ನಾವು ಕುಡಿದು ಬಿಟ್ಟ ನೀರನ್ನು ತಮಿಳುನಾಡಿನವರು ಕುಡೀತಾರೆ: ಹೊಗೇನಕಲ್ ಯೋಜನೆ ಬಗ್ಗೆ Minister Somanna ಹೇಳಿಕೆ

ನಾವು ಕುಡಿದ ಮೇಲೆ ತಮಿಳುನಾಡಿನವರು (Tamilnadu) ನೀರು (Water) ಕುಡಿಯುತ್ತಾರೆ ವಿನಃ ಅವರು ಕುಡಿದ ನೀರನ್ನು ನಾವು ಕುಡಿಯೋದಿಲ್ಲ, ಅವರ ಹಕ್ಕನ್ನು ಕಾಯ್ದುಕೊಳ್ಳೋದು ಅವರ ಕರ್ತವ್ಯ. ನಮ್ಮ ಹಕ್ಕನ್ನು ಕಾಯ್ದುಕೊಳ್ಳೋದು ನಮ್ಮ ಕರ್ತವ್ಯ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ (Minister V Somanna) ಮಾರ್ಮಿಕವಾಗಿ ಹೇಳಿದ್ದಾರೆ.

ಸಚಿವ ವಿ ಸೋಮಣ್ಣ

ಸಚಿವ ವಿ ಸೋಮಣ್ಣ

  • Share this:
ಚಾಮರಾಜನಗರ (ಜ.26)  ನಾವು ಕುಡಿದ ಮೇಲೆ ತಮಿಳುನಾಡಿನವರು (Tamilnadu) ನೀರು (Water) ಕುಡಿಯುತ್ತಾರೆ ವಿನಃ ಅವರು ಕುಡಿದ ನೀರನ್ನು ನಾವು ಕುಡಿಯೋದಿಲ್ಲ, ಅವರ ಹಕ್ಕನ್ನು ಕಾಯ್ದುಕೊಳ್ಳೋದು ಅವರ ಕರ್ತವ್ಯ. ನಮ್ಮ ಹಕ್ಕನ್ನು ಕಾಯ್ದುಕೊಳ್ಳೋದು ನಮ್ಮ ಕರ್ತವ್ಯ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ (Minister V Somanna) ಮಾರ್ಮಿಕವಾಗಿ ಹೇಳಿದ್ದಾರೆ. ತಮಿಳುನಾಡು ಸರ್ಕಾರ ಹೊಗೆನಕಲ್ (Hogenakal Project) ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಂಡಿರುವ ಬಗ್ಗೆ ಚಾಮರಾಜನಗರ(Chamarajanagara)ದಲ್ಲಿ ಪ್ರತಿಕ್ರಿಯಿಸಿದ ಅವರು, ನಾವು ಕುಡಿದು ಬಿಟ್ಟ ನೀರನ್ನು ಅವರು ಕುಡಿಯುತ್ತಾರೆ, ನಾವು ಮೇಲ್ಪಂಕ್ತಿಯಲ್ಲಿದ್ದೇವೆ, ಹಾಗೆಯೇ ಇರೋಣ. ಆದರೆ ನಮ್ಮ ಜನರಿಗೆ ಅನ್ಯಾಯ ಮಾಡಿಕೊಂಡು ಅವರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದರು

ನಾವು ಫೆಡರಲ್ ವ್ಯವಸ್ಥೆಯಲ್ಲಿದ್ದು ಎಲ್ಲಾ ರಾಜ್ಯಗಳು ಒಂದೇ ಆಗಿವೆ. ಎಲ್ಲರು ಸಹೋದರತ್ವದಲ್ಲಿ ಇರೋಣ. ಅವರವರ ಹಕ್ಕು ಕಾಯ್ದುಕೊಳ್ಳೋದು ಅವರವರ ಕರ್ತವ್ಯವಾಗಿದೆ ಎಂದರು. ಹೊಗೇನಕಲ್ ನಲ್ಲಿ 400 ಎಕರೆ ವಿಸ್ತೀರ್ಣದ  ನಡುಗುಡ್ಡೆಯನ್ನು ತಮಿಳುನಾಡು ಸರ್ಕಾರ ಅತಿಕ್ರಮಿಸಿಕೊಂಡಿರುವ ಬಗ್ಗೆ  ಪ್ರತಿಕ್ರಿಯಿಸಿದರು.

ನಮ್ಮ ರಾಜ್ಯದ ಸಣ್ಣ ಹಕ್ಕನ್ನು ಸಹ ಬೇರೆಯವರಿಗೆ ಬಿಟ್ಟು ಕೊಡಲ್ಲ. ನಮ್ಮ ಹಕ್ಕನ್ನು ನಾವು ಕಾಯ್ದುಕೊಳ್ತೇವೆ. ನಮಗೆ ಆ ಶಕ್ತಿಯಿದೆ ಎಂದರು. ಗಡಿಯಲ್ಲಿ ಜಂಟೀ ಸರ್ವೆ ಪುನರರಾಂಭಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಯಾವ್ಯಾವ ಕಾಲಕ್ಕೇ ಏನಾಗಬೇಕೋ ಅದು ಆಗಿಯೇ ತೀರುತ್ತೆ ಎಂದರು.

ಇದನ್ನೂ ಓದಿ:  Aparna: ಈ ಬಾರಿ ಅಪರ್ಣಾ ಅವರಿಗಿಲ್ಲ ಗಣರಾಜ್ಯೋತ್ಸವದ ನಿರೂಪಣೆ: ಅವಕಾಶ ತಪ್ಪಿದ್ದೇಕೆ?

ಕರ್ನಾಟಕದ ಒಂದು ಇಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ

ಮಹದೇಶ್ವರ ಬೆಟ್ಟಕ್ಕೆ ಕಾವೇರಿ ನದಿಯಿಂದ ನೀರನ್ನು ತರುವಾಗಲು ಆ ಜಾಗ ನಮ್ಮದಲ್ಲ ಎನ್ನುವ ಗೊಂದಲ ಇತ್ತು. ಆಗ ತಮಿಳುನಾಡು ಅಧಿಕಾರಿಗಳನ್ನು ಕರೆದುಕೊಂಡು ಬಂದು ಸಭೆ ನಡೆಸಿ ಗೊಂದಲ ಬಗೆಹರಿಸಿಕೊಂಡು ನೀರನ್ನು ತೆಗೆದುಕೊಂಡಿದ್ದೇವೆ.

ಇದೇ ರೀತಿ ಯಾವ ಕಾಲಕ್ಕೆ ಏನು ಆಗಬೇಕು, ಅದೆಲ್ಲಾ ಆಗುತ್ತೆ. ಕರ್ನಾಟಕದ ಒಂದು ಇಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ. ನಮ್ಮ ನೆಲದಲ್ಲಿ ಇನ್ನೊಬ್ಬರು ಬಂದು ಸೇರಿಕೊಳ್ಳಲು ಅವಕಾಶ ಕೊಡಲ್ಲ ಎಂದು ಅವರು ಹೇಳಿದರು. ನಮ್ಮ ಹಕ್ಕನ್ನು ಕಾಪಾಡಿಕೊಳ್ಳಲೂ ಪಕ್ಷ ಬೇಧ ಮರೆತು ಕೆಲಸ ಮಾಡೋಣ. ಒಂದು ವೇಳೆ ಅತಿಕ್ರಮಣವಾಗಿದ್ದರೆ ಅದನ್ನು ಹೇಗೆ ತಡೆಗಟ್ಟಬೇಕು ಅನ್ನೋದು ಗೊತ್ತಿದೆ ಎಂದು ಸಚಿವ ಸೋಮಣ್ಣ ಹೇಳಿದರು

ಡಿಕೆಶಿ ಜೊತೆ ಊಟ ತಿಂಡಿಗೆ ಹೋಗೋದು ತಪ್ಪಾ?!

ಬಿಜೆಪಿ ಶಾಸಕರು ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚೆ ಮಾಡ್ತಿದ್ದಾರೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಊಟ,ತಿಂಡಿಗೆ ಹೋಗೋದು ತಪ್ಪಾ? ಡಿಕೆಶಿ ಜೊತೆ ಯಾರೂ ಹೋಗೋ ಆಗಿಲ್ವಾ.?. ಆದೆಲ್ಲಾ ಮೈನರ್ ವಿಚಾರ ಬಿಟ್ಟುಬಿಡಿ. ಚುನಾವಣೆಗೆ ಇನ್ನೂ 15-6 ತಿಂಗಳು ಇದೆ. ಈ ಅವಧಿಯಲ್ಲಿ ನಾವೇನು ಮಾಡಬೇಕು, ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಹತ್ತಿರ ಏನು ಒತ್ತಡ ತರಬೇಕು. ಈ ಬಗ್ಗೆ ನಂಗೆ ಸಲಹೆ ಕೊಡಿ ಎಂದು ಮಾಧ್ಯಮ ಪ್ರತಿನಿಧಿ ಗಳಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: Online Fraud: ಅಶ್ಲೀಲ ವಿಡಿಯೋ ನೋಡುತ್ತೀರಾ? ಆನ್​ಲೈನ್ ವಂಚಕರು ನಿಮ್ಮ ಹಣ ದೋಚಲು ಕಾಯುತ್ತಿದ್ದಾರೆ.. ಹುಷಾರ್

ರಾಜಕೀಯ ಬೆಳವಣಿಗೆ ಬಗ್ಗೆ ಬೆಂಗಳೂರಿವರು ಏನೋ ಮಾಡಿಕೊಳ್ತಾರೆ. ಬೆಂಗಳೂರು ಕಾಸ್ಮೋ ಪಾಲಿಟಿನ್ ಸಿಟಿ. ಯಾರೂ ಎಲ್ಲಿಗೆ ಹೋಗ್ತಾರೆ, ಎಲ್ಲಿಗೆ ಬರ್ತಾರೆ ಅಂತಾ ಕಂಡು ಹಿಡಿಯೋಕೆ ಆಗಲ್ಲ. ಯಾವುದೋ ರೆಸಾರ್ಟ್ ಡಿಕೆಶಿಗೆ ಮಾತ್ರ ಇರುತ್ತಾ? ಜೆಡಿಎಸ್,ಬಿಜೆಪಿಗೆ ಮಾತ್ರ ಇರುತ್ತಾ? ಅದು ಎಲ್ಲರಿಗೂ ರೆಸಾರ್ಟೆ, ಅದು ಇರೋದೆ ಕೆಲವರು ಆರಾಮವಾಗಿ ಇರೋಕೆ, ನಮ್ಮಂತಹವರು ಇರೋದೆ ಬೀದಿ ಸುತ್ತೋಕೆ  ಎಂದ ಸಚಿವ ಸೋಮಣ್ಣ ಹೇಳಿದರು.

ಯತ್ನಾಳ್ ಅವರು ಗೌಡ್ರು,ವಿಜಯಪುರದ ನಾಯಕರು

ಬಿಜೆಪಿಯ ಕೆಲ ಶಾಸಕರು, ಸಚಿವರು ಕಾಂಗ್ರೆಸ್ ಗೆ ಹೋಗ್ತಾರೆ ಎಂಬ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ,  ಯತ್ನಾಳ್ ಅವರು ಗೌಡ್ರು,ವಿಜಯಪುರದ ನಾಯಕರು ಅವರು ಏನ್ ಹೇಳಿದ್ದಾರಂತೆ ಖಂಡಿತವಾಗಿ ನನಗೆ ಗೊತ್ತಿಲ್ಲ., ನಾನು ಅವರು ಒಂದು ಸಾವಿರ ಕಿಲೋಮೀಟರ್ ದೂರದಲ್ಲಿದ್ದೇವೆ ಅವರ ಜೊತೆ ಮಾತನಾಡಲು ಫೋನ್ ಮಾಡಿದ್ದೆ ಆದರೆ ಅವರು ನನ್ನ ಸ್ವೀಕರಿಸಲಿಲ್ಲ‌ ಎಂದರು
Published by:Mahmadrafik K
First published: