15 ವರ್ಷಕ್ಕೆ ಮದುವೆ: ಪೊಲೀಸರ ಸಹಾಯ ಕೇಳಿ ತನ್ನ ಮದುವೆ ನಿಲ್ಲಿಸಿದ ಮೈಸೂರಿನ ಅಪ್ರಾಪ್ತೆ

ನಾನು ಅಪ್ರಾಪ್ತೆಯಾಗಿದ್ದರೂ ಮನೆಯವರು ನನಗೆ ಇದೇ ತಿಂಗಳ 30ರಂದು ಮದುವೆ ನಿಶ್ಚಯ ಮಾಡಲು ಮುಂದಾಗಿದ್ದಾರೆ. ಈ ಕುರಿತು ತಮ್ಮ ತಂದೆಗೆ  ತಿಳಿ ಹೇಳಿ. ಮದುವೆ ನಿಲ್ಲಿಸುವಂತೆ, ಅವರ ಫೋನ್​ ನಂಬರ್​ ಹಾಕಿ ಮನವಿ ಮಾಡಿದ್ದಾಳೆ. 

news18-kannada
Updated:January 28, 2020, 1:05 PM IST
15 ವರ್ಷಕ್ಕೆ ಮದುವೆ: ಪೊಲೀಸರ ಸಹಾಯ ಕೇಳಿ ತನ್ನ ಮದುವೆ ನಿಲ್ಲಿಸಿದ ಮೈಸೂರಿನ ಅಪ್ರಾಪ್ತೆ
ಸಾಂದರ್ಭಿಕ ಚಿತ್ರ
  • Share this:
ಮೈಸೂರು (ಜ.28): 15ನೇ ವರ್ಷಕ್ಕೆ ಮದುವೆ ಮಾಡಲು ಮುಂದಾಗಿದ್ದ ಮನೆಯವರ ವಿರುದ್ಧ ಬಾಲಕಿಯೇ ಪೊಲೀಸರಿಗೆ ದೂರು ನೀಡಿದ್ದು, ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾಳೆ. 

ತಾಲ್ಲೂಕು ಮಾರ್ಬಳ್ಳಿಹುಂಡಿ ಗ್ರಾಮದಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿಗೆ, ಮನೆಯವರು ಮದುವೆ ಮಾಡಲು ಮುಂದಾಗಿದ್ದರು. ಓದಬೇಕು ಎಂದು ಇಚ್ಛೆ ಹೊಂದಿದ್ದ ಬಾಲಕಿ ಏನು ಮಾಡಬೇಕು ಎಂದು ತೋಚದೇ ಕಡೆಗೆ ಬೆಂಗಳೂರು ಪೊಲೀಸರ ಫೇಸ್​ಬುಕ್​ನಲ್ಲಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾಳೆ.ನಾನು ಅಪ್ರಾಪ್ತೆಯಾಗಿದ್ದರೂ ಮನೆಯವರು ನನಗೆ ಇದೇ ತಿಂಗಳ 30ರಂದು ಮದುವೆ ನಿಶ್ಚಯ ಮಾಡಲು ಮುಂದಾಗಿದ್ದಾರೆ. ಈ ಕುರಿತು ತಮ್ಮ ತಂದೆಗೆ  ತಿಳಿ ಹೇಳಿ. ಮದುವೆ ನಿಲ್ಲಿಸುವಂತೆ, ಅವರ ಫೋನ್​ ನಂಬರ್​ ಹಾಕಿ ಮನವಿ ಮಾಡಿದ್ದಾಳೆ.

ಈ ಸಂದೇಶ ಸಿಗುತ್ತಲೇ ಎಚ್ಚೆತ್ತ ಬೆಂಗಳೂರು ಪೊಲೀಸರು, ತಕ್ಷಣ ಮೈಸೂರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣಕ್ಕೆ ಹುಡುಗಿ ಮನೆಗೆ ಭೇಟಿ ನೀಡಿದ ಮೈಸೂರಿನ ಜಯಪುರ ಪೊಲೀಸರು ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ: ಕಾಡುಗೊಲ್ಲರ ಕಂದಾಚಾರಕ್ಕೆ ಹೆಣ್ಣುಮಕ್ಕಳು ಬಲಿ: ಮಾಸಿಕ ಋತುಸ್ರಾವ ನೈಸರ್ಗಿಕ ಕ್ರಿಯೆಯಷ್ಟೇ

ಅಲ್ಲದೇ ಬಾಲಕಿಗೆ 18 ವರ್ಷ ತುಂಬುವವರೆಗೂ ಮದುವೆ ಮಾಡುವುದಿಲ್ಲ ಎಂದು ಇನ್ನೆರಡು ದಿನದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು ಎಂದು ತಾಕೀತು ಮಾಡಿದ್ದಾರೆ.
First published:January 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ