HOME » NEWS » State » MINISTER V SOMANNA OUTRAGE AGAINST KODAGU MEDICAL COLLEGE DOCTORS FOR NOT DOING COVID WORK RSK LG

ಕೊಡಗು ಮೆಡಿಕಲ್ ಕಾಲೇಜಿನ ವೈದ್ಯರು ಕೋವಿಡ್ ಆಸ್ಪತ್ರೆಯಲ್ಲಿ ಕೆಲಸವನ್ನೇ ಮಾಡುತ್ತಿಲ್ಲ; ಸಚಿವ ಸೋಮಣ್ಣ ಆಕ್ರೋಶ

ಕಳೆದ ಮೂರು ದಿನಗಳಿಂದಲೂ ಜಿಲ್ಲೆಯಲ್ಲಿದ್ದ ಸಚಿವ ಸೋಮಣ್ಣ, ಜಿಲ್ಲೆಯಲ್ಲಿರುವ ವಿವಿಧ ಕೊವಿಡ್ ಕೇರ್ ಸೆಂಟರ್ ಮತ್ತು ಕೊಡಗು ಕೊವಿಡ್ ಆಸ್ಪತ್ರೆಯನ್ನು ಪರಿಶೀಲಿಸಿದ್ದರು. ಶುಕ್ರವಾರ ಜಿಲ್ಲಾ ಕೊವಿಡ್ ಟಾಕ್ ಫೋರ್ಸ್ ಸಮಿತಿ ಸಭೆ ಕರೆದಿದ್ದಾಗಲೂ ಮೆಡಿಕಲ್ ಕಾಲೇಜಿನ ಡೀನ್ ಅವರನ್ನು ಸಚಿವ ಸೋಮಣ್ಣ ತರಾಟೆಗೆ ತೆಗೆದುಕೊಂಡಿದ್ದರು.

news18-kannada
Updated:May 17, 2021, 8:12 AM IST
ಕೊಡಗು ಮೆಡಿಕಲ್ ಕಾಲೇಜಿನ ವೈದ್ಯರು ಕೋವಿಡ್ ಆಸ್ಪತ್ರೆಯಲ್ಲಿ ಕೆಲಸವನ್ನೇ ಮಾಡುತ್ತಿಲ್ಲ; ಸಚಿವ ಸೋಮಣ್ಣ ಆಕ್ರೋಶ
ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ
  • Share this:
ಕೊಡಗು(ಮೇ 17): ಕೊಡಗು ಮೆಡಿಕಲ್ ಕಾಲೇಜಿನ ವೈದ್ಯರು ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದೇ ಒಂದು ಪರ್ಸೆಂಟ್ ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ನಿತ್ಯ 10 ರಿಂದ 12 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆದರೆ ವೈದ್ಯರು ಎಚ್ಚೆತ್ತುಕೊಳ್ಳುತ್ತಿಲ್ಲ, ಎಚ್ಚೆತ್ತುಕೊಳ್ಳದಿದ್ದರೆ ಇನ್ನೂ ಅಪಾಯವಾಗಲಿದೆ ಎಂದು ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ಮೆಡಿಕಲ್ ಕಾಲೇಜು ಡೀನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಕೊವಿಡ್ ಟಾಸ್ಕ್ ಫೋರ್ಸ್ ಸಮಿತಿಯ ನೇತೃತ್ವದಲ್ಲಿ ಸಚಿವ ಸೋಮಣ್ಣ ಅವರ ಸಭೆ ಕರೆದಿದ್ದರು. ಸಭೆಯಲ್ಲೇ ಬಹಿರಂಗವಾಗಿ ಮೆಡಿಕಲ್ ಕಾಲೇಜಿನ ಡೀನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸೋಮಣ್ಣ ಸ್ವತಃ ಕಾಲೇಜಿನ ಡೀನ್ ಮತ್ತು ಸೂಪರಿಡಿಂಟೆಂಡ್ ಅವರು ಎಷ್ಟು ಬಾರಿ ಕೊವಿಡ್ ವಾರ್ಡುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಪ್ರಶ್ನಿಸಿದರು.

ಶುಕ್ರವಾರ ನಾವು ಹಲವು ಬಾರಿ ಹೇಳಿದ ಮೇಲೆ ಶನಿವಾರ ಡೀನ್ ಕೊವಿಡ್ ವಾರ್ಡುಗಳಿಗೆ ಹೋಗಿ ಬಂದಿದ್ದಾರೆ. ಡೀನ್ ಅವರು ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ ಮೂರು ದಿನಗಳಿಂದಲೂ ಜಿಲ್ಲೆಯಲ್ಲಿದ್ದ ಸಚಿವ ಸೋಮಣ್ಣ, ಜಿಲ್ಲೆಯಲ್ಲಿರುವ ವಿವಿಧ ಕೊವಿಡ್ ಕೇರ್ ಸೆಂಟರ್ ಮತ್ತು ಕೊಡಗು ಕೊವಿಡ್ ಆಸ್ಪತ್ರೆಯನ್ನು ಪರಿಶೀಲಿಸಿದ್ದರು. ಶುಕ್ರವಾರ ಜಿಲ್ಲಾ ಕೊವಿಡ್ ಟಾಕ್ ಫೋರ್ಸ್ ಸಮಿತಿ ಸಭೆ ಕರೆದಿದ್ದಾಗಲೂ ಮೆಡಿಕಲ್ ಕಾಲೇಜಿನ ಡೀನ್ ಅವರನ್ನು ಸಚಿವ ಸೋಮಣ್ಣ ತರಾಟೆಗೆ ತೆಗೆದುಕೊಂಡಿದ್ದರು.

Ramanagar: ಕುಡುಕರ ಕಾಟಕ್ಕೆ ಬೇಸತ್ತ ರೈತರು; ತಮ್ಮ ಜಮೀನಿಗೆ ಕಾಲಿಡಲು ಮದ್ಯಪ್ರಿಯರ ಭಯ

ಭಾನುವಾರ ಕೂಡ ಕೊವಿಡ್ ಟಾಸ್ಕ್ ಫೋರ್ಸ್ ಸಮಿತಿ ನೇತೃತ್ವದಲ್ಲಿ ಮೆಡಿಕಲ್ ಕಾಲೇಜಿನ ವೈದ್ಯರನ್ನು ಸಚಿವ ಸೋಮಣ್ಣ ಸಭೆ ಕರೆದಿದ್ದರು. ಸಭೆಯಲ್ಲಿ ವೈದ್ಯರು, ಮೆಡಿಕಲ್ ಕಾಲೇಜು ಡೀನ್ ಕಾರ್ಯಪ್ಪ, ಸೂಪರಿಡೆಂಟೆಂಟ್ ಲೋಕೇಶ್ ಮತ್ತು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಸಚಿವ ಸೋಮಣ್ಣ ಮೆಡಿಕಲ್ ಕಾಲೇಜಿನ ಕೇವಲ ನಾಲ್ಕು ವೈದ್ಯರು ಮಾತ್ರವೇ ಕೊವಿಡ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲಾ ವೈದ್ಯರು ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬೇಕು. ಡೀನ್ ಕೂಡ ಕೊವಿಡ್ ವಾರ್ಡ್‍ಗಳಿಗೆ ಪಿಪಿಇ ಕಿಟ್ ಧರಿಸಿ ಹೋಗಿ ಒಳಗಿನ ಸಮಸ್ಯೆಗಳನ್ನು ಅರಿತುಕೊಂಡು ಬಗೆಹರಿಸಬೇಕು ಎಂದು ಸೂಚಿಸಿದರು.ಇನ್ನು ಟಾಸ್ಕ್ ಫೋರ್ಸ್ ಸಭೆಗೆ ಎಲ್ಲಾ ವೈದ್ಯರು ಬರುವಂತೆ ಸೂಚಿಸಿದ್ದರೂ, ಸಚಿವರ ಸಭೆಗೆ ನಾಲ್ಕು ವೈದ್ಯರು ಗೈರಾಗಿದ್ದರು. ಹೀಗಾಗಿ ಗೈರಾಗಿದ್ದ ಆ ನಾಲ್ಕು ವೈದ್ಯರಿಗೆ ಕೂಡಲೇ ನೊಟೀಸ್ ನೀಡುವಂತೆ ಸಚಿವ ಸೋಮಣ್ಣ ಸೂಚಿಸಿದರು. ಅಲ್ಲದೆ ಜಿಲ್ಲೆಯಲ್ಲಿರುವ ಪ್ರತೀ ಕೊವಿಡ್ ಆಸ್ಪತ್ರೆ ಮತ್ತು ಕೊವಿಡ್ ಕೇರ್ ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಮೂರು ದಿನಗಳ ಒಳಗಾಗಿ ಅಳವಡಿಸಬೇಕು. ವೈಫೈ ಮೂಲಕ ಎಲ್ಲವನ್ನೂ ಜಿಲ್ಲಾಧಿಕಾರಿಯವರು ಗಮನಿಸಬೇಕು.
Youtube Video

ನಿತ್ಯ ಕನಿಷ್ಠ ದಿನಕ್ಕೆ ಒಂದು ಬಾರಿಯಾದರೂ ಜಿಲ್ಲಾಧಿಕಾರಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತೀ ಕೊವಿಡ್ ಆಸ್ಪತ್ರೆಯ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು. ಇದಕ್ಕೂ ಮೊದಲು ಮೆಡಿಕಲ್ ಕಾಲೇಜಿನಲ್ಲಿ ಸಿದ್ಧಗೊಂಡಿರುವ ನೂರು ಬೆಡ್ ಗಳ ಡಿಸಿಎಚ್‍ಸಿ ಸೆಂಟರ್ ಉದ್ಘಾಟಿಸಿದರು.
Published by: Latha CG
First published: May 17, 2021, 8:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories