ಡಿಕೆಶಿ, ರಮೇಶ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ ಪರಿವಾರ - ಸತೀಶ್ ಜಾರಕಿಹೊಳಿ

ಸಚಿವರಾದ ಡಿಕೆಶಿ, ರಮೇಶ ಜಾರಕಿಹೊಳಿ ಮೊದಲಿನಿಂದಲೂ ಗೆಳೆಯರು, ಅಷ್ಟೇ ಅಲ್ಲ ಮೂರು ಜನ ಒಂದೇ ಪರಿವಾರ. ಮೊದಲಿನಿಂದಲೂ ಮೂರು ಜನ ಕೂಡಿಯೇ ಇದ್ದವರು. ಪರಿವಾರ ಒಡೆಯುವಲ್ಲಿ ನನ್ನದು ಯಾವುದೇ ಪಾತ್ರವಿಲ್ಲ

G Hareeshkumar | news18
Updated:December 1, 2018, 8:28 PM IST
ಡಿಕೆಶಿ, ರಮೇಶ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ ಪರಿವಾರ - ಸತೀಶ್ ಜಾರಕಿಹೊಳಿ
ಸಂಗ್ರಹ ಚಿತ್ರ
G Hareeshkumar | news18
Updated: December 1, 2018, 8:28 PM IST
- ಚಂದ್ರಕಾಂತ್ ಸುಗಂಧಿ

ಬೆಳಗಾವಿ ( ಡಿ.01) :  ಸಚಿವರಾದ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ ಪರಿವಾರ ಎಂದು ಶಾಸಕ ಸತೀಶ್ ಜಾರಕಿಹೊಳಿ ವ್ಯಂಗವಾಡಿದ್ದಾರೆ.

ಇದನ್ನು ಓದಿ :  ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ; ಸಿದ್ದರಾಮಯ್ಯ ಬಳಿ ಅಸಮಾಧಾನ ಹೊರಹಾಕಿದ ರಮೇಶ್​ ಜಾರಕಿಹೊಳಿ

ಸಚಿವರಾದ ಡಿಕೆಶಿ, ರಮೇಶ ಜಾರಕಿಹೊಳಿ ಮೊದಲಿನಿಂದಲೂ ಗೆಳೆಯರು, ಅಷ್ಟೇ ಅಲ್ಲ ಮೂರು ಜನ ಒಂದೇ ಪರಿವಾರ. ಮೊದಲಿನಿಂದಲೂ ಮೂರು ಜನ ಕೂಡಿಯೇ ಇದ್ದವರು. ಪರಿವಾರ ಒಡೆಯುವಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ಇವರ ಸಂಪರ್ಕಕ್ಕೆ ಕೇವಲ 6 ತಿಂಗಳ ಹಿಂದಷ್ಟೆ ನಾನು ಬಂದಿದ್ದೇನೆ. ಹಾಗಾಗಿ ಇವರ ಹಳೆ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೆ. ನಂತರ ರಮೇಶ್ ಜಾರಕಿಹೊಳಿ ನನ್ನ ಜತೆಗೆ ಕೂಡಿ ಕೊಂಡಿದ್ದರು. ಪರಿವಾರ ಒಡೆದಿದೆ ಎಂದು ಮಾಧ್ಯಮಗಳೇ ಅವರನ್ನು ಕೇಳಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

ಅಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಮನವೊಲಿಸುವಲ್ಲಿ ಸಚಿವ ಡಿಕೆಶಿ ಸಕ್ಸಸ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, 'ಬೇರೆ ಜಿಲ್ಲೆಯ ನಾಯಕರು ಇಲ್ಲಿ ಬಂದು ಷರಬತ್ತು ಕುಡಿಸಿದರೆ ನಾಯಕರು ಆಗಲ್ಲ. ಷರಬತ್ತು ಮತ್ತು ಕಬ್ಬಿನ ರಸದಿಂದ ನಾಯಕತ್ವ ಬರಲ್ಲ. ನಾವು ಬೇರೆ ಜಿಲ್ಲೆಯಲ್ಲಿ ಧರಣಿ ನಿರತರ ಮನವೊಲಿಸಿದ್ದೇವೆ. ಆದರೆ ನಾವು ಅಲ್ಲಿ ಹೋಗಿ  ನಾಯಕರಾಗುವುದಕ್ಕೆ ಆಗಲ್ಲ. ಸಚಿವ ಡಿಕೆ ಶಿವಕುಮಾರ್ ಅವರು ತಮ್ಮ ಕರ್ತವ್ಯವನ್ನು ಅಷ್ಟೇ ಮಾಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಬೆರಸಬಾರದು ಎಂದು ಹೇಳಿದರು.

ಇದನ್ನು ಓದಿ :  ಬೆಳಗಾವಿಯಲ್ಲಿ ಡಿಕೆಶಿ ಪವರ್: ಪ್ರತಿಭಟನೆ ಕೈಬಿಟ್ಟ ಕಬ್ಬು ಬೆಳೆಗಾರರು
Loading...

First published:December 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...