ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದ ಸಚಿವ ಸೋಮಣ್ಣ: ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳಿಗೆ ತರಾಟೆ
ಪರಿಶೀಲನೆ ವೇಳೆ ಕಾಮಗಾರಿ ಶೀಘ್ರ ಸಾಗದ ಹಿನ್ನೆಲೆ ಇಂಜಿನಿಯರ್ಗಳಿಗೆ ಸ್ಥಳದಲ್ಲೆ ತರಾಟೆಗೆ ತೆಗೆದುಕೊಂಡು ಶೀಘ್ರ ಕಾಮಗಾರಿ ಮುಗಿಸದೆ ಹೋದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ
news18-kannada Updated:November 30, 2020, 7:23 AM IST

ಕಾಮಗಾರಿ ಪರಿಶೀಲಿಸಿದ ಸಚಿವ ವಿ ಸೋಮಣ್ಣ
- News18 Kannada
- Last Updated: November 30, 2020, 7:23 AM IST
ನೆಲಮಂಗಲ(ನವೆಂಬರ್. 30): ಬೆಂಗಳೂರಿನಲ್ಲಿ ಒಂದು ಲಕ್ಷ ಬಹುಮಹಡಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ವಸತಿ ಸಚಿವ ವಿ ಸೋಮಣ್ಣ ಭೇಟಿ ನೀಡಿದ್ದರು. ಬೆಂಗಳೂರು ಉತ್ತರ ತಾಲೂಕಿನ ಗಾಣಿಗರಹಳ್ಳಿಯಲ್ಲಿ, ಬಿಳಿಜಾಜಿ, ಅಗ್ರಹಾರಪಾಳ್ಯ, ಪಿಳ್ಳಹಳ್ಳಿ, ಲಕ್ಷ್ಮೀಪುರ, ಗೋವಿಂದಪುರ, ಸಿಂಗನಾಯಕನಹಳ್ಳಿ, ನಾಗದಾಸನಹಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಪರಿಶೀಲನೆ ನಡೆದಿದ್ದಾರೆ. ಪರಿಶೀಲನೆ ವೇಳೆ ಕಾಮಗಾರಿ ಶೀಘ್ರ ಸಾಗದ ಹಿನ್ನೆಲೆ ಇಂಜಿನಿಯರ್ಗಳಿಗೆ ಸ್ಥಳದಲ್ಲೆ ತರಾಟೆಗೆ ತೆಗೆದುಕೊಂಡು ಶೀಘ್ರ ಕಾಮಗಾರಿ ಮುಗಿಸದೆ ಹೋದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 4 ವರ್ಷದ ಯೋಜನೆ ಸ್ಥಗಿತಗೊಂಡಿತ್ತು, ಸಿಎಂ ಅವರ ಜೊತೆ ಮಾತನಾಡಿ ಕಾಮಗಾರಿ ವೀಕ್ಷಣೆ ನಡೆಸ್ತಿದ್ದೇವೆ. ಗಾಣಿಗರಹಳ್ಳಿ ಸೇರಿದಂತೆ ಎಲ್ಲಾ ಕಡೆ ಮನೆಗಳು ಆಗುತ್ತಿವೆ. ಇಲ್ಲಿಯೇ ಅಂಗನವಾಡಿ, ಪ್ರಾಥಮಿಕ ಶಾಲೆಯನ್ನ ನಿರ್ಮಿಸಲಾಗುತ್ತಿದೆ ಎಂದರು.
12-13 ತಿಂಗಳಲ್ಲಿ ಮುಗಿಸುವುದಕ್ಕೆ ಗಡುವು ಕೊಟ್ಟಿದ್ದೇವೆ. 1ಲಕ್ಷ ಮನೆಗಳನ್ನ ಕಟ್ಟಿ ಕೊಡುವುದು ಪ್ರಧಾನಿ ಮೋದಿಯವರ ಕನಸು. ಬಡವರಿಗೆ, ಅಸಂಘಟಿತ ಕಾರ್ಮಿಕರಿಗೆ ಈ ಮನೆಗಳು ತಲುಪಬೇಕು, 26 ಸಾವಿರ ಅರ್ಜಿಗಳು ಬಂದಿವೆ, ಅರ್ಹತೆ ಪಡೆದವರಿಗೆ ಮನೆಗಳನ್ನ ಕೊಡಲಾಗುತ್ತದೆ ಎಂದು ತಿಳಿಸಿದರು. ನಂತರ ಸಂಪುಟ ವಿಸ್ತರಣೆ ವಿಳಂಬ ವಿಚಾರಕ್ಕೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮಾಡುವುದು ಸಿಎಂ ಪರಾಮಾಧಿಕಾರ. ಅವರ ಅನುಭವದ ಮುಂದೆ ನಾವೇನಿಲ್ಲ, ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುತ್ತಾರೆ. ಇಗಾಗಲೇ ಮಾತನಾಡುವುದಕ್ಕೆ ಪ್ರಕ್ರಿಯೆ ಶುರುವಾಗಿದೆ. ಎರಡು -ಮೂರು ದಿನದಲ್ಲಿ ಒಂದು ರೂಪ ಬರುತ್ತದೆ ಎಂದು ತಿಳಿಸಿದರು.
ಸಿಪಿ ಯೋಗೇಶ್ವರ್ ಸಚಿವ ಸಂಪುಟಕ್ಕೆ ಸೇರುವುದಕ್ಕೆ ಎರಡು ಬಣಗಳಿವೆ ಎಂಬ ವಿಚಾರದಲ್ಲಿ ಮಾತನಾಡಿ ನಮ್ಮಲ್ಲಿ ಯಾವ ಬಣವೂ ಇಲ್ಲ, ಒಂದೇ ಬಣ ಅದು ಬಿಜೆಪಿ ಎಂದು ಹೇಳಿದರು.
ಇದನ್ನೂ ಓದಿ : ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದಿದೆ, ಡಿ.5 ರಂದು ಬಂದ್ ಶತಸಿದ್ದ: ವಾಟಾಳ್ ನಾಗರಾಜ್
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್ಆರ್ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಮಾತನಾಡಿ ಅವ ಚಿಕ್ಕ ಹುಡುಗ ಮೊನ್ನೆ ತಾನೆ ಮದುವೆ ಮಾಡಿಕೊಂಡಿದ್ದಾನೆ. ಎರಡು ಮೂರು ಘಂಟೆ ಅವರ ಜೊತೆ ಕೂತರೆ ಕೌನ್ಸಲಿಂಗ್ ಮಾಡುತ್ತೇನೆ, ಈ ವಿಚಾರದಲ್ಲಿ ವಿಡಿಯೋ ವಿಚಾರದ ಹಾಗೂ ಈ ರೀತಿಯ ಹೇಳಿಕೆಗಳನ್ನ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ಯಾಕೆ ಹೇಳಿದರು ಗೊತ್ತಿಲ್ಲ.
ನಮ್ಮಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಹಿಟ್ ಅಂಡ್ ರನ್ ಮಾಡುತ್ತಾರೆ, ನಿಮ್ಮಲ್ಲಿ ಏನಾದರೂ ದಾಖಲೆಗಳು ಇದ್ರೆ ಕೊಡಿ ಅಂತ ಗೃಹ ಸಚಿವರು ಕೇಳಿದ್ದಾರೆ ಎಂದರು.
12-13 ತಿಂಗಳಲ್ಲಿ ಮುಗಿಸುವುದಕ್ಕೆ ಗಡುವು ಕೊಟ್ಟಿದ್ದೇವೆ. 1ಲಕ್ಷ ಮನೆಗಳನ್ನ ಕಟ್ಟಿ ಕೊಡುವುದು ಪ್ರಧಾನಿ ಮೋದಿಯವರ ಕನಸು. ಬಡವರಿಗೆ, ಅಸಂಘಟಿತ ಕಾರ್ಮಿಕರಿಗೆ ಈ ಮನೆಗಳು ತಲುಪಬೇಕು, 26 ಸಾವಿರ ಅರ್ಜಿಗಳು ಬಂದಿವೆ, ಅರ್ಹತೆ ಪಡೆದವರಿಗೆ ಮನೆಗಳನ್ನ ಕೊಡಲಾಗುತ್ತದೆ ಎಂದು ತಿಳಿಸಿದರು.