ಸೆಪ್ಟೆಂಬರ್‌ 29ಕ್ಕೆ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ; ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ

ಗಜಪಡೆ ಸೋಮವಾರ ಅರಮನೆ ಪ್ರವೇಶ ಮಾಡಲಿದೆ. ಹೀಗಾಗಿ ಆನೆಗಳ ಜತೆ ಬಂದಿರುವ ಮಾವುತರು, ಕವಾಡಿಗಳಿಗೆ ಉತ್ತಮ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಒಂದು ದಿನ ಮೈಸೂರು ಪೌರ ಕಾರ್ಮಿಕರಿಗೆ ಔತಣ ಕೂಟ ಏರ್ಪಡಿಸಲಾಗುತ್ತದೆ.

G Hareeshkumar | news18
Updated:August 24, 2019, 4:43 PM IST
ಸೆಪ್ಟೆಂಬರ್‌ 29ಕ್ಕೆ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ; ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ
ಸಚಿವ ವಿ ಸೋಮಣ್ಣ
G Hareeshkumar | news18
Updated: August 24, 2019, 4:43 PM IST
ಮೈಸೂರು ( ಆ.24) : ಸೆಪ್ಟೆಂಬರ್‌ 29 ರಂದು ಬೆಳಿಗ್ಗೆ 9:30 ರಿಂದ 10:20 ರೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವ ಉದ್ಘಾಟನೆಯಾಗಲಿದೆ. ಸಾಹಿತಿ ಎಸ್.ಎಲ್ ಭೈರಪ್ಪ ಅವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಅಕ್ಟೊಬರ್‌ 8 ರಂದು  2:15 ರಿಂದ 2:58 ರೊಳಗೆ ಸಲ್ಲುವ ಶುಭಲಗ್ನದಲ್ಲಿ ಅರಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ 4:30 ರಿಂದ 4:58 ರಲ್ಲಿ ಸಲ್ಲುವ ಮಕರ ಶುಭಲಗ್ನದಲ್ಲಿ  ದಸರಾ ಉದ್ಘಾಟಕರಾದ ಎಸ್ ಎಲ್ ಬೈರಪ್ಪ ಹಾಗೂ ಮುಖ್ಯಮಂತ್ರಿಗಳಿಂದ ದಸರಾ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಈ ಬಾರಿಯ ದಸರಾದಲ್ಲಿ ವಿಭಿನ್ನ ಕಾರ್ಯಕ್ರಮ ಅಳವಡಿಕೆ.

ದಸರಾ ಪಾಸ್ ಗೊಂದಲಕ್ಕೆ ತೆರೆ ಬಿದ್ದಿದೆ. ಇನ್ನು ಹತ್ತು ದಿನಗಳಲ್ಲಿ ದಸರಾ ಪಾಸ್ ರೆಡಿಯಾಗಲಿದೆ. ದಸರಾ ಸಂಬಂಧ ಗೊಂದಲ ನಿವಾರಣೆಗೆ ಒಂದು ಕಾಲ್ ಸೆಂಟರ್ ತೆರೆಯಲಾಗುತ್ತದೆ ಎಂದು ಮಾಹಿತಿ ನೀಡಿದ ವಿ.ಸೋಮಣ್ಣ, ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳಿಗೆ ನಾನೇ ಫಲ ತಾಂಬೂಲ ಕೊಟ್ಟು ಆಹ್ವಾನ ನೀಡುತ್ತೇನೆ. ಅರಮನೆಗೆ ತೆರಳಿ ರಾಜಮನೆತನಕ್ಕೆ ಆಹ್ವಾನ ನೀಡಿ, ಪ್ರತಿ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗಲು ಕೋರುತ್ತೇನೆ ಎಂದರು.

ಗಜಪಡೆ ಸೋಮವಾರ ಅರಮನೆ ಪ್ರವಾಸ

ಗಜಪಡೆ ಸೋಮವಾರ ಅರಮನೆ ಪ್ರವೇಶ ಮಾಡಲಿದೆ. ಹೀಗಾಗಿ ಆನೆಗಳ ಜತೆ ಬಂದಿರುವ ಮಾವುತರು, ಕವಾಡಿಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸಲಾಗುತ್ತದೆ. ಒಂದು ದಿನ ಮೈಸೂರು ಪೌರ ಕಾರ್ಮಿಕರಿಗೆ ಔತಣ ಕೂಟ ಏರ್ಪಡಿಸಲಾಗುತ್ತದೆ. ದಸರಾ ಉದ್ಘಾಟಕರಾದ ಎಸ್ ಎಲ್ ಬೈರಪ್ಪ ಅವರ ಸಲಹೆ ಕೂಡ ಪಡೆಯುತ್ತೇವೆ. ಮೈಸೂರಿನ ಎಲ್ಲಾ ಮಠ, ಮಂದಿರ ಚರ್ಚ್ ಗಳ ಸ್ವಾಮೀಜಿ,  ಪಾದರ್ ಮೌಲ್ವಿಗಳ ಭೇಟಿ ಮಾಡಿ ಆಹ್ವಾನ ನೀಡಲಾಗುತ್ತದೆ ಎಂದು ವಿ.ಸೋಮಣ್ಣ ಹೇಳೀದರು.

ಇದನ್ನೂ ಓದಿ :  ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಖ್ಯಾತ ಸಾಹಿತಿ ಎಸ್​​.ಎಲ್​​ ಭೈರಪ್ಪ ಆಯ್ಕೆ
Loading...

ಜಿಲ್ಲಾ ಉಸ್ತುವಾರಿ  ಸಚಿವನಾಗಿ ನಾನೇ  ಎಲ್ಲರ ಮನೆಗೆ ತೆರಳಿ ಆಹ್ವಾನ ನೀಡುತ್ತೇನೆ. ಶಾಸಕ ರಾಮದಾಸ್  ಅವರನ್ನು ಸಹ ಭೇಟಿ ಮಾಡಿ ಮಾತುಕತೆ ಮಾಡುತ್ತೇನೆ. ಅವರ  ಜೊತೆಯು ಮಾತನಾಡಿ ಅವರ ಅನುಭವ, ಸಹಕಾರ ಕೇಳುತ್ತೇವೆ. ಎಂದು ವಿ.ಸೋಮಣ್ಣ ತಿಳಿಸಿದರು.

ಆಧುನಿಕ ತಂತ್ರಜ್ಞಾನದ ಮೂಲಕ ದಸರೆಗೆ ಮತ್ತಷ್ಟು ಆದ್ಯತೆ

ದಸರಾ ಮುಗಿದು 15 ದಿನಗಳ ವರೆಗೂ ಜಗಮಗಿಸಲಿದೆ. ವರ್ಷ ಪೂರ್ತಿ ದಸರಾ  ವೆಬ್ ಸೈಟ್ ಕಾರ್ಯ ನಿರ್ವಹಿಸಲಿದೆ. ಆಧುನಿಕ ತಂತ್ರಜ್ಞಾನದ ಮೂಲಕ ದಸರೆಗೆ ಮತ್ತಷ್ಟು ಆದ್ಯತೆ ನೀಡಲಾಗುತ್ತದೆ. 24/7 ಕಾಲ್ ಸೆಂಟರ್ ತೆರೆದು ದಸರಾ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅರಮನೆಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡುವ ಸೆಂಟರ್ ಇರಲಿದೆ. ಕೇವಲ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ಹಾಗು ದೇಶದಲ್ಲು ದಸರೆ ಪ್ರಚಾರ ಮಾಡಲಾಗುತ್ತದೆ. ಅದಕ್ಕಾಗಿ ಆಧುನಿಕ ತಂತ್ರಜ್ಞಾನದ ಬಳಕೆ ಮಾಡುತ್ತೇವೆ ಎಂದು ವಿ.ಸೋಮಣ್ಣ ನುಡಿದರು.

First published:August 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...