ಸಚಿವರು (Ministers) ಅಧಿಕಾರಿಗಳನ್ನು (Officers) ತರಾಟೆಗೆ ತೆಗೆದುಕೊಳ್ಳುವುದೇನು ಹೊಸದಲ್ಲ. ಕೆಲಸಗಳನ್ನು ಅಧಿಕಾರಿಗಳು ಸರಿಯಾಗಿ ಮಾಡದಿದ್ದಾಗ ಈ ಬಗ್ಗೆ ಪ್ರಶ್ನೆ ಮಾಡುವುದು ಸಚಿವರ ಕರ್ತವ್ಯ. ಹಾಗೆಯೇ ಇಂದು ಸಚಿವ ವಿ ಸೋಮಣ್ಣ (V Somanna) ಅಧಿಕಾರಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬನ್ನೂರು ಪುರಸಭೆಯಲ್ಲಿ ನಡೆದ ಸಭೆಯಲ್ಲಿ , ಪುರಸಭೆ ಅಧಿಕಾರಿಗಳಿಗೆ ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ.. ಅರ್ಧ ಆಯ್ತು, ಸ್ವಲ್ಪ ಆಯ್ತು ಅಂದರೆ ಹೆಣ ಎತ್ತು ಬಿಡ್ತೀನಿ ಅಂತ ಅಧಿಕಾರಿಗಳಿಗೆ ಸರಿಯಾಗಿ ಬೈದ್ದಿದ್ಧಾರೆ.
ಊರಿನಲ್ಲಿ ವಸತಿ ಇಲಾಖೆ ನಿರ್ಮಿಸಿರುವ ಮನೆಗಳು ಸೋರುತ್ತಿದೆ ಎಂದು ಶಾಸಕ ಅಶ್ವಿನ್ ಕುಮಾರ್ ದೂರು ನೀಡಿದ ಕಾರಣ, ಪುರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಅಧಿಕಾರಿಗೆ ಪಟ್ಟಿ ತಯಾರಿಸಿಕೊಂಡು ಬನ್ನಿ, ಅದರ ಬಗ್ಗೆ ಸರಿಯಾದ ಮಾಹಿರಿ ಕಲೆ ಹಾಕಿ ಎಂದು ಸೂಚನೆ ನೀಡಿದ್ದಾರೆ. ಅಲ್ಲದೇ ಈ ಕೆಲಸವನ್ನು ಸರಿಯಾಗಿ ಮಾಡಬೇಕು, ಹಾಗೆಯೇ ಕೆಲಸ ಮಾಡಿಸಬೇಕು, ಅರ್ಧ ಆಯ್ತು ಅಂದರೆ ಸರಿಯಿರಲ್ಲ ಅಂತ ಚನ್ನಾಗಿ ದಬಾಯಿಸಿದ್ದಾರೆ.
ನಂಜನಗೂಡು ನಗರಸಭೆ ಆಯುಕ್ತನ ವಿರುದ್ಧ ಏಕವಚನದಲ್ಲಿ ವಾಗ್ದಾಳಿ
ಇದು ಒಂದೆಡೆಯಾದರೆ ಈ ಸಭೆಯಲ್ಲಿ ನಂಜನಗೂಡು ನಗರಸಭೆ ಆಯುಕ್ತ ಹಾಜರಾಗಿರಲಿಲ್ಲ, ಇದರಿಂದ ಕೋಪಗೊಂಡ ಸಚಿವ ಸೋಮಣ್ಣ ಅಧಿಕಾರಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಮಂತ್ರಿ ಬಂದಾಗ ಸಭೆಯಲ್ಲಿ ಅಧಿಕಾರಿ ಬರಬೇಕೆಂಬ ಸೌಜನ್ಯವಿಲ್ಲವಾ? ಈ ಸಭೆಗಿಂತಾ ಬೇರೆ ಏನು ಕೆಲಸ ಇದೆ ಅವನಿಗೆ, ಅವನಿಗೆಷ್ಟು ಧಮ್ ಬೇರೆ ಸಭೆ ಮಾಡುವುದಕ್ಕೆ ಅಂತ ಆಯುಕ್ತರ ವಿರುದ್ಧ ಕಿಡಿಕಾರಿದ್ಧಾರೆ.
ಇದನ್ನೂ ಓದಿ: BBMP ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿಸಿ ವಂಚನೆ- ಮೂವರ ವಿರುದ್ಧ ಪ್ರಕರಣ ದಾಖಲು
ಇನ್ನು ಈ ಘಟನೆಯ ಬಗ್ಗೆ ಶಾಸಕ ಹರ್ಷವರ್ಧನ್ ಸ್ಪಷ್ಟನೆ ನೀಡಲು ಬಂದಾಗ ಶಾಸಕರ ವಿರುದ್ಧ ಸಹ ಸಚಿವ ವಿ ಸೋಮಣ್ಣ ಕೋಪಗೊಂಡಿದ್ದರು ಎನ್ನಲಾಗಿದೆ. ನಿನ್ನ ಕೆಲಸ ಏನು ಇದೆಯೋ ಅಷ್ಟು ಮಾತ್ರ ನನಗೆ ಹೇಳು. ನಾನು ಕೂಡ 40 ವರ್ಷದಿಂದ ಇಂತಹ ಘಟನೆಗಳನ್ನು ಮತ್ತು ಜನರನ್ನ ಕಂಡಿದ್ದೇನೆ. ಅವನ ವಿಚಾರ ನಾನು ನೋಡಿಕೊಳ್ಳುತ್ತೇನೆಂದು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ಇನ್ನು ಸಭೆಯಲ್ಲಿ ಸಚಿವ ವಿ ಸೋಮಣ್ಣ ಪದೇ ಪದೇ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಹೆಸರು ಹೇಳುತ್ತಿದ್ದ ಕಾರಣ ನಿಮಗೆ ಡಾ ಯತೀಂದ್ರ ಮೇಲೆ ಜಾಸ್ತಿ ಪ್ರೀತಿ ಎಂದು ಶಾಸಕ ಅನಿಲ್ ಚಿಕ್ಕಮಾದು ಸಚಿವ ವಿ ಸೋಮಣ್ಣ ಕಾಲು ಎಳೆದಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಇಲ್ಲ ನನಗೆ ಅವರಪ್ಪ ಸಿದ್ದರಾಮಯ್ಯ ಮೇಲೆ ಜಾಸ್ತಿ ಪ್ರೀತಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿದ್ಧರಾಮಯ್ಯ ಹೇಳಿಕೆಗೆ ತಿರುಗೇಟು
ಇನ್ನು ಸಿದ್ದರಾಮಯ್ಯನವರು ಒಂದು ಮನೆಯನ್ನೂ ಕೊಟ್ಟಿಲ್ಲವೆಂದು ಆರೋಪ ಮಾಡಿದ್ದಾರೆ, ಆದರೆ ಸಿದ್ದರಾಮಯ್ಯ ಕಾಲದಲ್ಲಿ ಮಾಡಿದ ತಪ್ಪುಗಳನ್ನು ಈಗ ಸರಿ ಮಾಡುತ್ತಿದ್ದೇವೆ. ಅವರ ಅವಧಿಯಲ್ಲಾದ ಅಡೆತಡೆಗಳನ್ನು ಬಗೆಹರಿಸಿದ್ದೇನೆ. ಕೇಂದ್ರದ ಆ್ಯಪ್‌ನಲ್ಲಿ ಮಾಹಿತಿ ಅಪ್‌ಡೇಟ್ ಮಾಡಬೇಕಿತ್ತು. ರಾಜ್ಯ ಸರ್ಕಾರ ತಮ್ಮ ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡಿದೆ. ಇದು ಸಿದ್ದರಾಮಯ್ಯನವರ ಕಾಲದಲ್ಲಿ ಆಗಿರುವ ಎಡವಟ್ಟು. ಸಿದ್ದರಾಮಯ್ಯ ಸೂಕ್ತ ಮಾಹಿತಿ ಇಲ್ಲದೆ ಮಾತಾಡುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ನಮ್ಗೆ ಸಚಿವರಾಗುವ ಯೋಗ್ಯತೆ ಇಲ್ವಾ? ದಿಲ್ಲಿ ಕದ ತಟ್ಟಲು ರೆಡಿಯಾದ `ಹೊನ್ನಾಳಿ ಹೋರಿ’ ರೇಣುಕಾಚಾರ್ಯ!
ಇನ್ನು ಶಾಸಕ ನಾಗೆಂದ್ರ ಅವರಿಗೂ ಕ್ಲಾಸ್ ತೆಗೆದುಕೊಂಡ ಸಚಿವ ವಿ ಸೋಮಣ್ಣ ನಮ್ಮಿಂದ ಏನು ಬೇಕು ಎಲ್ಲವನ್ನೂ ಕೊಡುತ್ತೇವೆ. ಫಲಾನುಭವಿಗಳನ್ನು ಆಯ್ಕೆ ಮಾಡಿ. ನೀವು ಸಂಸದ ಪ್ರತಾಪ್ ಸಿಂಹ ಜತೆ ಕುಳಿತು ಪಟ್ಟಿ ಮಾಡಿ ಎಂದು ಶಾಸಕ ನಾಗೇಂದ್ರಗೆ ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ