಜಲ ಸಿಂಚನವಾಗುತ್ತದೆ. ವರ್ಷದಲ್ಲಿ ಎರಡು ಬಾರೀ ದೇಗುಲದಲ್ಲಿರುವ ಮುಖ್ಯ ವಿಗ್ರಹದ ಪಾದ ಸ್ಪರ್ಶಿಸುವ ಜಲಧಾರೆ, ಶೂನ್ಯದಿಂದ ಜಲೋದ್ಭವವಾಗುವುದು ಕೂಡಾ ಇಲ್ಲಿ ನಿಗೂಢವಾಗಿದೆ ಮತ್ತು ವಿಸ್ಮಯಕ್ಕೆ ಸಾಕ್ಷಿಯಾಗಿದೆ.

ಮುಂದೆ ಓದಿ ...
 • Share this:

  ಬೀದರ್: ಅದು ಐತಿಹಾಸಿಕ ದೇವಾಲಯ (Historical Temple). ಆ ದೇವಾಲಯದಲ್ಲಿ ವರ್ಷದ ಎರಡು ಬಾರಿಯಲ್ಲಿ ಗಂಗೆಯ ಸಿಂಚನ ಸೃಷ್ಟಿಯಾಗುತ್ತದೆ. ಸ್ವತಃ ಗಂಗಾ ಮಾತೆಯೇ (Ganga Mata) ಧರೆಗಿಳಿದು ಬಂದು ಶ್ರೀ ವಿಷ್ಣುವಿನ (God Sri Vishnu) ಪಾದ ಸ್ಪರ್ಶ (foot touch) ಮಾಡುವ ವಿಸ್ಮಯಕಾರಿ ಘಟನೆ ನಡೆಯುತ್ತದೆ. ವಿಷ್ಣುವಿನ ಪಾದ ಸ್ಪರ್ಶ ಮಾಡಲು ಗಂಗೆಯು ಎಲ್ಲಿಂದ ಬರುತ್ತಾಳೆ ಅನ್ನೊದೇ ಇಲ್ಲಿ ನಿಗೂಢವಾಗಿದೆ. ಈ ಪವಾಡ (Miracle), ವಿಸ್ಮಯ ಘಟನೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಕಿಲೊಮೀಟರ್‌ ದೂರದಿಂದ ಭಕ್ತರು (Devotees) ಬಂದು ನೊಡಿಕೊಂಡು ಹೋಗುತ್ತಾರೆ. ಸರಿ ಸುಮಾರು 400 ವರ್ಷ ಪುರಾತನ ದೇಗುಲದಲ್ಲಿ ನಡೆಯುತ್ತೆ ಈ ವಿಸ್ಮಯಕಾರಿ ಘಟನೆ. ಇಲ್ಲಿ ಸ್ವತಃ ಗಂಗಾಮಾತೆಯೇ ಧರೆಗಿಳಿದು ಬಂದು ವಿಷ್ಣುವಿನ ಪಾದ ಸ್ಪರ್ಶ ಮಾಡುತ್ತಾಳೆ ಅಂತ ನಂಬಲಾಗುತ್ತದೆ.


  ವರ್ಷದಲ್ಲಿ ಎರಡು ಬಾರಿ ವಿಸ್ಮಯಕ್ಕೆ ಸಾಕ್ಷಿಯಾಗುವ ದೇಗುಲ


  ಪ್ರತಿ ವರ್ಷ ಶ್ರಾವಣ ಮಾಸ ಮತ್ತು ಬಾದ್ರಪದ ಮಾಸದಲ್ಲಿ ದೇಗುಲದ ಸುತ್ತಲು ಜಲ ಸಿಂಚನವಾಗುತ್ತದೆ. ಎರಡು ಬಾರೀ ದೇಗುಲದಲ್ಲಿರುವ ಮುಖ್ಯ ವಿಗ್ರಹದ ಪಾದಕ್ಕೆ ನೀರಿನ ಸ್ಪರ್ಶ ಆಗುತ್ತದೆ. ಬೀದರ್‌ ತಾಲೂಕಿನ ಓಡವಾಡ ಗ್ರಾಮದ ಹೊರವಲಯದಲ್ಲಿರುವ ಅನಂತ ಶಯನ ಲಕ್ಷ್ಮೀವೆಂಕಟೇಶ್ವರನ ಐತಿಹಾಸಿಕ ದೇಗುಲದಲ್ಲಿ ಇಂಥದ್ದೊಂದು ಪವಾಡ ನಡೆಯುತ್ತದೆ.


  ದೇಗುಲದೊಳಗೆ ವಿಸ್ಮಯ


  ಅನಂತಶಯನನ ಪಾದದ ಬಳಿ ಗಂಗೆ ಉದ್ಙವ


  ಕಲ್ಯಾಣ ಕರ್ನಾಟಕ ಬಾಗದ ಈ ಐತಿಹಾಸಿಕ ದೇಗುಲ ದೇಗುಲಕ್ಕೆ ಗಂಗಾ ಮಾತೇಯೆ ಬಂದು ಹೋಗುತ್ತಾಳೆ. ಶಿವನ ಶಿರದಲ್ಲಿ ಗಂಗೆ ಉಕ್ಕಿದಹಾಗೆ ಅನಂತ ಶಯನ ದೇವಸ್ಥಾನದ ಗರ್ಭಗುಡಿಯಲ್ಲಿ ಗಂಗೆಯು ಉಕ್ಕುತ್ತಿದ್ದಾಳೆ. ಹೀಗೆ ಭೂಮಿಯಿಂದ ಗಂಗೆ ಬರುತ್ತಿರುವುದು ಒಂದೆಡೆಯಾದ್ರೆ ಮತ್ತೊಂದೆಡೆ ಭಕ್ತರಿಗೆ ಪವಿತ್ರ ತೀರ್ಥಪ್ರಸಾದವಾಗಿದೆ.


  ದೇಗುಲದೊಳಗೆ ಗಂಗೋದ್ಭವ


  ಇದನ್ನೂ ಓದಿ:  Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ರಾಮಲಿಂಗೇಶ್ವರನ ಮಹಿಮೆ ಅಪಾರ


  ಈ ಬಾರಿ ಮೊದಲೇ ಗಂಗೆಯ ಉದ್ಭವ


  ಪ್ರತಿ ವರ್ಷ ಶ್ರಾವಣ ಮಾಸ ಮತ್ತು  ಭಾದ್ರಪದ ಮಾಸದಲ್ಲಿ ದೇಗುಲದ ಸುತ್ತಲು ಜಲ ಸಿಂಚನವಾಗುತ್ತದೆ ವರ್ಷದಲ್ಲಿ ಎರಡು ಬಾರೀ ದೇಗುಲದಲ್ಲಿರುವ ಮುಖ್ಯ ವಿಗ್ರಹದ ಪಾದ ಸ್ಪರ್ಶಿಸುವ ಜಲಧಾರೆ, ಶೂನ್ಯದಿಂದ ಜಲೋದ್ಭವವಾಗುವುದು ಕೂಡಾ ಇಲ್ಲಿ ನಿಗೂಢವಾಗಿದೆ ಮತ್ತು ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಈ ಬಾರೀ ಶ್ರಾವಣಕ್ಕೂ ಮುನ್ನವೇ ಜಲಧಾರೆಯ ಸಿಂಚಲನವಾಗಿದೆ.  ಶ್ರಾವಣ ಮಾಸ ಇನ್ನು ಒಂದು ವಾರವಿರುವಾಗಲೇ ಜರುಗಿದ ವಿಸ್ಮಯ ವಾಗಿದ್ದು ಅಪರೂಪದ ಘಟನೆಯಿಂದ ಪುಳಕಿತರಾಗುತ್ತಿರುವ ಸಾವಿರಾರೂ ಭಕ್ತ ಗಣ. ವಿಶಿಷ್ಠ ಘಟನೆಯನ್ನ ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಭಕ್ತರ ಇಲ್ಲಿಗೆ  ಆಗಮಿಸುತ್ತಾರೆ.


  ದೇಗುಲದ ಹೊರನೋಟ


  ಇನ್ನು  ಭಕ್ತರ ದಂಡೇ ಹರಿದು ಬರುತ್ತಿರುವುದು ದೇಗುಲದಲ್ಲಿನ ವಿಸ್ಮಯಕ್ಕೆ ಸಾಕ್ಷಿ ಎನ್ನುವಂತಿದೆ. ದರ್ಶನಕ್ಕೆ ಬಂದ ಜನರು ಈ ನೀರನ್ನು ತೀರ್ಥದಂತೆ ಕುಡಿಯುತ್ತಾರೆ, ಮತ್ತು ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಅದನ್ನು  ಮನೆ ಮಂದಿಗೆಲ್ಲ ಕೊಟ್ಟು ರೋಗದಿಂದ ದೂರವಾಗುತ್ತಾರೆ. ಆದ್ರೆ ಅನಂತ ಶಯನ ದೇಗುಲದಲ್ಲಿ ಈ  ನೀರು ಎಲ್ಲಿಂದ ಬರುತ್ತದೆ ಎಂಬುದು ಕೂಡಾ ಇಲ್ಲಿಯ ವರೆಗೆ ಯಾರಿಗೆ ತಿಳಿದಿಲ್ಲ. ಹೀಗಾಗಿ ಇದನ್ನು ಅನಂತ ಶಯನ ಪವಾಡವೆ ಎಂದು ಇಲ್ಲಿನ ಜನ್ರು ತಿಳಿದಿದ್ದಾರೆ.


  ದೇಗುಲದ ಒಳನೋಟ


  ವಿಸ್ಮಯ ಕಣ್ತುಂಬಿಕೊಂಡ ಭಕ್ತರು


  ಗರ್ಭಗುಡಿಯಲ್ಲಿ ಒಳಗಿನಿಂದ ಬರುವ ಗಂಗೆಯು ನೂರಾರು ವರ್ಷಗಳಿಂದ ಅನಂತ ಶಯನ ದೇವಾಲಯದಲ್ಲಿ ಬರುವುದನ್ನು ನಾವುಗಳು ನೊಡಿಕೊಂಡು ಬಂದಿರುತ್ತವೆ ಮತ್ತು ಅನಂತ ಶಯನ ದೇಗುಲ ಧರ್ಶನ ಮಾಡಿದ್ರೆ ನಾವು ಅಂದುಕೊಂಡು ಕೆಲಸ ಕಾರ್ಯಗಳು ಇಡೆರುತ್ತವೆ. ದರ್ಶನ ಪಡೆದ ನಂತರ ಮನಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ ಎನ್ನುತಾರೆ ಇಲ್ಲಿನ ಭಕ್ತರು.


  ಐತಿಹಾಸಿಕ ದೇಗುಲ


  ಇದನ್ನೂ ಓದಿ: Gokak Falls KSRTC Offer: ಗೋಕಾಕ ಫಾಲ್ಸ್​ಗೆ ಇಷ್ಟು ಕಡಿಮೆ ಹಣಕ್ಕೆ ಟ್ರಿಪ್! ನೀವು ಹೋಗಿಬನ್ನಿ


  ಕಲ್ಯಾಣ ಕರ್ನಾಟಕ ಬಾಗದಲ್ಲಿ ಅದೆಷ್ಟೋ ದೇವಾಲಯಗಳು ಐತಿಹಾಸಿಕ ಪ್ರಸಿದ್ದಿಯನ್ನು ಹೊಂದಿವೆ ಮತ್ತು ದೇವಾಲಯಗಳಲ್ಲಿ ಪವಾಡಗಳು ನಡೆಯುತ್ತಲೇ ಇರುತ್ತವೆ. ಇಂತಹ ಅನೇಕ ದೇವಾಲಯಗಳ ಬಗ್ಗೆ ದೇವಾಲಯಗಳು ಕೇಲವು ಜನರಿಗೆ ಇನ್ನೂ ಗೊತ್ತಿಲ್ಲ.


  (ವರದಿ: ಚಮನ್‌ ಹೊಸಮನಿ,  ನ್ಯೂಸ್‌ 18 ಕನ್ನಡ, ಬೀದರ್)

  Published by:Annappa Achari
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು