ಕಂಬಳ ವೀರ ಶ್ರೀನಿವಾಸ್​ ಗೌಡಗೆ ಚೆಕ್​ ರಹಿತ ಖಾಲಿ ಕವರ್​ ನೀಡಿ ಪೋಟೋಗೆ ಪೋಸ್ ಕೊಟ್ಟ​ ಸಿ.ಟಿ. ರವಿ, ಹೆಬ್ಬಾರ್​

ಕಂಬಳ ವೀರ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂದು ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಸಿಎಂ ಯಡಿಯೂರಪ್ಪ ಸನ್ಮಾನ ಮಾಡಿದ್ದಾರೆ. ಆದರೆ, ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ ಗೌಡ ಅವರಿಗೆ ಚೆಕ್​ ರಹಿತ ಕವರ್ ನೀಡಲಾಗಿದೆ.

news18-kannada
Updated:February 17, 2020, 5:05 PM IST
ಕಂಬಳ ವೀರ ಶ್ರೀನಿವಾಸ್​ ಗೌಡಗೆ ಚೆಕ್​ ರಹಿತ ಖಾಲಿ ಕವರ್​ ನೀಡಿ ಪೋಟೋಗೆ ಪೋಸ್ ಕೊಟ್ಟ​ ಸಿ.ಟಿ. ರವಿ, ಹೆಬ್ಬಾರ್​
ಕಂಬಳ ವಿರ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ಮಾಡುತ್ತಿರುವ ಬಿ.ಎಸ್.​ ಯಡಿಯೂರಪ್ಪ, ಸಿ.ಟಿ. ರವಿ, ಶಿವರಾಮ್ ಹೆಬ್ಬಾರ್​.
  • Share this:
ಬೆಂಗಳೂರು (ಫೆಬ್ರವರಿ 17); ಕರಾವಳಿ ಗ್ರಾಮೀಣ ಕ್ರೀಡೆ ಕಂಬಳದಲ್ಲಿ 100 ಮೀಟರ್ ಅಂತರವನ್ನು ಕೇವಲ 9.5 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದ ಶ್ರೀನಿವಾಸ ಗೌಡ ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅಲ್ಲದೆ, ಅಷ್ಟೇ ಖ್ಯಾತಿಯನ್ನೂ ಪಡೆದಿದ್ದರು. ಆದರೆ, ಹೀಗೆ ಖ್ಯಾತಿ ಪಡೆದ ಶ್ರೀನಿವಾಸ ಗೌಡ ಅವರನ್ನು ಸಚಿವ ಸಿ.ಟಿ. ರವಿ, ಶಿವರಾಮ್ ಹೆಬ್ಬಾರ್ ಪ್ರಚಾರಕ್ಕಾಗಿ ಬಳಸಿಕೊಂಡಿರುವ ಘಟನೆ ಇಂದು ವಿಧಾನಸೌಧದಲ್ಲಿ ದಾಖಲಾಗಿದೆ.

ಕಂಬಳ ವೀರ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂದು ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಸಿಎಂ ಯಡಿಯೂರಪ್ಪ ಸನ್ಮಾನ ಮಾಡಿದ್ದಾರೆ. ಆದರೆ, ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ ಗೌಡ ಅವರಿಗೆ ಚೆಕ್​ ರಹಿತ ಕವರ್ ನೀಡಲಾಗಿದೆ.

ಇದನ್ನು ನೀಡುವ ವೇಳೆ ಖಾಲಿ ಚೆಕ್​ ಎಂದು ಸಚಿವ ಸಿ.ಟಿ. ರವಿ, ಕೈ ಸನ್ನೆ ಮಾಡಿದರೆ, ಅದಕ್ಕೆ ಸರಿ ಎಂದು ತಲೆ ಅಲ್ಲಾಡಿಸಿರುವ ಸಚಿವ ಶಿವರಾಮ್ ಹೆಬ್ಬಾರ್​ ಖಾಲಿ ಕವರ್​ ಅನ್ನೇ ಶ್ರೀನಿವಾಸ ಗೌಡ ಅವರಿಗೆ ನೀಡಿ ಪ್ರಚಾರಕ್ಕಾಗಿ ಪೋಟೋಗೆ ಫೋಸ್​ ನೀಡಿ ಹೊರಟಿದ್ದಾರೆ. ಆದರೆ, ಕಾರ್ಯಕ್ರಮ ಮುಗಿದ ಅರ್ಧ ಗಂಟೆಯ ನಂತರ ಕಾರ್ಮಿಕ ಇಲಾಕೆ 3 ಲಕ್ಷದ ಚೆಕ್​ ಅನ್ನು ಕಂಬಳದ ವೀರ ಶ್ರೀನಿವಾಸ ಗೌಡ ಅವರಿಗೆ ನೀಡಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಇದನ್ನೂ ಓದಿ : ನಿರ್ಭಯಾ ಅಪರಾಧಿಗಳಿಗೆ ನಾಲ್ಕನೇ ಬಾರಿಗೆ ಡೆತ್​ ವಾರೆಂಟ್​ ಹೊರಡಿಸಿದ ಪಟಿಯಾಲ ಕೋರ್ಟ್​​; ಮಾರ್ಚ್​.3 ಕ್ಕೆ ಗಲ್ಲು

First published: February 17, 2020, 5:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading