‘ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಒಂಟಿ ಸಲಗ‘: ಸಚಿವ ವಿ. ಸೋಮಣ್ಣ

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸಚಿವರಿಗೆ ಟಾಸ್ಕ್​​ ನೀಡಿದ್ಧಾರೆ. ನಾನು ಕೂಡ ಸಿಎಂ ನೀಡಿದ ಟಾಸ್ಕ್​​ ಸ್ವೀಕರಿಸಿದ್ದೇನೆ. ನನಗೆ ಮಹಾಲಕ್ಷ್ಮೀ ಲೇಔಟ್​​​ ಕ್ಷೇತ್ರದ ಜವಾಬ್ದಾರಿ ನೀಡಿದ್ಧಾರೆ- ವಿ ಸೋಮಣ್ಣ

news18-kannada
Updated:November 21, 2019, 1:18 PM IST
‘ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಒಂಟಿ ಸಲಗ‘: ಸಚಿವ ವಿ. ಸೋಮಣ್ಣ
ಸಚಿವ ವಿ ಸೋಮಣ್ಣ
  • Share this:
ಬೆಂಗಳೂರು(ನ.21): "ಕಾಂಗ್ರೆಸ್​​ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಕರ್ನಾಟಕ ಉಪಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರು ಕೈಜೋಡಿಸದ ಕಾರಣ ಸಿದ್ದರಾಮಯ್ಯ ಏಕಾಂಗಿಯಾಗಿ ಒಂಟಿ ಸಲಗ ಆಗಿದ್ದಾರೆ" ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಎಚ್​. ವಿಶ್ವನಾಥ್​​ ಪರ ಸಚಿವ ವಿ. ಸೋಮಣ್ಣ ಪ್ರಚಾರ  ಆರಂಭಿಸಿದ್ಧಾರೆ. ಇಂದು ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ವಿ. ಸೋಮಣ್ಣ, ಸಿದ್ದರಾಮಯ್ಯ ನಮ್ಮ ಅಭ್ಯರ್ಥಿಗಳನ್ನು ಪದೇಪದೇ ಅನರ್ಹರು ಎಂದು ಕರೆಯುತ್ತಿದ್ಧಾರೆ. ಅವರಿಗೆ ಚುನಾವಣೆಯಲ್ಲಿ ಜನರ ಮುಂದಿಡಲು ಬೇರೆ ಯಾವುದೇ ವಿಚಾರವಿಲ್ಲದ ಕಾರಣ ಹೀಗೆ ಮಾತಾಡುತ್ತಿದ್ದಾರೆ ಎಂದು ಗುಟುರು ಹಾಕಿದರು.

ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪರ ನ.23ರಿಂದ ಸಿಎಂ ಬಿಎಸ್​​ವೈ ಮತ್ತು ಕಟೀಲ್​​ ಪ್ರಚಾರ

ಬಿಜೆಪಿ ಪಾಲಿಗೆ ಇದು ಸ್ವಾಭಿಮಾನಿ ಚುನಾವಣೆ. ಸಿದ್ದರಾಮಯ್ಯ ಏನೇ ಹೇಳಿದರೂ ಜನರ ಭಾವನೆ ಬೇರೆಯದೇ ಇದೆ. ಸಿದ್ದರಾಮಯ್ಯಗೆ ಬೇರೆ ಏನು ಹೇಳಲು ವಿಷಯವಿಲ್ಲದೆ, ನಮ್ಮ ಅಭ್ಯರ್ಥಿಗಳ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ಧಾರೆ. ಅನರ್ಹ ಶಾಸಕರು ಯಾರು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಅರ್ಹರನ್ನು ಅನರ್ಹರು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ ಹೇಳಲಾಗುವುದಿಲ್ಲ ಎಂದರು.

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸಚಿವರಿಗೆ ಟಾಸ್ಕ್​​ ನೀಡಿದ್ಧಾರೆ. ನಾನು ಕೂಡ ಸಿಎಂ ನೀಡಿದ ಟಾಸ್ಕ್​​ ಸ್ವೀಕರಿಸಿದ್ದೇನೆ. ನನಗೆ ಮಹಾಲಕ್ಷ್ಮೀ ಲೇಔಟ್​​​ ಕ್ಷೇತ್ರದ ಜವಾಬ್ದಾರಿ ನೀಡಿದ್ಧಾರೆ. ಯಡಿಯೂರಪ್ಪ ಇಲ್ಲದೇ ಹೋದರೆ, ನಾವ್ಯಾರು ಇರುತ್ತಿರಲಿಲ್ಲ. ಹೊಸದಾಗಿ ಕೆಲವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಗಾಗಿಯೇ ಒಂದಷ್ಟು ಕಡೆ ಸಹಜವಾಗಿ ಭಿನ್ನಾಭಿಪ್ರಾಯ ಇದೆ. ಇದನ್ನು ಸರಿಪಡಿಸುತ್ತೇವೆ ಎಂದು ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಡಿವೈಎಸ್​​ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಕೆ.ಜೆ ಜಾರ್ಜ್​​ಗೆ ಕ್ಲೀನ್​​ಚಿಟ್​​

 
First published: November 21, 2019, 1:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading