ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ: MP Renukacharya

ಹಗರಣದಲ್ಲಿ ಯಾರಿದ್ದಾರೆ ಹೆಸರು ಬಹಿರಂಗಪಡಿಸಿ. ಅಧಿವೇಶನದಲ್ಲಿ ಚರ್ಚೆಗೆ ಬರ್ತೀರಾ, ಬನ್ನಿ ಉತ್ತರ ಕೊಡ್ತೀವಿ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಹೇಳಲು ಹೆಸರಿಲ್ಲದಂತಾಗಿದೆ. ರಾಜ್ಯದಲ್ಲೂ ಇದೇ ಪರಿಸ್ಥಿತಿ ಕಾಂಗ್ರೆಸ್ಸಿಗೆ ಇದೆ. ವಿಧಾನಪರಿಷತ್ ಚುನಾವಣೆಗೆ ಜೀವಂತವಾಗಿ ಇಡಲು ಈ ರೀತಿ ಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಎಂಪಿ ರೇಣುಕಾಚಾರ್ಯ

ಎಂಪಿ ರೇಣುಕಾಚಾರ್ಯ

 • Share this:
  ಬೆಂಗಳೂರು: ನಿನ್ನೆ ಕಾಂಗ್ರೆಸ್ ಅಲ್ಪ ಸಂಖ್ಯಾತರ ಅಧ್ಯಕ್ಷ ನೇಮಕವಾಗಿದೆ. ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕ ಜಮೀರ್ ಅಹ್ಮದ್ (Congress MLA Zameer) ಅವರನ್ನು ಆಹ್ವಾನ ಮಾಡಿರಲಿಲ್ಲ ಅಂತ ಗಲಾಟೆ ಆಗಿದೆ. ಕಾಂಗ್ರೆಸ್ ನವರು ಈವರೆಗೂ ಹೇಳ್ತಿದ್ರು, ನಾವು ಅಲ್ಪ ಸಂಖ್ಯಾತರ (Minority Community) ಉದ್ದಾರಕರು ಅಂತ. ಆದರೆ ಅಲ್ಪಸಂಖ್ಯಾತರನ್ನು Use And Throw ತರ ಬಳಸಿ ಬಿಸಾಕಿದ್ದಾರೆ. ಇದನ್ನ ಅಲ್ಪ ಸಂಖ್ಯಾತರು ಅರ್ಥ ಮಾಡಿಕೊಳ್ಳಬೇಕು ಅಂತ ಮನವಿ ಮಾಡ್ತೀನಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ (MP Renukacharya) ಹೇಳಿದರು.

  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಎಲ್ಲೂ ಗಲಾಟೆ ಆಗಿಲ್ಲ. ಕೆಲವು ಘಟನೆ ಹೊರತುಪಡಿಸಿದರೆ, ಗಂಭೀರ ಪ್ರಕರಣ ಆಗಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನವರು ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಅಗ್ರಗಣ್ಯ ನಾಯಕಿ ಸೋನಿಯಾ, ಎರಡು ಬಾರಿ ಸೋತರೂ ಅಗ್ರಗಣ್ಯ ನಾಯಕಿಯಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಬಿಜೆಪಿ ಅವರ ಕಾಲೋನಿ, ಮಸೀದಿ, ಖಬರಿಸ್ತಾನ್ ಅಭಿವೃದ್ಧಿ ಮಾಡಿದೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಅಂಬೇಡ್ಕರ್ ಅಂತ ಹೇಳಿ, ಅವರನ್ನೇ ಸೋಲಿಸಿದರು. ಅಂಬೇಡ್ಕರ್ ಸೋಲಿಸಿದ್ದು ಗೊತ್ತಾದ ಬಳಿಕ ಕಾಂಗ್ರೆಸ್ ಕಡೆಗಣಿಸುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತ ಹೇಳಿದ್ದೇವೆ. ಅದರಂತೆ ನಡೆಯುತ್ತಿದ್ದೇವೆ. ನಿನ್ನೆ ಬಂದಿದ್ದ ಇಮ್ರಾನ್ ಪಾಷ, ನಾವು ಟಿಪ್ಪು ವಂಶಸ್ತರು. ನಾವು ಯಾರ ತಲೆ ಬೇಕಾದ್ರೂ ತೆಗೀತೀವಿ ಅಂತ ಹೇಳಿದ್ದಾರೆ. ಈ ಹೇಳಿಕೆ ಸರಿಯಲ್ಲ, ನೀವು ಈ ರೀತಿ ಹೇಳಿದ್ರೆ ನಾವು ಸುಮ್ಮನೆ ಕೂರಲ್ಲ. ಕರ್ನಾಟಕಕ್ಕೆ ಬಂದು ಈ ರೀತಿ ಹೇಳಿಕೆ ನೀಡಿದ್ರೆ, ನಾವು ಏನು ಮಾಡಬೇಕೋ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.

  ಹೆಸರು ಬಹಿರಂಗಪಡಿಸಿ, ಕಾಂಗ್ರೆಸ್​ಗೆ ರೇಣುಕಾಚಾರ್ಯ ಸವಾಲು

  ಬಿಟ್ ಕಾಯಿನ್ ವಿಚಾರವಾಗಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು, ನಿಮ್ಮ ಅವಧಿಯಲ್ಲಿ ಪೊಲೀಸರು ತಪ್ಪು ಮಾಡಿದ್ರೆ, ನೀವು ಯಾಕೆ ಕ್ರಮ ಕೈಗೊಳ್ಳಲಿಲ್ಲ. ಕಾಂಗ್ರೆಸ್ ನದ್ದು ಹಿಟ್ ಆಂಡ್ ರನ್ ಸಂಸ್ಕೃತಿ. ನಾವು, ನಮ್ಮ ಪಕ್ಷದ ವತಿಯಿಂದ ಹೇಳಿದ್ದೇವೆ. ಹಗರಣದಲ್ಲಿ ಯಾರಿದ್ದಾರೆ ಹೆಸರು ಬಹಿರಂಗಪಡಿಸಿ. ಅಧಿವೇಶನದಲ್ಲಿ ಚರ್ಚೆಗೆ ಬರ್ತೀರಾ, ಬನ್ನಿ ಉತ್ತರ ಕೊಡ್ತೀವಿ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಹೇಳಲು ಹೆಸರಿಲ್ಲದಂತಾಗಿದೆ. ರಾಜ್ಯದಲ್ಲೂ ಇದೇ ಪರಿಸ್ಥಿತಿ ಕಾಂಗ್ರೆಸ್ಸಿಗೆ ಇದೆ. ವಿಧಾನಪರಿಷತ್ ಚುನಾವಣೆಗೆ ಜೀವಂತವಾಗಿ ಇಡಲು ಈ ರೀತಿ ಯತ್ನ ಮಾಡ್ತಿದ್ದಾರೆ. ರಣದೀಪ್ ಸುರ್ಜೇವಾಲ ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ್ರು. ಪ್ರಿಯಾಂಕ್ ಖರ್ಗೆ ಕೂಡ ಮಾತನಾಡಿದ್ರು. ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಎಲ್ಲರೂ ಮಾತನಾಡ್ತಿದ್ದಾರೆ. ಮಣ್ಮುಕ್ಕ ತರ ಎರಡು ತಲೆ ಹಾವು ಕಾಂಗ್ರೆಸ್‌ನವರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

  ಇದನ್ನು ಓದಿ: Heavy Rain: ಮಲೆನಾಡಲ್ಲಿ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ; ಬೀದಿಗೆ ಬಿದ್ದ ಕಾಫಿ, ಅಡಿಕೆ ಬೆಳೆಗಾರರು!

  ದಾಖಲೆ ನಮ್ಮ ಬಳಿ ಇಲ್ಲ: ಸಿದ್ದರಾಮಯ್ಯ

  ಬಿಟ್ ಕಾಯಿನ್ ಹಗರಣ ಹಾಗೂ ಶ್ರೀಕಿ ಹ್ಯಾಕಿಂಗ್ ಸಂಬಂಧ ಕಾಂಗ್ರೆಸ್ ದಾಖಲೆ ಬಿಡುಗಡೆ ಮಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಷಯವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ಹತ್ತಿರ ದಾಖಲೆ ಇಲ್ಲ. ಬಿಜೆಪಿಯವರ ಬಳಿ ಸರ್ಕಾರವಿದೆ. ದಾಖಲೆ ಅವರು ಕೊಡಬೇಕು. ಬಿಜೆಪಿ ಅವರದೇ ಸರ್ಕಾರ ಇದೆ. ಜವಾಬ್ದಾರಿ ಇದೆ. ನಾನು ದಾಖಲೆ ಇದೆ ಅಂತಾ ಎಲ್ಲಿ ಹೇಳಿದ್ದೆ? ಮಾತಾಡ್ತಿನಿ ಅಂತಾ ಹೇಳಿದ್ದೆ. ದಾಖಲೆ ಇದೆ ಎಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

  ನಿನ್ನೆ ಅಲ್ಪಸಂಖ್ಯಾತರ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಜಮೀರ್ ಬೆಂಬಲಿಗರ ಕೂಗಾಟ ವಿಷಯಕ್ಕೆ ಮಾತನಾಡಿದ ಸಿದ್ದರಾಮಯ್ಯ ಅವರು ಭಾಷಣಕ್ಕೆ ಅಡ್ಡಿನೂ ಇಲ್ಲ ಪಡ್ಡಿನು ಇಲ್ಲ. ಸಮಯ ಇರಲಿಲ್ಲ. ಹಾಗಾಗಿ ಬಂದುಬಿಟ್ಟೆ. ಭಾಷಣ ಮಾಡಲ್ಲ ವಿಶ್ ಮಾಡ್ತಿನಿ ಅಂತಷ್ಟೇ ಹೇಳಿದ್ದೆ. ಭಾಷಣ ಮಾಡಲ್ಲ ಅಂತಾ ಮೊದಲೇ ಹೇಳಿದ್ದೆ ಎಂದು ತಿಳಿಸಿದರು.
  Published by:HR Ramesh
  First published: