Chikkamagaluru Crime News: ಮಗನನ್ನ ಹುಡ್ಕೊಂಡು ಬಂದ ಅಪ್ರಾಪ್ತೆ ಪ್ರಿಯತಮೆ ಮೇಲೆ ತಂದೆಯಿಂದಲೇ ರೇಪ್

ಸಂತ್ರಸ್ತೆ 10ನೇ ಕ್ಲಾಸ್ ಓದುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಬಾಲಕಿ (Girl) ಪ್ರಿಯತಮನನ್ನು (Boy Friend) ಹುಡುಕಿಕೊಂಡು ಮನೆಗೆ ಬಂದಿದ್ದಾಳೆ. ಈ ವೇಳೆ ಪ್ರಿಯಕರ ಕೆಲಸದ ನಿಮಿತ್ ಹೊರಗೆ ಹೋಗಿದ್ದನು

ಬಾಳೆಹೊನ್ನೂರು ಪೊಲೀಸ್ ಠಾಣೆ

ಬಾಳೆಹೊನ್ನೂರು ಪೊಲೀಸ್ ಠಾಣೆ

  • Share this:
ಚಿಕ್ಕಮಗಳೂರು: ಪುತ್ರನ ಅಪ್ರಾಪ್ತೆ (Minor Girl) ಮೇಲೆ ತಂದೆಯೇ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಚಿಕ್ಕಮಗಳೂರು (Chikkamagaluru) ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು (Balehonnuru) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಪೊಲೀಸರು (Police) ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆ 10ನೇ ಕ್ಲಾಸ್ ಓದುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಬಾಲಕಿ (Girl) ಪ್ರಿಯತಮನನ್ನು (Boy Friend) ಹುಡುಕಿಕೊಂಡು ಮನೆಗೆ ಬಂದಿದ್ದಾಳೆ. ಈ ವೇಳೆ ಪ್ರಿಯಕರ ಕೆಲಸದ ನಿಮಿತ್ ಹೊರಗೆ ಹೋಗಿದ್ದನು. ಆದ್ರೆ ಮಗ ಮನೆಯಲ್ಲಿ ಇಲ್ಲ ಎಂದು ಹೇಳಿ ಕಳಿಸದ ನೀಚ, ಸಂಚು ರೂಪಿಸಿದ್ದನು.

ಬಲವಂತವಾಗಿ ಬಾಲಕಿಯನ್ನು ಮನೆಯಲ್ಲಿ ಉಳಿಸಿಕೊಂಡ

ಮಗ ಮನೆಯಲ್ಲಿ ಇಲ್ಲ. ಸಂಜೆ ಆತ ಮರಳಿ ಬರಲಿದ್ದಾನೆ ಎಂದು ಬಾಲಕಿಯನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದಾನೆ. ಮಗ ಬಂದೇ ಬರುತ್ತಾನೆ ಎಂದು ಬಲವಂತವಾಗಿ ಬಾಲಕಿಯನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದಾನೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಬಾಲಕಿ ಮೇಲೆ ಯುವಕನ ತಂದೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಬಾಲಕಿ ಪೋಷಕರ ಜೊತೆಯಲ್ಲಿದ್ದಾಳೆ.

ನನ್ನ ಮಗಳು ಶಾಲೆಗೆ ಹೋಗದೇ ಬೇರೆಯೊಬ್ಬರ ಮನೆಯಲ್ಲಿರುವ ವಿಷಯ ತಿಳಿಯಿತು. ನಾನೇ  ಹೋಗಿಯನ್ನು ಕರೆದುಕೊಂಡು ಬಂದಾಗ ಮಗಳು ತನ್ನ ಮೇಲೆ ನಡೆದ ಅತ್ಯಾಚಾರ ತಿಳಿಸಿದಳು. ಆಕೆಗೆ ಪರೀಕ್ಷೆಗಳಿದ್ದ ಕಾರಣ, ವಿಷಯವನ್ನು ಯಾರಿಗೂ ಹೇಳಲಿಲ್ಲ. ನಂತರ ಸಂಬಂಧಿಕರ ಜೊತೆ ಚರ್ಚೆ ನಡೆಸಿ ದೂರು ದಾಖಲಿಸಿರೋದಾಗಿ ಸಂತ್ರಸ್ತೆ ತಾಯಿ ಹೇಳಿದ್ದಾರೆ.

ಇದನ್ನೂ ಓದಿ:  ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ; ಪೊಲೀಸರಿಗೆ ದೂರು ನೀಡಿದ ಆರೋಪಿಯ ನಾಲ್ಕನೇ ಹೆಂಡತಿ!

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ

ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ಹಿಸಾರ್​​ನಲ್ಲಿ ನಡೆದಿತ್ತು. 7 ವರ್ಷಗಳಿಂದ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು.. 17 ವರ್ಷದ ಮಗಳ ಮೇಲೆ, 7 ವರ್ಷಗಳಿಂದ ಅಂದರೆ ಆಕೆ 10 ವರ್ಷದವಳಾಗಿದ್ದಾಗಿನಿಂದಲೂ ಈ ಕೃತ್ಯ ಎಸಗಿದ್ದನು. ಇಷ್ಟೇ ಅಲ್ಲದೇ, ಅತ್ಯಾಚಾರ ಎಸಗಿದ ಬಳಿಕ ಆಕೆ ಗರ್ಭವತಿಯಾಗಿದ್ದು, ಗರ್ಭಪಾತ ಮಾಡಿಸುವಂತೆ ಮಗಳಿಗೆ ಒತ್ತಾಯಿಸುತ್ತಿದ್ದ ಎಂದು ವರದಿಯಾಗಿತ್ತು.

ತಮಿಳುನಾಡಿನಲ್ಲಿ ಮತ್ತೊಂದು ಪ್ರಕರಣ

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ. 14 ವರ್ಷದ ಬಾಲಕಿಯ ಮೇಲೆ ಅಪ್ಪನೇ ಅತ್ಯಾಚಾರವೆಸಗಿ, ಆಕೆ ಗರ್ಭ ಧರಿಸಿರುವ ಘಟನೆ ನಡೆದಿದೆ. ತನ್ನ ಅಪ್ರಾಪ್ತ ಮಗಳ ಮೇಲೆ ಗಂಡ ನಡೆಸಿರುವ ದೌರ್ಜನ್ಯಕ್ಕೆ ತಕ್ಕ ಪಾಠ ಕಲಿಸಬೇಕೆಂದು ಆ ಬಾಲಕಿಯ ತಾಯಿ ತನ್ನ ಮಗಳೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಆ ಬಾಲಕಿಯ ತಂದೆಯನ್ನು ಬಂಧಿಸಿದ್ದಾರೆ.

ತಂಗಿ ಮೇಲೆ ಅತ್ಯಾಚಾರ ಎಸಗಿದ ಗಂಡನನ್ನ ಕೊದ ಪತ್ನಿ

ರಾಜಸ್ಥಾನದ ಭೈರಂಪುರದ ಜಾಗೀರ್ ಗ್ರಾಮದವಳಾದ 28 ವರ್ಷದ ಸರೋಜ ತುಂಬು ಗರ್ಭಿಣಿಯಾಗಿದ್ದಳು. 9 ತಿಂಗಳು ತುಂಬಿದ್ದರಿಂದ ಆಕೆಗೆ ಮನೆಯ ಕೆಲಸಗಳನ್ನು ಮಾಡಲು ಆಗುತ್ತಿರಲಿಲ್ಲ. ಹೀಗಾಗಿ, ಗಂಡನಿಗೆ ಹೊರೆಯಾಗಬಾರದು ಎಂದು ತವರುಮನೆಯಿಂದ ತನ್ನ 15 ವರ್ಷದ ತಂಗಿಯನ್ನು ಕರೆಸಿಕೊಂಡಿದ್ದಳು. ಆದರೆ, ಸರೋಜ ಮನೆಯಿಂದ ಆಚೆ ಹೋದಾಗ ಆಕೆಯ ಗಂಡ ಮಹಾವೀರ್ ತನ್ನ ನಾದಿನಿಯ ಮೇಲೆ ಅತ್ಯಾಚಾರವೆಸಗಿದ್ದನು.

ಇದನ್ನೂ ಓದಿ:  ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ; ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈದರಾಬಾದ್ ನ್ಯಾಯಾಲಯ

ತನ್ನ ಮೇಲೆ ಭಾವ ಅತ್ಯಾಚಾರವೆಸಗಿದ್ದರಿಂದ ಆಕೆ ಜೋರಾಗಿ ಕಿರುಚಿಕೊಂಡು ಗಲಾಟೆ ಮಾಡಿದ್ದಳು. ಸ್ವಲ್ಪ ಹೊತ್ತಾದ ಬಳಿಕ ಸರೋಜ ಮನೆಗೆ ವಾಪಾಸಾದಾಗ ತಂಗಿಯ ಮೇಲೆ ಗಂಡ ಅತ್ಯಾಚಾರವೆಸಗಿದ ವಿಷಯ ಗೊತ್ತಾಗಿತ್ತು. 15 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಗಂಡನ ಬಗ್ಗೆ ಅಸಹ್ಯವೂ ಮೂಡಿತ್ತು. ತನ್ನ ತಂಗಿಯ ಭವಿಷ್ಯದ ಬಗ್ಗೆ ಯೋಚಿಸಿದ ಆಕೆಗೆ ಗಂಡನ ಮೇಲೆ ಕೋಪ ಉಕ್ಕಿತ್ತು.

ಶವ ಸುಟ್ಟು ಹಾಕಿದ್ಳು

ಅದೇ ಕೋಪದಲ್ಲಿ ಮನೆಯ ಹಿತ್ತಿಲಿನಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಗಂಡನ ತಲೆ, ಹೊಟ್ಟೆಗೆ ಹೊಡೆದು ಕೊಲೆ ಮಾಡಿದ್ದಾಳೆ. ನಂತರ ಈ ವಿಷಯ ಬೇರೆಯವರಿಗೆ ಗೊತ್ತಾಗುತ್ತದೆ ಎಂದು ಹೆದರಿ, ತಂಗಿಯ ಸಹಾಯದಿಂದ ಮನೆಯ ಹಿಂದೆ ಗಂಡನ ಶವವನ್ನು ಎಳೆದುಕೊಂಡು ಹೋಗಿ ಸುಟ್ಟುಹಾಕಿದ್ದಳು.
Published by:Mahmadrafik K
First published: