ಬರೋಬ್ಬರಿ 15 ವರ್ಷಗಳ ಬಳಿಕ ತುಂಬಿದ ಕೋಲಾರದ ದೊಡ್ಡ ಕೆರೆ; ಸಂಸದ, ಶಾಸಕರಿಂದ ಬಾಗಿನ ಅರ್ಪಣೆ

ಬಳಿಕ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಈಗಾಗಲೇ ಜಿಲ್ಲೆಯಾದ್ಯಂತ ಕೆಸಿ ವ್ಯಾಲಿ ನೀರಿಂದ 75 ಕೆರೆಗಳು ತುಂಬಿದ್ದು, ಮುಂದೆ ಎರಡನೇ ಹಂತದಲ್ಲಿ 250 ಕ್ಕೂ ಹೆಚ್ಚಿನ ಕೆರೆಗಳನ್ನ ಯೋಜನೆಯಡಿ ತುಂಬಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಅದಕ್ಕಾಗಿ 450 ಕೋಟಿ ವೆಚ್ಚದ ಡಿಪಿಆರ್ ಸಿದ್ದಪಡಿಸಲಾಗಿದೆ ಎಂದರು.

news18-kannada
Updated:September 14, 2020, 10:27 AM IST
ಬರೋಬ್ಬರಿ 15 ವರ್ಷಗಳ ಬಳಿಕ ತುಂಬಿದ ಕೋಲಾರದ ದೊಡ್ಡ ಕೆರೆ; ಸಂಸದ, ಶಾಸಕರಿಂದ ಬಾಗಿನ ಅರ್ಪಣೆ
ಬಾಗಿನ ಸಮರ್ಪಣೆ
  • Share this:
ಕೋಲಾರ(ಸೆ.14): ಕೋಲಾರದಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ, ಕೋಲಾರ ತಾಲೂಕಿನ ದೊಡ್ಡ ಕೆರೆ ಎಂದೇ ಪ್ರಸಿದ್ದಿ ಪಡೆದಿರುವ 1120 ಎಕರೆಯ ಎಸ್ ಅಗ್ರಹಾರ ಕೆರೆ ತುಂಬಿ ಕೋಡಿ ಹರಿದಿದೆ. ಈ ಹಿನ್ನಲೆ ಸಂಸದರು, ಶಾಸಕರು ಭಾನುವಾರ ತುಂಬಿದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ ಮಾಡಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಶ್ರೀನಿವಾಸಗೌಡ, ಕೃಷ್ಣಭೈರೇಗೌಡ, ಸಂಸದ ಎಸ್ ಮುನಿಸ್ವಾಮಿ ಅವರು ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಇದೇ ವೇಳೆ ಬಾಗಿನ ಅರ್ಪಿಸಲು ಆಗಮಿಸಿದ ನಾಯಕರಿಗೆ ವಾದ್ಯಗೋಷ್ಟಿಯ ಸಮೇತ ಸ್ವಾಗತ ಕೋರಲಾಯಿತು. ಇತ್ತೀಚೆಗೆ ಸುರಿದ ಮಳೆಯಿಂದ ತುಂಬಿದ ಕೆರೆಯಿಂದ ನೀರು ಧುಮ್ಮುಕ್ಕಿ ಕೋಡಿ ಹರಿಯುತ್ತಿದ್ದು, ಪ್ರವಾಸಿ ತಾಣವಾಗಿ ರೂಪುಗೊಂಡಿದೆ.  ಕೋಲಾರದಲ್ಲಿ ಕಳೆದೊಂದು ವಾರದಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಧುಮುಕುತ್ತಿರುವ ನೀರಲ್ಲಿ ನೂರಾರು ಜನರು ಮಿಂದೆದ್ದು ಮಸ್ತಿಯಲ್ಲಿ ತೊಡಗಿದ್ದು ಕಂಡುಬಂತು. ಇನ್ನು ಸಾವಿರಾರು ಜನರು ಕೆರೆ ವೀಕ್ಷಣೆಗೆ ಆಗಮಿಸುತ್ತಿರುವ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ, ಕೆರೆಯಲ್ಲಿ ಈಜಾಡದಂತೆ ಸ್ಥಳದಲ್ಲಿ ಪೊಲೀಸರನ್ನ ನಿಯೋಜಿಸಿ, ಸೂಚನಾ ಫಲಕವನ್ನು ಹಾಕಲಾಗಿದೆ.

ಬಾಗಿನ ಸಮರ್ಪಣೆ ನಂತರ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಕೃಷ್ಣಭೈರೇಗೌಡ ಮತ್ತು ಶಾಸಕ ಶ್ರೀನಿವಾಸಗೌಡ, ಬೆಂಗಳೂರಿನ ಸಂಸ್ಕರಿಸಿದ ಕೊಳಚೆ ನೀರನ್ನು ಕೋಲಾರ ಜಿಲ್ಲೆಗೆ ಹರಿಸುವ ಕೆಸಿ ವ್ಯಾಲಿ ಯೋಜನೆ ಆರಂಭಿಸಲು ಸಿದ್ದರಾಮಯ್ಯ ಅವರು ಅನುದಾನ ಬಿಡುಗಡೆ ಮಾಡಿದ್ದನ್ನು ಶ್ಲಾಘಿಸಿದರು. ಕೇವಲ ಯೋಜನೆ ಬಗ್ಗೆ ವಿವರಿಸಿದ್ದನ್ನ ಅಂದು ಸಿದ್ದರಾಮಯ್ಯನವರು ಒಪ್ಪಿದ್ದರು ಎಂದು ಶಾಸಕ ಕೃಷ್ಣಭೈರೇಗೌಡ ತಿಳಿಸಿದರು. ದೇಶದಲ್ಲೇ ಎಲ್ಲೂ ಸಂಸ್ಕರಿಸಿದ ನೀರನ್ನ ಅಂತರ್ಜಲ ವೃದ್ಧಿಗೆ ಬಳಸುತ್ತಿರುವ ಉದಾಹರಣೆ ಇಲ್ಲ, ಆದರೆ ಕೋಲಾರದ ಕೆಸಿ ವ್ಯಾಲಿ ಯೋಜನೆ ದೇಶಕ್ಕೆ ಮಾದರಿಯಾಗಿದೆ ಎಂದು ಕೃಷ್ಣಭೈರೇಗೌಡ ಅವರು ಸಂತಸ ವ್ಯಕ್ತಪಡಿಸಿದರು.

Thank You Coronavirus Helpers: ಕೊರೋನಾ ವಾರಿಯರ್ಸ್​​​​​ಗೆ ಧನ್ಯವಾದ ಹೇಳಿದ ಗೂಗಲ್ ಡೂಡಲ್

ಬಳಿಕ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಈಗಾಗಲೇ ಜಿಲ್ಲೆಯಾದ್ಯಂತ ಕೆಸಿ ವ್ಯಾಲಿ ನೀರಿಂದ 75 ಕೆರೆಗಳು ತುಂಬಿದ್ದು, ಮುಂದೆ ಎರಡನೇ ಹಂತದಲ್ಲಿ 250 ಕ್ಕೂ ಹೆಚ್ಚಿನ ಕೆರೆಗಳನ್ನ ಯೋಜನೆಯಡಿ ತುಂಬಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಅದಕ್ಕಾಗಿ 450 ಕೋಟಿ ವೆಚ್ಚದ ಡಿಪಿಆರ್ ಸಿದ್ದಪಡಿಸಲಾಗಿದೆ ಎಂದರು. ಇನ್ನು  ಎತ್ತಿನಹೊಳೆ ಯೋಜನೆಯ  ಭೂ ಸ್ವಾದೀನ ಪ್ರಕ್ರಿಯೆ ತಡವಾಗಿದ್ದರಿಂದ ಯೋಜನೆಗೆ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತ ಕೋಲಾರದ ಕುಡಿಯುವ ನೀರಿನ ಯೋಜನೆಯಾದ, ಯರಗೋಳ್ ಕುಡಿಯುವ ನೀರಿನ ಡ್ಯಾಮ್ ಕಾಮಗಾರಿ,  ಡಿಸೆಂಬರ್ ವೇಳೆಗೆ ಮುಗಿಯಲಿದೆ ಎಂದು ರಮೇಶ್‍ಕುಮಾರ್ ತಿಳಿಸಿದರು.

ಎಸ್ ಅಗ್ರಹಾರ ಕೆರೆಯ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿ ಮಾಡಲು ಸಂಸದ ಎಸ್ ಮುನಿಸ್ವಾಮಿ ಸೂಚನೆ

ಇನ್ನು ಇದೇ ವೇಳೆ ಮಾತನಾಡಿದ ಸಂಸದ ಎಸ್ ಮುನಿಸ್ವಾಮಿ, ಕೆರೆಗಳನ್ನ ಉಳಿಸಲು ಈಗಾಗಲೇ ಎಲ್ಲಾಕಡೆ ಸರ್ವೇ ಕಾರ್ಯ ಚುರುಕಾಗಿ ನಡೆಯುತ್ತಿದೆ. ಅಗ್ರಹಾರ ಕೆರೆಯ ಸುತ್ತಲಿನ ಸರ್ಕಾರಿ ಜಾಗದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಉದ್ಯಾನವನ, ಹೋಟೆಲ್, ವನ್ಯಜೀವಿ ತಾಣ ಮಾಡಲು ಪರಿಶೀಲನೆ ನಡೆಸುವಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು, ಕೆಸಿ ವ್ಯಾಲಿ ನೀರು ಈ ಮೊದಲು ಅರ್ಧಂಬರ್ಧ ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂಬ ಆರೋಪವಿತ್ತು. ಆದರೆ ಕ್ರಮೇಣವಾಗಿ ಕೆರೆಗಳು ತುಂಬಿದ ನಂತರ ಎಲ್ಲವನ್ನು ಸರಿಪಡಿಸಲಾಗುತ್ತೆ, ಈ ಬಗ್ಗೆ ಜನರಿಗೆ ಆತಂಕ ಬೇಡ ಎಂದು ಸಲಹೆ ನೀಡಿದರು.
Published by: Latha CG
First published: September 14, 2020, 10:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading