ಯಡಿಯೂರಪ್ಪನವರ ವೈಯಕ್ತಿಕ ದ್ವೇಷಕ್ಕೆ ಬಲಿಯಾದ್ರಾ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ?

ದತ್ತಾತ್ರೇಯ ಪಾಟೀಲ ಹೆಸರು ಮಿಸ್ ಆಗಲು ಸಿಎಂ ಯಡಿಯೂರಪ್ಪ ಮತ್ತು ರೇವೂರ ಕುಟುಂಬದ ನಡುವಿನ ವೈಮನಸ್ಸು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

Latha CG | news18
Updated:August 20, 2019, 12:55 PM IST
ಯಡಿಯೂರಪ್ಪನವರ ವೈಯಕ್ತಿಕ ದ್ವೇಷಕ್ಕೆ ಬಲಿಯಾದ್ರಾ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ?
ದತ್ತಾತ್ರೇಯ ಪಾಟೀಲ ರೇವೂರ್
Latha CG | news18
Updated: August 20, 2019, 12:55 PM IST
ಕಲಬುರ್ಗಿ(ಆ.20): ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ ಎನ್ನಲಾಗಿದೆ. ರಾತ್ರಿಯವರೆಗೂ ಸಂಪುಟ ಸೇರ್ಪಡೆ ಶಾಸಕರ ಪಟ್ಟಿಯಲ್ಲಿ ಪಾಟೀಲರ ಹೆಸರಿತ್ತು. ಆದರೆ ಬೆಳಗಾಗುವುದರೊಳಗಾಗಿ ಅವರ ಹೆಸರು ಪಟ್ಟಿಯಲ್ಲಿ ಕಾಣುತ್ತಿಲ್ಲ ಎನ್ನಲಾಗಿದೆ. ಬಿಜೆಪಿ ಶಾಸಕನ ಹೆಸರು ಮಿಸ್ ಆಗಲು ಸಿಎಂ ಯಡಿಯೂರಪ್ಪ ಮತ್ತು ರೇವೂರ ಕುಟುಂಬದ ನಡುವಿನ ವೈಮನಸ್ಸು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ದತ್ತಾತ್ರೇಯ ತಂದೆ ದಿ.ಚಂದ್ರಶೇಖರ ಪಾಟೀಲ ಮತ್ತು ಯಡಿಯೂರಪ್ಪ ನಡುವೆ ಮುಸುಕಿನ ಗುದ್ದಾಟದಿಂದ ದಕ್ಷಿಣ ಕ್ಷೇತ್ರದ ಶಾಸಕನಿಗೆ ಸಚಿವ ಸ್ಥಾನ ಕೊಡಲು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಚಂದ್ರಶೇಖರ್ ಪಾಟೀಲ ರೇವೂರ ಎರಡು ಬಾರಿ ಶಾಸಕರಾಗಿದ್ದರೂ ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಹೀಗಾಗಿ ಯಡಿಯೂರಪ್ಪ ಮೊದಲ ಬಾರಿ ಸಿಎಂ ಆಗಿದ್ದ ವೇಳೆಯೇ ರೇವೂರ ಬಹಿರಂಗ ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದರು. ಚಂದ್ರಶೇಖರ್ ಪಾಟೀಲ ಅವರ ನಿಧನದ ನಂತರ ಅವರ ಮಗ ದತ್ತಾತ್ರೇಯ ಅವರಿಗೆ ಟಿಕೆಟ್ ಕೊಡದೆ ಯಡಿಯೂರಪ್ಪ ಜಿದ್ದು ಸಾಧಿಸಿಕೊಂಡು ಬಂದಿದ್ದರು. ಈ ವೇಳೆ ಪಾಟೀಲ ತಮ್ಮ ತಾಯಿ ಅರುಣಾ ಪಾಟೀಲರನ್ನು ಜೆಡಿಎಸ್​ನಿಂದ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದರು. ಯಡಿಯೂರಪ್ಪ ಕೆ.ಜೆ.ಪಿ. ಕಟ್ಟಿದ ಮೇಲೆ ದತ್ತಾತ್ರೇಯ ಮತ್ತೆ ಬಿಜೆಪಿಗೆ ಮರಳಿದ್ದರು. ಅದೇ ದ್ವೇಷ ಮನಸ್ಸಿನಲ್ಲಿಟ್ಟುಕೊಂಡಿರುವ ಯಡಿಯೂರಪ್ಪ ಈಗ ಬಿಜೆಪಿ ಶಾಸಕ ಪಾಟೀಲ ಅವರಿಗೆ ಸಚಿವ ಸ್ಥಾನ ಕೊಡಲಿಲ್ಲ ಎನ್ನಲಾಗಿದೆ.

ಬಸನಗೌಡ ಪಾಟೀಲ್ ಯತ್ನಾಳ್​ಗೆ ಸಚಿವ ಸ್ಥಾನ ಕೈತಪ್ಪಲು ಕಾರಣ?

ಸಂಪುಟದಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಾಗಿದೆ ಎಂಬ ನೆಪವೂ ಸಚಿವ ಸ್ಥಾನ ಕೈ ತಪ್ಪಲು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ದತ್ತಾತ್ರೇಯ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿರುತ್ತಾನೆ ಎಂಬ ಗುಮಾನಿಯೂ ಸಹ ಇದೆ. ಆಪರೇಷನ್ ಹಸ್ತ ನಡೆದಿದ್ದರೆ ಕಾಂಗ್ರೆಸ್​ಗೆ ಹೋಗುತ್ತಿದ್ದ ಎಂಬ ಅನುಮಾನವೂ ಸಹ ಇದೆ ಎನ್ನಲಾಗಿದೆ. ದತ್ತಾತ್ರೇಯ ಪಕ್ಷಕ್ಕೆ ನಿಷ್ಟೆಯಿಂದ ಇರಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ. ಅನಂತಕುಮಾರ್ ಬದುಕಿದ್ದರೆ ದತ್ತಾತ್ರೇಯ ಪರ ಬ್ಯಾಟ್ ಮಾಡುತ್ತಿದ್ದರು. ಬಿಜೆಪಿಗೆ ಮತ್ತೆ ವಾಪಸ್ ಕರೆತಂದವರೇ ಅನಂತಕುಮಾರ್.  ಅನಂತಕುಮಾರ್ ಅನುಪಸ್ಥಿತಿಯಲ್ಲಿ ಯಡಿಯೂರಪ್ಪ ತಮಗಿಷ್ಟ ಬಂದಂತೆ ಆಟವಾಡುತ್ತಿದ್ದಾರೆ ಎಂಬ ಆರೋಪ ಇದೆ. ಯಡಿಯೂರಪ್ಪ ಅವರ ವೈಯಕ್ತಿಕ ದ್ವೇಷಕ್ಕೆ ದತ್ತಾತ್ರೇಯ ಪಾಟೀಲ ಬಲಿಯಾದ್ರಾ ಎಂಬ ಮಾತುಗಳು ಕೇಳಿಬರುತ್ತಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

 

First published:August 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...