• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • V Somanna: ಫೋಟೋ ವೈರಲ್ ಬಗ್ಗೆ ಸಚಿವರ ಪ್ರತಿಕ್ರಿಯೆ; ಯಾರ ಮುಲಾಜಲ್ಲೂ ಬದುಕಿಲ್ಲ ಅಂದ್ರು!

V Somanna: ಫೋಟೋ ವೈರಲ್ ಬಗ್ಗೆ ಸಚಿವರ ಪ್ರತಿಕ್ರಿಯೆ; ಯಾರ ಮುಲಾಜಲ್ಲೂ ಬದುಕಿಲ್ಲ ಅಂದ್ರು!

ಡಿಕೆಶಿ ಜೊತೆಗಿನ ವೈರಲ್ ಫೋಟೋ ಬಗ್ಗೆ ಸೋಮಣ್ಣ ಪ್ರತಿಕ್ರಿಯೆ

ಡಿಕೆಶಿ ಜೊತೆಗಿನ ವೈರಲ್ ಫೋಟೋ ಬಗ್ಗೆ ಸೋಮಣ್ಣ ಪ್ರತಿಕ್ರಿಯೆ

ಕೆಪಿಸಿಸಿ ಅಧ್ಯಕ್ಷರು, ನಮ್ಮ ತಾಲ್ಲೂಕಿನವರು. ಡಿಕೆ ಶಿವಕುಮಾರ್ ಅವರು ನನ್ನನ್ನು ಸಂಪರ್ಕಿಸಿಲ್ಲ. ಕೆಲಸ ಆದ್ರೆ ಅದೇ ದೇವರು, ಇನ್ನೊಂದು ಪಾರ್ಟಿ, ಮತ್ತೊಂದು ಪಾರ್ಟಿ, ಮಗದೊಂದು ಪಾರ್ಟಿ ಅಂತಿಲ್ಲ ಎಂದು ಸಿಡಿಮಿಡಿಗೊಂಡರು.

  • Share this:

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ‌ ಶಿವಕುಮಾರ್ (KPCC President DK Shivakumar) ಜೊತೆ ಸಚಿವ ವಿ.ಸೋಮಣ್ಣ (Minister V Somanna) ವಿಮಾನಯಾನ ಮಾಡುತ್ತಿರುವ ಫೋಟೋ ವೈರಲ್ ಆಗ್ತಿದೆ. ಈ ಫೋಟೋ ಬಗ್ಗೆ ಬೆಂಗಳೂರಲ್ಲಿ ಸಚಿವ ವಿ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. ಯಾವುದೋ‌ ಕಾಲದಲ್ಲಿನ ಫೋಟೋ (Viral Photo) ತಗೊಂಡು, ಏನೋ ಹಾಕಿಕೊಂಡ್ರೆ ನಾವೇನು ಮಾಡೋಕೆ ಆಗಲ್ಲ. ನಾನು ಬಿಜೆಪಿಯ ಶಾಸಕ, ಬಿಜೆಪಿ ಸರ್ಕಾರದ ಮಂತ್ರಿ, ನನಗೆ ನನ್ನ ಇತಿಮಿತಿ ಗೊತ್ತಿದೆ, ಎಷ್ಟು ಗೌರವವಾಗಿ ನಡೆದುಕೊಳ್ಳಬೇಕು ಗೊತ್ತಿದೆ. ನಾನು ಬಿಜೆಪಿಯಲ್ಲಿ (BJP) ಸಕ್ರಿಯನಾಗಿ ಕೆಲಸ ಮಾಡ್ತಿದ್ದೇನೆ. ನಮಗೆ ನರೇಂದ್ರ ಮೋದಿ (PM Narendra Modi) ಅವರು ನಾಯಕರು. ರಾಜ್ಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ನಾಯಕತ್ವ ಇದೆ, ಯಡಿಯೂರಪ್ಪ (BS Yediyurappa) ಮಾರ್ಗದರ್ಶನ ಇದೆ, ನಳಿನ್ ಕುಮಾರ್ ಕಟೀಲ್ (Nalin Kumar Kateel) ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.


ಆ ತರಹದ ಊಹಾಪೋಹಗಳು ನಂದಲ್ಲ, ಮಾಧ್ಯಮಗಳು ಮಾಡಿಕೊಂಡಿರೋ ಸೃಷ್ಟಿ. ನಾನಿ ಬಿಜೆಪಿಲಿದ್ದೀನಿ, ಬಿಜೆಪಿಯ ನಾಯಕನಾಗಿದ್ದೇನೆ, ನನ್ನ ಕೆಲಸ ನಾನು ಮಾಡ್ತಾ ಇದ್ದೀನಿ.  ನನಗೆ ಚಿಲ್ಲರೆ ಬುದ್ಧಿ ಗೊತ್ತಿಲ್ಲ, ಚಿಲ್ಲರೆ ರಾಜಕಾರಣ ನಾನು ಮಾಡಲ್ಲ. ಇನ್ನೊಬ್ಬರ ತರ ಆಟ ಆಡಿಸೋದು ಗೊತ್ತಿಲ್ಲ, ಯಾರ ಮುಲಾಜಲಲ್ಲೂ ಬದುಕಿಲ್ಲ  ಎಂದು ವಿ ಸೋಮಣ್ಣ ಕಣ್ಣೀರು ಹಾಕಿದರು.


ಡಿಕೆ ಶಿವಕುಮಾರ್ ನಮ್ಮ ತಾಲೂಕಿನವರು


ಕೆಲವು ಸಂಗತಿಗಳನ್ನು ಹೇಳುವಾಗ ನಿಷ್ಠುರವಾಗಿ ಮಾತಾಡ್ತಿನಿ. ಆ ನಿಷ್ಠುರ ಪಕ್ಷಕ್ಕೆ ಅಲ್ಲ, ಕೆಲವು ಕಹಿ ಘಟನೆಗಳು ಆಗಬಾರದು ಅನ್ನೋ ದೃಷ್ಟಿಯಿಂದ ಮಾತ್ರ ಎಂದರು. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರು, ನಮ್ಮ ತಾಲ್ಲೂಕಿನವರು. ಡಿಕೆ ಶಿವಕುಮಾರ್ ಅವರು ನನ್ನನ್ನು ಸಂಪರ್ಕಿಸಿಲ್ಲ. ಕೆಲಸ ಆದ್ರೆ ಅದೇ ದೇವರು, ಇನ್ನೊಂದು ಪಾರ್ಟಿ, ಮತ್ತೊಂದು ಪಾರ್ಟಿ, ಮಗದೊಂದು ಪಾರ್ಟಿ ಅಂತಿಲ್ಲ ಎಂದು ಸಿಡಿಮಿಡಿಗೊಂಡರು.


ಫೋಟೋ ವೈರಲ್ ಬಗ್ಗೆ ಡಿಕೆಶಿ ಪ್ರತಿಕ್ರಿಯೆ


ಇದೇ ವಿಚಾರದ ಬಗ್ಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅದು ಬೆಳಗಾವಿ ಅಧಿವೇಶನ ಮುಗಿಸಿ ಒಟ್ಟಿಗೆ ಬಂದಾಗ ತೆಗೆದಿರೋ ಫೋಟೋ. ಯಾಕೆ ನಾವು ಒಟ್ಟಿಗೆ ಕೂರಬಾರ್ದಾ? ಎಲ್ಲರ ಪಕ್ಕದಲ್ಲೂ ನಾವು ಕುಳಿತುಕೊಳ್ಳುತ್ತೇವೆ. ನಾವು ಯಾವತ್ತೂ ಅವರನ್ನ ಪಕ್ಷಕ್ಕೆ ಕರೆದಿಲ್ಲ, ಅವರು ಬರ್ತೀವಿ ಅಂತ ಹೇಳಿಲ್ಲ. ಅವರನ್ನ ಯಾಕೆ ಮಧ್ಯಕ್ಕೆ ಎಳೆದು ತರ್ತೀರಾ ಬಿಡಿ ಎಂದರು.


ಇದನ್ನೂ ಓದಿ:  BJP ಒಕ್ಕಲಿಗರ ಆತ್ಮಾಭಿಮಾನ ಕೆಣಕಿ ಹೀನ ಕೆಲಸ ಮಾಡ್ತಿದೆ: HD Kumaraswamy ಕಿಡಿ


ಸೋಮಣ್ಣ ಮೇಲೆ ಬಿಎಸ್​ವೈ ಬೇಸರ?


ವಿ.ಸೋಮಣ್ಣ ಬಗ್ಗೆ ಯಡಿಯೂರಪ್ಪ ಬೇಸರವಾದ್ರಾ? ಅದೇ ಕಾರಣಕ್ಕೆ ಬೆಂಗಳೂರಲ್ಲಿದ್ರೂ ಸೋಮಣ್ಣ ಜೊತೆ ಮಾತಾಡ್ತಿಲ್ವಾ ಎಂಬ ಪ್ರಶ್ನೆ ಮೂಡಿದೆ. BSY, ವಿಜಯೇಂದ್ರ ಮೇಲೆಯೇ ಸೋಮಣ್ಣ ಮುನಿಸಿಕೊಂಡಿದ್ರು. ಆದ್ದರಿಂದ ಸೋಮಣ್ಣ ಜೊತೆ ಧರ್ಮೆಂದ್ರ ಪ್ರಧಾನ್ ಸಮಾಲೋಚನೆ ನಡೆಸಿದ್ದು, ಅಮಿತ್ ಶಾ ಜೊತೆ ಮಾತಾಡೋಣ ಸರಿಯಾಗುತ್ತೆ ಎಂದ್ರಂತೆ. ಇನ್ನೊಂದೆಡೆ ಮಾತಾಡಿದ ಯಡಿಯೂರಪ್ಪನವ್ರು ಸೋಮಣ್ಣ ಜತೆ ಚರ್ಚಿಸುತ್ತೇನೆ ಎಂದರು.




ರಾಮನಗರಕ್ಕೆ ಡಿ.ಕೆ ಸುರೇಶ್ ಅಭ್ಯರ್ಥಿ?


ಸಂಸದ ಡಿಕೆ ಸುರೇಶ್ (MP DK Suresh) ರಾಮನಗರದಿಂದ  ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ. ಅದ್ರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ ಸುರೇಶ್​ರನ್ನ ರಾಮನಗರಕ್ಕೆ ಅಭ್ಯರ್ಥಿ ಮಾಡಬೇಕು ಎನ್ನುವ ವಿಚಾರ ಇರೋದು ನಿಜ. ಅವರನ್ನೇ ಅಭ್ಯರ್ಥಿ ಮಾಡಬೇಕು ಎನ್ನುವ ಸಂದೇಶ ಕೂಡ ಬಂದಿದೆ. ನಾನಿನ್ನು ಸುರೇಶ್ ಜೊತೆ, ಕಾರ್ಯಕರ್ತರ ಜೊತೆ ಮಾತಾಡಿಲ್ಲ.. ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದರು.

Published by:Mahmadrafik K
First published: