• Home
  • »
  • News
  • »
  • state
  • »
  • Tauktae Cyclone: ಎನ್​ಡಿಆರ್​ಎಫ್ ಅಧಿಕಾರಿಗಳೊಂದಿಗೆ ಸಚಿವರ ಸಭೆ; ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್!

Tauktae Cyclone: ಎನ್​ಡಿಆರ್​ಎಫ್ ಅಧಿಕಾರಿಗಳೊಂದಿಗೆ ಸಚಿವರ ಸಭೆ; ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್!

ಚಂಡಮಾರುತ

ಚಂಡಮಾರುತ

ಉಡುಪಿ ಭಾಗದಲ್ಲಿ ಕಡಲ ಕೊರೆತ ಆಗುತ್ತೆ. ಮೀನುಗಾರಿಕಾ ಹಳ್ಳಿಗಳು ಅಲ್ಲಿವೆ. ಅಲ್ಲಿ ಶಿಫ್ಟಿಂಗ್ ಕಾರ್ಯ ನಡೆದಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿ ಕೆಲಸ ಮಾಡಬೇಕು.  ನಮ್ಮ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ.  ಇದೇ 17ರ ನಂತರ ರಾಜ್ಯದ ಮೇಲೆ ಚಂಡಮಾರುತದ ಪರಿಣಾಮ ಕಡಿಮೆಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮುಂದೆ ಓದಿ ...
  • Share this:

ಬೆಂಗಳೂರು: ರಾಜ್ಯದಲ್ಲಿ ತೌಕ್ತೆ ಚಂಡಮಾರುತ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರಾದ ಆರ್ ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದರು. ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾಗುವ ಪ್ರದೇಶದಲ್ಲಿ ಎಚ್ಚರಿಕೆ ತಗೆದುಕೊಳ್ಳುವ ಬಗ್ಗೆ ‌ ಹಾಗೂ ರಾಜ್ಯದಲ್ಲಿ ಎದುರಾಗುವ ಅವಘಡಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.


ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್,   ತೌಕ್ತೆ ಚಂಡಮಾರುತ ಲಕ್ಷದ್ವೀಪದಲ್ಲಿ ಕೇಂದ್ರೀಕೃತವಾಗಿದೆ. ರಾಜ್ಯದಿಂದ ಕೇವಲ 200 ಕಿ.ಮೀ ದೂರದಲ್ಲಿದೆ. ಹವಾಮಾನ ಕೇಂದ್ರದಿಂದ ಪ್ರತಿ ನಿಮಿಷಕ್ಕೂ ಮಾನಿಟರ್ ಆಗ್ತಿದೆ.  ಬೆಂಗಳೂರಿನ ಜಿಕೆವಿಕೆಯಲ್ಲಿ ಕೇಂದ್ರವಿದೆ. ಇಂದು ರಾತ್ರಿ ದಕ್ಷಿಣ ಕನ್ನಡ, ಉತ್ತರ ಕನ್ನಡಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. 60 ಕಿ.ಮೀ. ವೇಗದಲ್ಲಿ ಇದು ಬೀಸುತ್ತಿದೆ. ಮೇ 18 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ತಗ್ಗುಪ್ರದೇಶಗಳಿಂದ ಜನರ ಸ್ಥಳಾಂತರಕ್ಕೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಮೂರು ಜಿಲ್ಲೆಗಳಲ್ಲಿ 8 ರಿಲೀಫ್ ಕ್ಯಾಂಪ್ ಮಾಡಲಾಗಿದೆ. ಕಷ್ಟಕ್ಕೆ ಸಿಲುಕಿದವರಿಗೆ ಅಲ್ಲಿ ಪುನರ್ ವ್ಯವಸ್ಥೆ ಮಾಡಲಾಗುತ್ತದೆ. 10 ಸಾವಿರ ಜನರನ್ನು ಆ ಕ್ಯಾಂಪ್ ನಲ್ಲಿ ಇರಿಸಬಹುದು. ಎರಡು ಎನ್​ಡಿಆರ್​ಎಫ್ ತಂಡಗಳು ಬಂದಿವೆ. ದಕ್ಷಿಣ ಕನ್ನಡದಲ್ಲಿ ಒಂದು ತಂಡ ಹಾಗೂ ಕೊಡಗಿನಲ್ಲಿ 1 ತಂಡ ಇರಲಿವೆ. ಇದರ ಜೊತೆ ನಮ್ಮ ಎಸ್​ಡಿಆರ್​ಎಫ್ ತಂಡ ಸೇರಲಿದೆ ಎಂದು ಮಾಹಿತಿ ನೀಡಿದರು.


ಮೂರು ಜಿಲ್ಲೆಗಳಲ್ಲಿ ಯಾರಿಗೂ ರಜೆಯಿಲ್ಲ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಅಲರ್ಟ್ ಇಡಲಾಗಿದೆ. ನಮ್ಮ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.  ಯಾವುದೇ ಹಣ ಕೊರತೆಯಾಗದಂತೆ ಗಮನ ಹರಿಸಿದ್ದೇವೆ.  ಉಡುಪಿಗೆ 23 ಕೋಟಿ, ಉತ್ತರಕನ್ನಡಕ್ಕೆ 60 ಕೋಟಿ, ದಕ್ಷಿಣ ಕನ್ನಡಕ್ಕೆ 12 ಕೋಟಿ ಹಣ ಮೀಸಲಿಡಲಾಗಿದೆ.  ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್​ನಲ್ಲಿ ಹಣ ಇಡಲಾಗಿದೆ ಎಂದು ಆರ್. ಅಶೋಕ್ ಹೇಳಿದರು.


ಇದನ್ನು ಓದಿ: Karnataka Rain: ಕರ್ನಾಟಕದಲ್ಲಿ ಇಂದಿನಿಂದ ಭಾರೀ ಮಳೆ; ಶಿವಮೊಗ್ಗ, ಕರಾವಳಿ, ಕೊಡಗು ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​


ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮೂರು ಜಿಲ್ಲೆಗಳಲ್ಲಿ ಚಂಡಮಾರುತ ಬರಲಿದೆ. ಇದರ ಎಫೆಕ್ಟ್ ಅಕ್ಕಪಕ್ಕದ ಜಿಲ್ಲೆಗಳ ಮೇಲಾಗಲಿದೆ.  ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿಗೆ ಮಳೆ ಆಗಲಿದೆ. ಕಂದಾಯ ಇಲಾಖೆ ಈಗಾಗಲೇ ಗಮನಹರಿಸಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಿದ್ದೇವೆ. ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ತಂಡ ಸೈಕ್ಲೋನ್ ಎದುರಿಸಲು ಸನ್ನದ್ಧವಾಗಿದೆ. ಜನರಿಗೆ ಎಚ್ಚರಿಸುವ ಅಧುನಿಕ ಸೈರನ್ ವ್ಯವಸ್ಥೆಯಿದೆ. ಅಗತ್ಯ ಸಲಕರಣೆಗಳನ್ನು ಈಗಾಗಲೇ ಸಿದ್ಧ ಮಾಡಿಕೊಂಡಿದ್ದೇವೆ. ಬಸ್, ಲಾರಿ, ಜೀಪ್​ಗಳನ್ನು ರೆಡಿ ಮಾಡಿಕೊಂಡಿದ್ದೇವೆ. 15 ಕೋಟಿ ವೆಚ್ಚದಲ್ಲಿ ಸಲಕರಣೆ ಖರೀದಿಸಿದ್ದೇವೆ. 436 ಜನ ಎಸ್​ಡಿಆರ್​ಎಫ್​ ಸಿಬ್ಬಂದಿಯಿದ್ದಾರೆ. ಬೆಂಗಳೂರು,ಕಲಬುರಗಿಗೂ ತಂಡ ಕಳುಹಿಸುತ್ತೇವೆ.  ಅಗ್ನಿಶಾಮಕ, ಪೊಲೀಸ್, ಕೋಸ್ಟಲ್ ಗಾರ್ಡ್ ಸೇರಿ 1 ಸಾವಿರ ಇದ್ದಾರೆ. ಕಳೆದ ವರ್ಷ ಎಕ್ಸ್ ಆರ್ಮಿ ಪರ್ಸನ್ ನೇಮಕ ಮಾಡಿದ್ದೆವು. ಈ ಭಾರಿಯು ಮಾಜಿ ಸೈನಿಕರನ್ನು ನೇಮಕ ಮಾಡಿಕೊಳ್ಳುತ್ತೇವೆ. ಮೂರು ಜಿಲ್ಲೆಗಳಲ್ಲಿ ನಮ್ಮ ಸಿಬ್ಬಂದಿ ಇದ್ದಾರೆ. ಸ್ಥಳೀಯ ಜಿಲ್ಲಾಡಳಿತದ ಜೊತೆ ಕೆಲಸ ನಿರ್ವಹಿಸುತ್ತಿದೆ. ಇನ್ನಷ್ಟು ಎನ್​ಡಿಆರ್​ಎಫ್ ಟೀಂ ಕಳಿಸಲು  ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಇನ್ನು ಎರಡು ತಂಡಗಳು ರಾಜ್ಯಕ್ಕೆ ಆಗಮಿಸಲಿವೆ ಎಂದರು.


ಉಡುಪಿ ಭಾಗದಲ್ಲಿ ಕಡಲ ಕೊರೆತ ಆಗುತ್ತೆ. ಮೀನುಗಾರಿಕಾ ಹಳ್ಳಿಗಳು ಅಲ್ಲಿವೆ. ಅಲ್ಲಿ ಶಿಫ್ಟಿಂಗ್ ಕಾರ್ಯ ನಡೆದಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿ ಕೆಲಸ ಮಾಡಬೇಕು.  ನಮ್ಮ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ.  ಇದೇ 17ರ ನಂತರ ರಾಜ್ಯದ ಮೇಲೆ ಚಂಡಮಾರುತದ ಪರಿಣಾಮ ಕಡಿಮೆಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Published by:HR Ramesh
First published: