16ರ ಬಾಲಕನೊಂದಿಗೆ 19ರ ಯುವತಿ ಬಲವಂತದ ಮದುವೆ

16 ವರ್ಷದ ಬಾಲಕನನ್ನು 19 ವರ್ಷದ ಬಾಲಕಿಯೊಂದಿಗೆ ಮದುವೆ ಮಾಡಿಕೊಡಲಾಗಿದ್ದು, ಈ ಕುರಿತು ಪುಟ್ಟೇನಹಳ್ಳಿ ಠಾಣೆವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

news18-kannada
Updated:February 22, 2020, 12:09 PM IST
16ರ ಬಾಲಕನೊಂದಿಗೆ 19ರ ಯುವತಿ ಬಲವಂತದ ಮದುವೆ
16 ಬಾರಕನಿಗೆ 19ರ ಯುವತಿಯೊಂದಿಗೆ ಮದುವೆ
  • Share this:
ಬೆಂಗಳೂರು (ಫೆ. 22): ಯುವತಿಯೊಂದಿಗೆ ಅಪ್ರಾಪ್ತ ಬಾಲಕನಿಗೆ ಬಲವಂತವಾಗಿ ಮದುವೆ ಮಾಡಿಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. 

16 ವರ್ಷದ ಬಾಲಕನನ್ನು 19 ವರ್ಷದ ಯುವತಿಯೊಂದಿಗೆ ಮದುವೆ ಮಾಡಿಕೊಡಲಾಗಿದ್ದು, ಈ ಕುರಿತು ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲಕ ಹಾಗೂ ಯುವತಿ ಪೋಷಕರು ಸಂಬಂಧಿಕರಾಗಿದ್ದು, ಯುವತಿಗೆ ತಂದೆ ತಾಯಿ ಇರಲಿಲ್ಲ. ಅತ್ತೆ‌ ಮನೆಯಲ್ಲಿ ವಾಸವಿದ್ದಳು. ಈ ಹಿನ್ನೆಲೆ ಇವರಿಬ್ಬರಿಗೂ ಫೆ. 19ರಂದು ಬಲವಂತವಾಗಿ ಅರಕೆರೆಯಲ್ಲಿ ಈ ಮದುವೆ ಮಾಡಿಸಲಾಗಿದೆ.

ಇನ್ನು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎನ್​ಜಿಓ ಸಂಸ್ಥೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಕುರಿತು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನು ಓದಿ: ಬಿಎಸ್​ವೈಗೆ ಬಂಡಾಯ ಭೀತಿ; ಅತೃಪ್ತರ ಸಭೆಗಳ ಮೇಲೆ ಕಣ್ಣಿಡುವಂತೆ ಗುಪ್ತಚರ ಇಲಾಖೆಗೆ ಸಿಎಂ ಸೂಚನೆ

ಸದ್ಯ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದ್ದು, ಯುವತಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಘಟನೆ ಬಳಿಕ ಯುವತಿ ಪೋಷಕರು ನಾಪತ್ತೆಯಾಗಿದ್ದಾರೆ.
 
First published:February 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ