ಕೊಪ್ಪಳ: ರಾಜ್ಯ ವಿಧಾನಸಭಾ ಚುನಾವಣೆ (Karnataka Election) ಘೋಷಣೆಯಾಗಲಿದೆ. ಚುನಾವಣೆಯ ಮುನ್ನ ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ದಿಗಾಗಿ (State Highway Projects) ಯೋಜನೆಗಳನ್ನು ಕೇಂದ್ರ ಭೂ ಸಾರಿಗೆ ಇಲಾಖೆ ಅನುಮೋದನೆ ನೀಡಿದೆ. ಇದರಿಂದಾಗಿ ಚುನಾವಣೆಯಲ್ಲಿ ಬಿಜೆಪಿ (BJP) ಅಭಿವೃದ್ದಿಯ (Development) ಮೂಲಕ ಚುನಾವಣೆ ಎದುರಿಸಲು ಮುಂದಾಗಿದೆ. ಕರ್ನಾಟಕ ರಾಜ್ಯದ ಆರು ಕಡೆ ಹೆದ್ದಾರಿ ಅಭಿವೃದ್ದಿಗಾಗಿ ಒಟ್ಟು 3,579 ಕೋಟಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗತಿ ಯೋಜನೆಯ (Gati Shakti Yojana ) ಅಡಿಯಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಭಿವೃದ್ದಿ ಪಡಿಸಲಾಗುವುದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 367ರ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ಈ ಮಧ್ಯೆ ಇದೇ ಹೆದ್ದಾರಿಯ ಮೂರು ಪಟ್ಟಣಗಳಿಗೆ ಬೈಪಾಸ್ ರಸ್ತೆ ನಿರ್ಮಿಸಲು ಕೇಂದ್ರ ಸಾರಿಗೆ ಇಲಾಖೆ ಒಪ್ಪಿಗೆ ನೀಡಿ 333,96 ಕೋಟಿ ರೂಪಾಯಿ ಮಂಜೂರು ಮಾಡಿದೆ . ಭಾನಾಪುರದಿಂದ ಗದ್ದನಕೇರಿಯಲ್ಲಿ ಹೆದ್ದಾರಿಯನ್ನು ದ್ವಿಪಥ ಹೆದ್ದಾರಿಯಾಗಿ ಅಭಿವೃದ್ದಿ ಪಡಿಸಲು 445.62 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿದೆ.
ಇದನ್ನೂ ಓದಿ: Amit Shah: ತುಳುನಾಡಲ್ಲಿ ಅಮಿತ್ ಶಾ ರೌಂಡ್ಸ್; ಕರಾವಳಿ ಗೆಲ್ಲಲು ಕೇಸರಿ ಪಡೆ ನಾಯಕರಿಗೆ ಟಾಸ್ಕ್!
ಯಾವ ಯಾವ ಯೋಜನೆಗೆ ಎಷ್ಟು ಅನುದಾನ?
ಕೊಪ್ಪಳ, ಗದಗ, ಬಾಗಲಕೋಟೆ ಜಿಲ್ಲೆಯ ಮೂಲಕ ಹಾಯ್ದು ಹೋಗುವ ಭಾನಾಪುರ ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ವಿವಿಧ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಹೆದ್ದಾರಿಯಲ್ಲಿಯ ಕುಕನೂರು, ಯಲಬುರ್ಗಾ ಹಾಗೂ ಗದಗ ಜಿಲ್ಲೆಯ ಗಜೇಂದ್ರ ಗಡ ಪಟ್ಟಣಕ್ಕೆ ಬೈಪಾಸ್ ನಿರ್ಮಿಸಲು ಒಟ್ಟು 333,96 ಕೋಟಿ ರೂಪಾಯಿ ಯೋಜನೆ ಸಿದ್ದವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯಲ್ಲಿ ಸರ್ಜಾಪುರದಿಂದ ಪಟ್ಟಣದ ಕಲ್ಲಿನವರೆಗೆ 445,62 ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿ ವಿಸ್ತರಣೆಗಾಗಿ ಕಾಮಗಾರಿಗೆ ಅನುಮೋದನೆ, ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿಯ ರಾಷ್ಟ್ರೀಯ ಹೆದ್ದಾರಿ 166ಯ ಕನಮಡಿ ಬಿಜ್ಜರಗಿ ತಿಕೋಟಾ ದ್ವಿಪಥ ರಸ್ತೆ ಅಭಿವೃದ್ದಿಗೆ 196.05 ಕೋಟಿ ರೂಪಾಯಿ ಯೋಜನೆಗೆ ಒಪ್ಪಿಗೆ. ರಾಷ್ಟ್ರೀಯ ಹೆದ್ದಾರಿ 5488ರ ಮಹಾರಾಷ್ಟ್ರದ ಗಡಿಯಲ್ಲಿ ಮೊರ್ರಂನಿಂದ ವಿಜಯಪುರದ ಐಬಿ ದ್ವಿಪಥ ರಸ್ತೆಯ ಅಭಿವೃದ್ದಿಗೆ 957 ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 367ರಲ್ಲಿ 2 ಲೇನ್ ರಸ್ತೆಗೆ 172 ಕೋಟಿ ರೂಪಾಯಿಯನ್ನು ರಾಜ್ಯ ಸರಕಾರ ನೀಡಿದ್ದು ಒಳ್ಳೆಯದು ಎಂದು ಗಡ್ಕರಿ ತಿಳಿಸಿದ್ಧಾರೆ. ಇದೇ ವೇಳೆ 909 ಕೋಟಿ ರೂಪಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275 ಕುಶಾಲನಗರ ಮೈಸೂರು ಹೆದ್ದಾರಿಗೆ ರಸ್ತೆ ಪಕ್ಕದ ಹೆದ್ದಾರಿ ಅಭಿವೃದ್ದಿ ಹಾಗೂ ಮೂಲಭೂತ ಸೌಲಭ್ಯ ಹಾಗೂ ಮೈಸೂರು ಜಿಲ್ಲೆಯ ಗುಡ್ಡೆಹೊಸೂರು ಬಳಿ ಬೈಪಾಸ್ ರಸ್ತೆಗೆ ನಿರ್ಮಾಣ, ಯಲೇಚನಳ್ಳಿ ರೋಡ್ ಜಂಕ್ಷನ್ ಶ್ರೀರಂಗಪಟ್ಟಣಕ್ಕೆ ಬೈಪಾಸ್ ನಿರ್ಮಾಣಕ್ಕೆ 739.39 ಕೋಟಿ ರೂಪಾಯಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ.
ರಾಜ್ಯದ 15 ಕಡೆ ರೋಪ್ ವೇ
ಇದೇ ವೇಳೆ ರಾಜ್ಯದ 15 ಕಡೆ ರೋಪ್ ವೇ ನಿರ್ಮಿಸಲಾಗುವುದು ಎಂದು ಗಡ್ಕರಿ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸಭಾ ಸದಸ್ಯ ನಾರಾಯಣ ಕೊರಗಪ್ಪ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಈಗಾಗಲೇ ಕೊಡಚಾದ್ರಿಗೆ ರೋಪ್ ವೇ ನಿರ್ಮಿಸಲು ಸಮೀಕ್ಷೆ ಮಾಡಲಾಗಿದೆ. ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ ನಂದಿಬೆಟ್ಟ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಚಾಮುಂಡಿ ಬೆಟ್ಟ, ಕೊಡಚಾದ್ರಿ, ದೇವರಾಯನದುರ್ಗಾ, ಮಧುಗಿರಿ ಕೋಟೆ, ಜೋಗಜಲಪಾತ, ಸಾಗರ ಹಿನ್ನೀರು, ಯಾಣ, ಜೋಯ್ಡಾ, ಚಪೇಲ, ಕುಮಾರಪರ್ವತ, ರಾಜ ಹೌಸ್ ಗಡ್ಡಕ್ಕೆ ರೋಪ್ ವೇ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದರಿಂದಾಗಿ ರಾಜ್ಯದಲ್ಲಿ ಹೆದ್ದಾರಿಗಳಿಗೆ ಕೇಂದ್ರ ಸರಕಾರ ಸಾಕಷ್ಟು ಅನುದಾನ ನೀಡಿದೆ. ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರದ ಹೆದ್ದಾರಿ ಹಾಗೂ ರೋಪ್ ವೇಗಳ ನಿರ್ಮಾಣದ ಘೋಷಣೆಗಳು ಚುನಾವಣೆಯ ತಂತ್ರಗಾರಿಕೆ ಇದೆ ಎಂದು ಸಹ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ