• Home
  • »
  • News
  • »
  • state
  • »
  • Kalaburagi: ರೇಪ್​ ಆಂಡ್ ಮರ್ಡರ್​ ಕೇಸ್; ಸದಾ ಒಂಟಿಯಾಗಿಯೇ ಇರುತ್ತಿದ್ದ ಆರೋಪಿ ಬಾಲಕ

Kalaburagi: ರೇಪ್​ ಆಂಡ್ ಮರ್ಡರ್​ ಕೇಸ್; ಸದಾ ಒಂಟಿಯಾಗಿಯೇ ಇರುತ್ತಿದ್ದ ಆರೋಪಿ ಬಾಲಕ

ಆಳಂದ ಪೊಲೀಸ್ ಠಾಣೆ

ಆಳಂದ ಪೊಲೀಸ್ ಠಾಣೆ

ಆಳಂದ ಪೊಲೀಸರಿಗೆ 1 ಲಕ್ಷ ಬಹುಮಾನ ಘೋಷಿಸಲಾಗಿದೆ. ಈ ಪ್ರಕರಣದಲ್ಲಿ ಹತ್ತು ದಿನಗಳ ಒಳಗೆ ಚಾರ್ಜ್​​ಶೀಟ್ ಸಲ್ಲಿಸುತ್ತೇವೆ ಎಂದರು.

  • News18 Kannada
  • Last Updated :
  • Gulbarga, India
  • Share this:

ಕಲಬುರಗಿ ಜಿಲ್ಲೆಯ ಆಳಂದ (Alanda, Kalaburagi) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು (Rape And Murder Case) ಪೊಲೀಸರು 24 ಗಂಟೆಯಲ್ಲಿಯೇ ಬೇಧಿಸಿದ್ದಾರೆ. ಮಂಗಳವಾರ ಸಂಜೆ ಅಂದ್ರೆ ನವೆಂಬರ್ 1ರ ಮಧ್ಯಾಹ್ನ ಸುಮಾರು ಮೂರು ಗಂಟೆ ವೇಳೆ ಬಾಲಕಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಆಕೆಯನ್ನು ಎಳೆದೊಯ್ದು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಬಂಧಿತ 16 ವರ್ಷದ ಅಪ್ರಾಪ್ತ ಐಟಿಐ ವಿದ್ಯಾರ್ಥಿಯಾಗಿದ್ದು (ITI Student), ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಅಪ್ರಾಪ್ತ ಗ್ರಾಮದಲ್ಲಿ ಯಾರೊಬ್ಬರೊಂದಿಗೂ ಬೆರೆಯದೇ ಸದಾ ಒಂಟಿಯಾಗಿರುತ್ತಿದ್ದನು. ಸದಾ ಮೊಬೈಲ್ (Mobile) ನೋಡುತ್ತಿದ್ದ ಆರೋಪಿ, ಆಶ್ಲೀಲ ಸಿನಿಮಾ ವೀಕ್ಷಿಸಿ ಅದರಿಂದ ಪ್ರಚೋದನೆಗೆ ಒಳಗಾಗಿ ಈ ಕೃತ್ಯ ಎಸಗಿದ್ದಾನೆ.


ಈ ಪ್ರಕರಣದ ಕುರಿತು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್​​ಪಿ ಇಶಾ  ಪಂತ್ ಕೇಸ್ ಬಗ್ಗೆ ಮಾಹಿತಿ ನೀಡಿದರು. ಕೃತ್ಯ ಎಸಗಿದ್ದು 16 ವರ್ಷದ ಅಪ್ರಾಪ್ತ ಬಾಲಕ, ಐಟಿಐ ಓದುತ್ತಿದ್ದಾನೆ.


ವಿಕೃತ ವಿಡಿಯೋ ನೋಡಿ ಕೃತ್ಯ


ಬಾಲಕ ಸದಾ ಮೊಬೈಲ್​​​ನಲ್ಲಿ ವಿಕೃತ ವಿಡಿಯೋಗಳನ್ನು ನೋಡುತ್ತಿದ್ದನು. ಇದರಿಂದ ಪ್ರೇರಿತಗೊಂಡು ಬಹಿರ್ದೆಸೆಗೆ ಹೊರಟ ಬಾಲಕಿಯನ್ನು ಹಿಂಬಾಲಿಸಿದ್ದಾನೆ. ಈತನನ್ನು ನೋಡಿ ಬಾಲಕಿ ಓಡಿ ಹೋದರೂ ಬೆನ್ನಟ್ಟಿ ಹಿಡಿದು ಕಬ್ಬಿನ ಗದ್ದೆಗೆ  ಎಳೆದೊಯ್ದ ಆರೋಪಿ ಕೃತ್ಯ ನಡೆಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದರು.


aland police station crime news, kalaburgi rape and murder case, Kalaburagi Crime news, kannada news, karnataka news, ಕಲಬುರಗಿ ರೇಪ್ ಮರ್ಡರ್​ ಕೇಸ್, ಕಲಬುರಗಿ ಕ್ರೈಂ ನ್ಯೂಸ್​
ಇಶಾ ಪಂತ್, ಎಸ್​ಪಿ


ಪೊಲೀಸರಿಗೆ 1 ಲಕ್ಷ ಬಹುಮಾನ


ಸೂಕ್ತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಯ ಬಂಧನ ಮಾಡಲಾಗಿದೆ. ಕೃತ್ಯ ನಡೆದು 24 ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದೇವೆ. ಈ ಕಾರ್ಯಕ್ಕಾಗಿ ಇಲಾಖೆ ಆಳಂದ ಪೊಲೀಸರಿಗೆ 1 ಲಕ್ಷ ಬಹುಮಾನ ಘೋಷಿಸಲಾಗಿದೆ. ಈ ಪ್ರಕರಣದಲ್ಲಿ ಹತ್ತು ದಿನಗಳ ಒಳಗೆ ಚಾರ್ಜ ಶೀಟ್ ಸಲ್ಲಿಸುತ್ತೇವೆ ಎಂದರು.


ಈ ಮೂಲಕ ಮೃತ ಬಾಲಕಿಗೆ ನ್ಯಾಯ ಕೊಡಲು ಯತ್ನಿಸುವೆವು. ಮೊಬೈಲ್ ಬಳಕೆಯೇ ಈ ಕೃತ್ಯಕ್ಕೆ ಕಾರಣ. ಹೆತ್ತವರು ಮಕ್ಕಳ ಕೈಗೆ ಗೆಜೆಟ್ಸ್​ ಕೊಡುವಾಗ ಎಚ್ಚರಿಕೆ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ಬಳಕೆ ಮಾಡದಿರುವುದೂ ಸಹ ಗಮನಿಸಿರುವೆ. ಈ ಎರಡು ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.


ಇದನ್ನೂ ಓದಿ:  Karnataka Weather Report: ಮನೆಯಿಂದ ಹೊರ ಹೋಗುವ ಮುನ್ನ ಕೈಯಲ್ಲಿರಲಿ ಛತ್ರಿ; ನೆರೆಯ ರಾಜ್ಯದಲ್ಲಿ 72 ವರ್ಷದಲ್ಲೇ ದಾಖಲೆಯ ಮಳೆ


ಮೂಲತಃ ಅಫಜಲ್ಪುರ ತಾಲೂಕಿನ ಬಾಲಕಿ


ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 14 ವರ್ಷದ ಬಾಲಕಿ ಮೂಲತಃ ಅಫಜಲಪುರ ತಾಲೂಕಿನವಳು. ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ವಿದ್ಯಾಭ್ಯಾಸ ಮಾಡಲು ಬಂದಿದ್ದಳು.


aland police station crime news, kalaburgi rape and murder case, Kalaburagi Crime news, kannada news, karnataka news, ಕಲಬುರಗಿ ರೇಪ್ ಮರ್ಡರ್​ ಕೇಸ್, ಕಲಬುರಗಿ ಕ್ರೈಂ ನ್ಯೂಸ್​
ಆಳಂದ ಪೊಲೀಸ್ ಠಾಣೆ


ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ಆಳಂದ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಮತ್ತು ಕಲಬುರಗಿ ನಗರದಲ್ಲಿ ರಾಮ್ ಸೇನೆ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.


ಟ್ಯೂಷನ್​ಗೆ ತೆರಳಿದ್ದ ಬಾಲಕಿ ಶವವಾಗಿ ಪತ್ತೆ


ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್​ನಲ್ಲಿ ಬಾಲಕಿ ಶವಪತ್ತೆಯಾಗಿತ್ತು. ದಿವ್ಯಾ ಮಧ್ಯಾಹ್ನ ಟ್ಯೂಷನ್​ಗೆ ತೆರಳಿದ್ದಳು. ಎಷ್ಟು ಸಮಯ ಕಳೆದರೂ ಬಾಲಕಿ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಡಿದ್ದಾರೆ. ಈ ವೇಳೆ ಟ್ಯೂಷನ್ ಹಿಂಭಾಗದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್​​ನಲ್ಲಿ ಬಾಲಕಿ ಶವ ಪತ್ತೆಯಾಗಿತ್ತು.


ಇದನ್ನೂ ಓದಿ:  BMTC Accident: ಬೈಕ್ ಸವಾರನ ಬಲಿ ಪಡೆದ ಬಿಎಂಟಿಸಿ ಬಸ್; ಚಾಲಕನಿಗೆ ಥಳಿತ


ಸ್ಥಳಕ್ಕೆ ಮಳವಳ್ಳಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಶವಾಗಾರಕ್ಕೆ ರವಾನಿಸಿದ್ದರು. ಇದರ ನಡುವೆ ಬಾಲಕಿಯನ್ನ ಅತ್ಯಾಚಾರವೆಸಗಿ ಕೊಲೆಗೈದಿರುವ ಬಗ್ಗೆ ಪೋಷಕರು ಆರೋಪ ಮಾಡಿದ್ದರು. ಸದ್ಯ ಈಗ ಪೊಲೀಸರ ವಿಚಾರಣೆ ವೇಳೆ ಸತ್ಯ ಬಯಲಾಗಿತ್ತು.

Published by:Mahmadrafik K
First published: