ಚಿತ್ರದುರ್ಗ (ಆಗಸ್ಟ್ 22): "ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ವಿಶ್ವಕ್ಕೆ ಸಂದೇಶ ನೀಡಿದ್ದಾರೆ. ಪ್ರಧಾನಿಯ ಕಾರ್ಯ ವೈಖರಿಯನ್ನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತೋರಿದ್ದಾರೆ. ಮೋದಿಯವರ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರ ಬಳಿ ಏನೂ ಇಲ್ಲ, ಅವರು ಮಾತನಾಡುವಾಗ ಗಾಂಭೀರ್ಯದಿಂದ ಮಾತನಾಡಬೇಕು. ಆದರೆ, ಕೈಲಾಗದವರು ಮೈ ಪರಚಿಕೊಂಡರಂತೆ ಅನ್ನುವಂತೆ ಮಾಡುತ್ತಿದ್ದಾರೆ" ಎಂದು ಕೋವಿಡ್ ನಿಭಾಯಿಸಲಾಗದೆ ಸಾಲು ಸಾಲು ಹೆಣಗಳನ್ನ ಸುಟ್ಟಿದ್ದಾರೆ ಎಂಬ ಕೈ ನಾಯಕರ ಹೇಳಿಕೆಗೆ ವಸತಿ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗದ ಮುರುಘಾ ಮಠಕ್ಕೆ ಬೇಟಿ ನೀಡಿ, ಡಾ.ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದು ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, "ಕಾಂಗ್ರೆಸ್ನವರು ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು. ಯಾರು ಸಾಲು ಸಾಲು ಹೆಣ ಸುಟ್ಟಿದ್ದು, ಕೊವೀಡ್ ಸೋಂಕು ಬರೀ ಕರ್ನಾಟಕಕ್ಕೆ ಮಾತ್ರವಲ್ಲ, ಈಡೀ ವಿಶ್ವಕ್ಕೆ ಬಂದಿತ್ತು. ರಾಷ್ಟ್ರೀಯ ಪಕ್ಷವಾಗಿ ಈ ರೀತಿ ಸಣ್ಣತನದ ಮಾತು ಆಡಬಾರದು.
ಕೇವಲ ಭಾರತವಲ್ಲ, ಅಮೇರಿಕಾ, ಚೀನಾ ವಿಶ್ವದಲ್ಲಿ ಹೆಣ ಸುಟ್ಟಿದ್ದಾರೆ. ಕೊರೋನಾದಿಂದ ವಿಶ್ವದಲ್ಲಿ ಅನಾನುಕೂಲ ಆಗಿರುವುದು ಅರ್ಥ ಮಾಡಿಕೊಳ್ಳಬೇಕು. ಕ್ಷುಲ್ಲಕ ಭಾಷೆ ಬಳಸಲು ಯಾಕೆ ಮನಸ್ಸು ಬರುತ್ತದೋ ಗೊತ್ತಿಲ್ಲ" ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಪ್ರಧಾನಿ, ಮೋದಿ ಬತ್ತಳಿಕೆಯಲ್ಲಿ ಸುಳ್ಳಿನ ಬಾಣ ಖಾಲಿಯಾಗಿದೆ ಎಂದ ಕೈ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ಅವರು ಯಾರು ಎಲ್ಲೆಲ್ಲಿ ಹೋಗಿ ಏನು ಕೆಲಸ ಮಾಡಿದ್ದರು. ರಾಷ್ಟ್ರದ ಪ್ರಧಾನಿಯಾಗಿ ಮೋದಿಯವರು ಪ್ರಾಣದ ಹಂಗು ತೊರೆದು ವಿಶ್ವಕ್ಕೆ ಸಂದೇಶ ನೀಡಿದ್ದಾರೆ. ಅವರ ಕಾರ್ಯ ವೈಖರಿಯನ್ನು ಸಮಾಜದ ಕಡೆಯ ವ್ಯಕ್ತಿಗೂ ತೋರಿಸಿದ್ದಾರೆ. ಕಾಂಗ್ರೆಸ್ ನಾಯಕರ ಬಳಿ ಮೋದಿ ಬಗ್ಗೆ ಹೇಳಲು ಏನಿಲ್ಲ, ಅಪಪ್ರಚಾರ ಮಾಡಲು ಏನೂ ಇಲ್ಲ. ಏಳು ವರ್ಷ ಪ್ರಧಾನಿಯಾಗಿ ಅವರ ವಿರುದ್ಧ ಒಂದು ಆರೋಪ ಇಲ್ಲ, ಮಾತನಾಡುವಾಗ ಗಾಂಭಿರ್ಯತೆಯಿಂದ ಮಾತನಾಡುವುದು" ಒಳ್ಳೆಯದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: DK Shivakumar vs CT Ravi| ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದದ್ದೇ ಸಿ.ಟಿ. ರವಿ ಹೋರಾಟದಿಂದ: ಡಿ.ಕೆ. ಶಿವಕುಮಾರ್ ವ್ಯಂಗ್ಯ
ಇನ್ನೂ ಕೇಂದ್ರ ಸರ್ಕಾರದಲ್ಲಿ ರಾಜ್ಯದ ನಾಲ್ವರು ನೂತನ ಸಚಿವರಾಗಿದ್ದಾರೆ. ಜನರು ಜನಾಶಿರ್ವಾದ ಯಾತ್ರೆಯಲ್ಲಿ ಭಾವನಾತ್ಮಕವಾಗಿ ಸೇರಿದ್ದಾರೆ. ಕಾಂಗ್ರೆಸ್ ನವರು ಕೂಡಾ ಎಲ್ಲಾ ಕಡೆ ಸೇರುತ್ತಿದ್ದಾರೆ. ಆದರೇ ಕೈ ಲಾಗದವರು ಮೈ ಪರಸಿಕೊಂಡರು ಎಂಬಂತೆ ಕಾಂಗ್ರೇಸ್ ನವರು ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: Afghanistan Crisis| ಹೊಸ ಸರ್ಕಾರ ಘೋಷಿಸಲು ತಾಲಿಬಾನಿಗಳ ಸಿದ್ಧತೆ, ಅಫ್ಘನ್ ಬಗ್ಗೆ ತುಟಿ ಬಿಚ್ಚಲಿದ್ದಾರೆ ಜೋ ಬಿಡೆನ್
ಕೊವೀಡ್ ನಿರ್ಬಂಧ ನಿಭಾಯಿಸುವುದು ನಮ್ಮ ಧರ್ಮ, ವಿನಯ್ ಕುಲಕರ್ಣಿ ಬೇರೆ, ಎಲ್ಲರಿಗೂ ರೂಲ್ಸ್ ಒಂದೆ ಎಂದಿದ್ದಾರೆ. ಬಳ್ಳಾರಿಗೆ ಜನಾರ್ಧನ ರೆಡ್ಡಿ ಮನೆಗೆ ಬಂದು ಹಬ್ಬ ಮಾಡುವುದು ಬೇಡ್ವಾ, ರಾಜ್ಯಕ್ಕೆ ರೆಡ್ಡಿ ಕೊಡುಗೆ ನೀಡಿದ್ದಾರೆ. ಅವರು ಪಕ್ಷಕ್ಕೆ ಬರುವ ವಿಚಾರ ನಮ್ಮ ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದ್ರು. ಇನ್ನೂ ಸಚಿವ ಆನಂದ್ ಸಿಂಗ್ ಮುನಿಸಿಲ್ಲ, ಆನಂದ್ ಸಿಂಗ್ ಚಿನ್ನದಂತವನು, ಎಳೆ ಮಗು ಇದ್ದಾಗೆ ಸಿಎಂ ಜೊತೆ ಚರ್ಚಿಸಿದ್ದಾರೆ. ನಿನ್ನೆಯಿಂದ ಅವರ ಕಚೇರಿ ಓಪನ್ ಆಗಿದ್ದು, ಎಲ್ಲ ಸರಿ ಹೋಗಿದೆ ಎಂದು ಹೇಳಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ