ರಾಯಚೂರು (ಜ.25): ತಂದೆಗೆ ಮದ್ಯ ಕುಡಿಸಿ, ಆತನ ಮಗಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿರುವ ಘಟನೆ ಜಿಲ್ಲೆಯ ಸಿಂಧನೂರಿನ ಸಿದ್ರಾಂಪುರದಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಮುರಾರ್ಜಿ ವಸತಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯನ್ನು ಮನೆಗೆ ಕರೆದುಕೊಂಡು ಬರುವಾಗ ಈ ಕೃತ್ಯ ನಡೆದಿದೆ. ವಸತಿ ಶಾಲೆಯಲ್ಲಿ ಓದುತ್ತಿದ್ದ ಮಗಳನ್ನು ಯಾವುದೇ ಕಾರಣಕ್ಕೂ ತಂದೆಯು ಮದ್ಯ ವಸನಿಯಾಗಿದ್ದು, ಯಾವುದೇ ಕಾರಣಕ್ಕೂ ಮಗಳನ್ನು ಆತನೊಂದಿಗೆ ಕಳುಹಿಸದಂತೆ ಬಾಲಕಿ ತಾಯಿ ವಸತಿ ಶಾಲೆ ಮುಖ್ಯ ಗುರು ಹಾಗೂ ವಾರ್ಡನ್ಗೆ ಮನವಿ ಮಾಡಿದ್ದರು.
ಆದರೂ ಕೂಡ ನಿರ್ಲಕ್ಷ್ಯವಹಿಸಿದ ವಾರ್ಡನ್ ಬಾಲಕಿ ತಂದೆ ಕರೆದ ಹಿನ್ನೆಲೆ ಆತನ ಜೊತೆ ಕಳುಹಿಸಿ ಕೊಟ್ಟಿದ್ದಾರೆ. ಈ ವೇಳೆ ಮಾರ್ಗ ಮಧ್ಯೆದಲ್ಲಿ ಬಂದ ದುಷ್ಕರ್ಮಿಗಳು ಆತನಿಗೆ ಮಧ್ಯ ಕುಡಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಇದನ್ನು ಓದಿ: ಆಸ್ತಿ ವಿವಾದ: ಮೂರು ವರ್ಷದ ಮಗು, ನಾದಿನಿ ಮುಖಕ್ಕೆ ಆ್ಯಸಿಡ್ ಎರಚಿದ ಕಿರಾತಕ
ಘಟನೆ ಕುರಿತು ಪೊಲೀಸರು ದೂರು ದಾಖಲಿಸಿದ್ದು, ಆರೋಪಿಗಳ ಶೋಧ ನಡೆಸಿದ್ದಾರೆ. ಇನ್ನು ಗೊತ್ತಿದ್ದವರೇ ಯಾರೋ ಈ ದುಷ್ಕೃತ್ಯ ನಡೆಸಿರುವ ಸಾಧ್ಯತೆ ಇದ್ದು, ಈ ಕುರಿತು ತಂದೆಯ ತೀವ್ರ ವಿಚಾರಣೆ ನಡೆಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ