• Home
  • »
  • News
  • »
  • state
  • »
  • Vijayapura: ಓಡಿ ಹೋದ ಅಪ್ರಾಪ್ತ ಮಗಳು, ಪತ್ತೆ ಮಾಡದ ಪೊಲೀಸರು; ಮರ್ಯಾದೆಗೆ ಅಂಜಿ ಕಾಲುವೆಗೆ ಹಾರಿದ ತಂದೆ

Vijayapura: ಓಡಿ ಹೋದ ಅಪ್ರಾಪ್ತ ಮಗಳು, ಪತ್ತೆ ಮಾಡದ ಪೊಲೀಸರು; ಮರ್ಯಾದೆಗೆ ಅಂಜಿ ಕಾಲುವೆಗೆ ಹಾರಿದ ತಂದೆ

ಆತ್ಮಹತ್ಯೆಗೆ  ಶರಣಾದ ಗಂಗಾಧರ್

ಆತ್ಮಹತ್ಯೆಗೆ ಶರಣಾದ ಗಂಗಾಧರ್

ಗಂಗಾಧರ್ ಆತ್ಮಹತ್ಯೆಗೆ ಶರಣಾಗಿರುವ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರ ಜತೆ ಗ್ರಾಮಸ್ಥರು ವಾಗ್ವಾದ ನಡೆಸಿದರು. ಸ್ಥಳಕ್ಕೆ ಎಸ್​ಪಿ ಆಗಮಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

  • Share this:

ಪ್ರಿಯಕರನೊಂದಿಗೆ ಓಡಿ ಹೋದ ಅಪ್ರಾಪ್ತ ಮಗಳು (Minor Daughter) ಪತ್ತೆಯಾಗದ ಹಿನ್ನೆಲೆ ಮನನೊಂದ ತಂದೆ ಆತ್ಮಹತ್ಯೆ (Father Suicide) ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ (Basavana Bagewadi, Vijayapura) ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ನಡೆದಿದೆ. 44 ವರ್ಷದ ಗಂಗಾಧರ್ ಬಡಿಗೇರ್ ಆತ್ಮಹತ್ಯೆಗೆ ಶರಣಾದ ತಂದೆ. ಮೃತ ಗಂಗಾಧರ್ ಸಾರಿಗೆ ಇಲಾಖೆಯ ನೌಕರರಾಗಿದ್ದು, ಬೈರವಾಡಗಿ ಗ್ರಾಮದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಗ್ರಾಮದ ಹೊರ ಭಾಗದಲ್ಲಿರುವ ಕಾಲುವೆಗೆ (Canal) ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಗಾಧರ್ ಅವರ ಅಪ್ರಾಪ್ತ ಪುತ್ರಿ ಗ್ರಾಮದ ಸಂತೋಷ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈಗ ಅದೇ ಯುವಕನ ಜೊತೆ ಅಪ್ರಾಪ್ತೆ ಓಡಿ ಹೋಗಿದ್ದಾಳೆ. ಎಷ್ಟೇ ಹುಡುಕಾಡಿದರೂ ಮಗಳು ಪತ್ತೆಯಾಗದ ಹಿನ್ನೆಲೆ ಗಂಗಾಧರ್ ಪುತ್ರಿ ಕಾಣೆಯಾಗಿರುವ ಬಗ್ಗೆ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ದೂರು ನೀಡಿದ್ದರೂ ಇಲ್ಲಿಯವರೆಗೆ ಗಂಗಾಧರ್ ಅವರ ಪುತ್ರಿ ಮಾತ್ರ ಪತ್ತೆಯಾಗಿರಲಿಲ್ಲ. ಗಂಗಾಧರ್ ಹಲವಾರು ಬಾರಿ ಠಾಣೆಗೆ ಅಲೆದಾಡಿದ್ದರೂ ಉಪಯೋಗವಾಗಿರಲಿಲ್ಲ. ಮಗಳು ಓಡಿ ಹೋದಳು, ಪೊಲೀಸರು ಆಕೆಯನ್ನು ಪತ್ತೆ ಮಾಡಲಿಲ್ಲ ಎಂದು ಗಂಗಾಧರ್ ತೀವ್ರವಾಗಿ ಮನನೊಂದಿದ್ದರು. ಇದರಿಂದ ಅವಮಾನಗೊಂಡು ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.


ಪೊಲೀಸರ ಜೊತೆ ಗ್ರಾಮಸ್ಥರ ವಾಗ್ವಾದ


ಗಂಗಾಧರ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರ ಆರೋಪಿಸಿದ್ದಾರೆ. ಇನ್ನು ಗಂಗಾಧರ್ ಆತ್ಮಹತ್ಯೆಗೆ ಶರಣಾಗಿರುವ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರ ಜತೆ ಗ್ರಾಮಸ್ಥರು ವಾಗ್ವಾದ ನಡೆಸಿದರು. ಸ್ಥಳಕ್ಕೆ ಎಸ್​ಪಿ ಆಗಮಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.


ಪ್ರಿಯಕರನ ಜೊತೆ ಓಡಿ ಹೋದ ಮಗಳು: ತಂದೆ, ತಾಯಿ, ತಮ್ಮ ಆತ್ಮಹತ್ಯೆ


ಮಗಳು ಪ್ರೀತಿಸಿದ ಯುವಕನ ಜೊತೆ ಓಡಿ ಹೋಗಿದ್ದಕ್ಕೆ ಕುಟುಂಬಸ್ಥರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳದಲ್ಲಿ ಈ ಘಟನೆ ನಡೆದಿದ್ದು, ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.


ಶ್ರೀರಾಮಪ್ಪ, ಸರೋಜಮ್ಮ, ಮನೋಜ್ ಮೃತ ದುರ್ದೈವಿಗಳು. ಮಗಳು ಅರ್ಚನಾ ಗ್ರಾಮದ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ಳು. ಮದುವೆಗೆ ವಿರೋಧ ವ್ಯಕ್ತವಾಗಿದಕ್ಕೆ ಅರ್ಚನಾ ಇನಿಯನ ಜೊತೆ ಗ್ರಾಮ ತೊರೆದಿದ್ದಳು. ಎಂಎಸ್​ಸಿ  ವ್ಯಾಸಂಗ ಮಾಡುತ್ತಿದ್ದ ಅರ್ಚನಾ, ಅದೇ ಗ್ರಾಮದಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ನಾರಾಯಣಸ್ವಾಮಿ ಎಂಬಾತನನ್ನು ಪ್ರೀತಿಸುತ್ತಿದ್ದಳು.


ಪೋಷಕರು ನೋಡಿದ ಹುಡುಗನನ್ನ ಒಪ್ಪದ ಅರ್ಚನಾ


ಗುರುವಾರ ಅರ್ಚನಾ ನಿಶ್ಚಿತಾರ್ಥ  ಬೇರೆ ಯುವಕನ ಜೊತೆ ನಿಗಧಿಯಾಗಿತ್ತು. ಪೋಷಕರು ನೋಡಿದ ಯುವಕನನ್ನು ಒಪ್ಪದ ಅರ್ಚನಾ ಮನೆ ತೊರೆದಿದ್ದಳು. ಮಗಳು ಓಡಿ ಹೋಗುತ್ತಿದ್ದಂತೆ ಕರೆ ಮಾಡಿದ್ದ ಪೋಷಕರು, ಮನೆಗೆ ಬಾ ಇಲ್ಲದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಮಗಳು ಅರ್ಚನಾ ಬಾರದ ಹಿನ್ನೆಲೆ ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಇದನ್ನೂ ಓದಿ:  Mangaluru: ಚಡ್ಡಿಗಳೇ ಎಚ್ಚರ,  ನಾವು ಮರಳಿ ಬರುತ್ತೇವೆ; PFI ಎಚ್ಚರಿಕೆಯ ಬರಹ


ಡೆತ್‌ ನೋಟ್‌ ಬರೆದಿಟ್ಟು ಬಾಲಕಿ ಸೂಸೈಡ್


ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬಾಲಕಿಯೊಬ್ಬಳು ಆತ್ಮಹ್ಯೆ ಮಾಡಿಕೊಂಡಿದ್ದಾಳೆ. 16 ವರ್ಷ ವಯಸ್ಸಿನ 10ನೇ ತರಗತಿ ಓದುತ್ತಿದ್ದ ಬಾಲಕಿ ಸಾರಿಕಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಣೇಶ ವಿಸರ್ಜನೆಗೆ ಅಂತ ಗ್ರಾಮದಲ್ಲಿ ನಿರ್ಮಿಸಿದ್ದ ಹೊಂಡದಲ್ಲಿ ಜಿಗಿದು ಸೂಸೈಡ್ ಮಾಡಿಕೊಂಡಿದ್ದಾಳೆ.


ಡೆತ್‌ ನೋಟ್‌ ಬರೆದಿಟ್ಟು ಸೂಸೈಡ್


ಬಾಲಕಿ ಸಾರಿಕಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 4 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾಳೆ. ತನ್ನ ಶಾಲೆಯ ಗೆಳೆಯ, ಗೆಳತಿಯರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ಈ ಬಾಲಕಿ ಹೇಳಿಕೊಂಡಿದ್ದಾಳೆ.


ಬಾಲಕಿ ಬರೆದ ವಿಚಿತ್ರ ಡೆತ್​​ ನೋಟ್​ನಲ್ಲಿ ಏನಿದೆ ಎಂಬುದನ್ನು ಇಲ್ಲಿ ಕ್ಲಿಕ್ ಮಾಡಿ


4 ಪುಟಗಳಿದ್ದರೂ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎನ್ನುವುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

Published by:Mahmadrafik K
First published: