Crime News: ಬರೋಬ್ಬರಿ ಆರು ಆಟೋಗಳನ್ನು ಕದ್ದ ಅಪ್ರಾಪ್ತ..! ಕೊನೆಗೂ ಸಿಕ್ಕಿಬಿದ್ದ

ಬೆಂಗಳೂರಿನಲ್ಲಿ ಬೈಕ್ ಸೇರಿ ಇತರ ವಾಹನಗಳ ಕಳ್ಳತನ ಅತ್ಯಂತ ಮಾಮೂಲಾಗಿ ಬಿಟ್ಟಿದ್ದು ಮನೆಮುಂದೆ ನಿಲ್ಲಿಸಿದ ವಾಹನವೂ ಸುರಕ್ಷಿತವಲ್ಲ ಎನ್ನುವ ಹಂತಕ್ಕೆ ತಲುಪಿದೆ.

ಕದ್ದಿರುವ ಆಟೋ ರಿಕ್ಷಾಗಳು

ಕದ್ದಿರುವ ಆಟೋ ರಿಕ್ಷಾಗಳು

  • Share this:
ಇತ್ತೀಚಿನ ದಿನಗಳಲ್ಲಿ ಕಳ್ಳತನ (Stealing) ಮಾಡುವುದಕ್ಕೆ ವಯಸ್ಸು, ಅಂತರ ಏನಿಲ್ಲ. ಯಾರಾದರೂ ಕಳ್ಳನಾಗಿರಬಹುದು. ಆದರೆ ಅದು ಗೊತ್ತಾಗುವುದು ಮಾತ್ರ ತಡವಾಗಿ. ಬೆಂಗಳೂರಿನಲ್ಲಿ ನಡೆದಿರುವ ಕಳ್ಳತನವೊಂದರಲ್ಲಿ (Theft) ಸಿಕ್ಕಿಹಾಕಿಕೊಂಡಿರುವಾತ ಅಪ್ರಾಪ್ತ (Minor). ಬೆಂಗಳೂರಿನಲ್ಲಿ (Bangalore) ಬೈಕ್ ಸೇರಿ ಇತರ ವಾಹನಗಳ ಕಳ್ಳತನ ಅತ್ಯಂತ ಮಾಮೂಲಾಗಿ ಬಿಟ್ಟಿದ್ದು ಮನೆಮುಂದೆ ನಿಲ್ಲಿಸಿದ ವಾಹನವೂ ಸುರಕ್ಷಿತವಲ್ಲ ಎನ್ನುವ ಹಂತಕ್ಕೆ ತಲುಪಿದೆ. ಬಹಳಷ್ಟು ಪ್ರಕರಣಗಳಲ್ಲಿ ಬೈಕ್, ಕಾರುಗಳನ್ನು ಕದ್ದು ಅವುಗಳ ನಂಬರ್  ಪ್ಲೇಟ್ ಬದಲಾಯಿಸಿ ಮರು ಮಾರಾಟ ಮಾಡುವುದು, ಬಿಡಿ ಭಾಗಗಳನ್ನು ಕಳ್ಳತನ ಮಾಡುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ.

ಬೆಂಗಳೂರಿನಲ್ಲಿ (Bengaluru) ಆಟೋರಿಕ್ಷಾಗಳನ್ನು ಕದ್ದ ಆರೋಪದ ಮೇಲೆ ಅಪ್ರಾಪ್ತ ವಯಸ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹15 ಲಕ್ಷ ಮೌಲ್ಯದ ಆರು ಆಟೊರಿಕ್ಷಾಗಳನ್ನು ಪೊಲೀಸರು (Police) ವಶಪಡಿಸಿಕೊಂಡಿದ್ದಾರೆ.

ತ್ರಿಚಕ್ರ ವಾಹನಗಳೇ ಇವನ ಟಾರ್ಗೆಟ್

ಕೆಂಗೇರಿ, ಕಾಮಾಕ್ಷಿಪಾಳ್ಯ, ಕಾಟನ್‌ಪೇಟೆ, ಚಂದ್ರಾ ಲೇಔಟ್‌, ಕುಂಬಳಗೋಡು, ಶೇಷಾದ್ರಿಪುರಂನಲ್ಲಿ ತ್ರಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಅಪ್ರಾಪ್ತರೊಂದಿಗೆ ಸಂಘಟಿತ ಗ್ಯಾಂಗ್ ಕೆಲಸ ಮಾಡುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕಳವು ಮಾಡಲಾಗಿದ್ದ ಒಟ್ಟು 6 ಆಟೋರಿಕ್ಷಾಗಳನ್ನು ಕೆಂಗೇರಿ (Kengeri) ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಂಗೇರಿ, ಕಾಮಾಕ್ಷಿಪಾಳ್ಯ, ಕಾಟನ್.ಪೇಟೆ, ಚಂದ್ರಲೇಔಟ್, ಶೇಷಾದ್ರಿಪುರಂ & ಕುಂಬಳಗೋಡು ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ 6 ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಮಾಡಲಾಗಿದೆ ಎಂದು ಟ್ವೀಟ್ (Tweet) ಮಾಡಲಾಗಿದೆ.

ಕೆಲವು ವರ್ಷದ ಹಿಂದೆ ಬಾಲಕನ ಸರಣಿ ಕಳ್ಳತನ

ಕೆಲವು ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಾಲಕನೊಬ್ಬ ಮೊಬೈಲ್ ಖರೀದಿಗಾಗಿ ಸರಣಿ ಕಳ್ಳತನ ಮಾಡಿದ ಘಟನೆ ನಡೆದಿತ್ತು,

ಹುಡುಗನ ಸ್ನೇಹಿತರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ಇದನ್ನ ಸಾಕಷ್ಟು ಬಾರಿ ಗಮನಸಿದ್ದ ಹುಡುಗ ತಾನು ಸಹ ಒಳ್ಳೆ ಸ್ಮಾರ್ಟ್ ಪೋನ್ ಖರೀದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಬೇಕು ಅಂತ ಅಲೋಚಿಸಿದ್ದ. ಆದರೆ, ಸ್ಮಾರ್ಟ್ ಫೋನ್ ಖರೀದಿಗೆ ಹೆಚ್ಚಿನ ಹಣದ ಅವಶ್ಯಕತೆ ಇದ್ದರಿಂದ ಹುಡುಗ ಕಳ್ಳತನದ ಮಾರ್ಗ ಹಿಡಿದಿದ್ದ.

ಇದನ್ನೂ ಓದಿ: Hassan: ಕಾರು-ಕೆಎಸ್​ಆರ್​ಟಿಸಿ ಬಸ್​ ನಡುವೆ ಭೀಕರ ಅಪಘಾತ, ಐವರು ವಿದ್ಯಾರ್ಥಿಗಳ ದುರ್ಮರಣ

ಜೂನ್ 9 ರಂದು ನಗರದ ಪ್ರಮುಖ ವ್ಯಾಪಾರ ವಹಿವಾಟು ಏರಿಯಾಗಳಾದ ವಿಠ್ಠಲ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆಯ ನಾಲ್ಕು ಅಂಗಡಿಗಳಲ್ಲಿ ಕಳ್ಳತನ ಆಗಿತ್ತು. ಒಂದೇ ದಿನ ನಡೆದ ಈ ಸರಣಿ ಕಳ್ಳತನ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಂಗಡಿಗಳ ಸಿಸಿಟಿವಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಓರ್ವ ಹುಡುಗ ಅಂಗಡಿಗಳ ಬಳಿ ಓಡಾಡುತ್ತಿರುವುದು ಪತ್ತೆಯಾಗಿದ್ದು ಬಳಿಕ ಪೊಲೀಸರು ಆತನನ್ನ ಪತ್ತೆ ಮಾಡಿ ವಿಚಾರಿಸಿದ್ದರು. ಪೊಲೀಸರ ತನಿಖೆ ವೇಳೆ ಬಾಲಕ ಸ್ಮಾರ್ಟ್ ಫೋನ್ ಹಾಗೂ ಸೋಷಿಯಲ್‌ ಮೀಡಿಯಾ (Social Media) ವ್ಯಾಮೋಹದ ಬಗ್ಗೆ ಬಾಯ್ಬಿಟ್ಟಿದ್ದ. ಸದ್ಯ ಕಬ್ಬನ್ ಪಾರ್ಕ್ ಪೊಲೀಸರು ಬಾಲಕನನ್ನ ಬಾಲಮಂದಿರಕ್ಕೆ ಕಳಿಸಿಕೊಟ್ಟಿದ್ದರು.
Published by:Divya D
First published: