HOME » NEWS » State » MINISTER V SOMANNA OUTRAGE AGAINST KODAGU ADC RELATED GOVERNMENT WORK RSK LG

‘ಸಭೆಯ ನಡಾವಳಿ ದಾಖಲಿಸದಿದ್ದರೆ ನೀವೇನು ಕತ್ತೆ ಕಾಯಲು ಬರ್ತಿರಾ’; ಎಡಿಸಿಗೆ ಸಚಿವ ವಿ.ಸೋಮಣ್ಣ ತರಾಟೆ

ಎಡಿಸಿಯಾಗಿ ನಿಮ್ಮ ಕೆಲಸವೇನು, ಎಡಿಸಿ ಎಂದರೇನು ಎಂದು ಪ್ರಶ್ನಿಸಿದ ಸಚಿವ ವಿ ಸೋಮಣ್ಣ, ನೀವು ಡಿಸಿ ಆಗೋದಕ್ಕಾಗಿ, ಪ್ರಮೋಷನ್ ಗಾಗಿ ಬಂದಿದ್ದೀರಾ ಎಂದು ಟೀಸಿಕಿಸಿದರು. ಇದೇ ರೀತಿ ಆದ್ರೆ ಕಟ್ಟುನಿಟ್ಟಿನ ಶಿಸ್ತುಕ್ರಮ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು

news18-kannada
Updated:May 15, 2021, 11:21 AM IST
‘ಸಭೆಯ ನಡಾವಳಿ ದಾಖಲಿಸದಿದ್ದರೆ ನೀವೇನು ಕತ್ತೆ ಕಾಯಲು ಬರ್ತಿರಾ’; ಎಡಿಸಿಗೆ ಸಚಿವ ವಿ.ಸೋಮಣ್ಣ ತರಾಟೆ
ವಿ ಸೋಮಣ್ಣ
  • Share this:
ಕೊಡಗು(ಮೇ 15): ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಳೆದ ಸಭೆಯಲ್ಲಿ ಆಗಿರುವ ಚರ್ಚೆಯನ್ನು ದಾಖಲು ಮಾಡದಿದ್ದರೆ ನೀವೇನು ಕತ್ತೆ ಕಾಯಲು ಸಭೆಗೆ ಬರುತ್ತೀರಾ ಎಂದು ಕೊಡಗು ಎಡಿಸಿ ರಾಜು ಮೊಘವೀರ್ ಅವರನ್ನು ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ತರಾಟೆಗೆ ತೆಗೆದುಕೊಂಡರು. ಕಳೆದ ಸಭೆಯಲ್ಲಿ ಏನು ನಿರ್ಧಾರವಾಗಿದ್ದವು ಎಂಬುದನ್ನು ನೀವು ದಾಖಲು ಮಾಡಿಕೊಳ್ಳದಿದ್ದರೆ ಕೆಲಸ ಹೇಗೆ ಮಾಡುತ್ತೀರಾ? ಇಂತಹ ಅಲ್ಕಟ್ ಕೆಲಸ ಮಾಡಲು ನೀವು ಯಾಕೆ ಬರುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.

ಎಡಿಸಿಯಾಗಿ ನಿಮ್ಮ ಕೆಲಸವೇನು, ಎಡಿಸಿ ಎಂದರೇನು ಎಂದು ಪ್ರಶ್ನಿಸಿದ ಸಚಿವ ವಿ ಸೋಮಣ್ಣ, ನೀವು ಡಿಸಿ ಆಗೋದಕ್ಕಾಗಿ, ಪ್ರಮೋಷನ್ ಗಾಗಿ ಬಂದಿದ್ದೀರಾ ಎಂದು ಟೀಸಿಕಿಸಿದರು. ಇದೇ ರೀತಿ ಆದ್ರೆ ಕಟ್ಟುನಿಟ್ಟಿನ ಶಿಸ್ತುಕ್ರಮ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಹೀಗೆ ತರಾಟೆಗೆ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಜನರ ಜೀವದ ಜೊತೆಗೆ ಯಾರೂ ಆಟ ಆಡಬಾರದು.

ಕಳೆದ ಬಾರಿ ಬಂದಾಗಲೇ ನಾನು ಹೇಳಿದ್ದೆ, ಆದರೂ ಅದನ್ನು ಯಾರೂ ಪಾಲಿಸುತ್ತಿಲ್ಲ. ಟಾಸ್ಕ್ ಫೋರ್ಸ್ ಅಂದರೆ ಅದು ಕೋವಿಡ್ ನಿಯಂತ್ರಣಕ್ಕೆ ರಾಮಬಾಣ. ಅಲ್ಲಿ ನಿರ್ಧಾರವಾಗಿ ವಿಷಯಗಳನ್ನು ಅಧಿಕಾರಿಗಳು ಸರಿಯಾಗಿ ಜಾರಿ ಮಾಡಬೇಕು. ಆದರೆ ಅದನ್ನೇ ಲಘುವಾಗಿ ಪರಿಗಣಿಸಿದರೆ ಹೇಗೆ. ಹೀಗಾಗಿ ಇದನ್ನು ಗಂಭೀರವಾಗಿ ಹೇಳಿದ್ದೇನೆ ಎಂದು ತಾವು ಎಡಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಸಚಿವ ಸೋಮಣ್ಣ ಸಮರ್ಥಿಸಿಕೊಂಡರು.

Explainer: ಕೋವಿಡ್ -19 ಸೋಂಕಿತರಿಗೆ ಆರೈಕೆ ನೀಡುವವರಾಗುವುದು ಹೇಗೆ..? ಇಲ್ಲಿದೆ ಮಾಹಿತಿ

ಸಭೆಯ ಬಳಿಕ ಕೊಡಗು ಜಿಲ್ಲೆಯ ವಿವಿಧ ಕೊವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ವಿ ಸೋಮಣ್ಣ, ಕೊವಿಡ್ ಕೇರ್ ಸೆಂಟರ್ ಗಳು ಕೆಲಸ ನಿರ್ವಹಿಸುತ್ತಿರುವ ಕುರಿತು ಪರಿಶೀಲನೆ ನಡೆಸಿದರು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಮತ್ತು ಸೌಲಭ್ಯಗಳು ದೊರೆಯುತ್ತಿವೆ ಎಂಬುದನ್ನು ಖುದ್ಧು ಭೇಟಿನೀಡಿ ಪರಿಶೀಲಿಸಿದರು. ಬಳಿಕ ಮೆಡಿಕಲ್ ಕಾಲೇಜಿನಲ್ಲೂ ನೂರು ಬೆಡ್‍ಗಳ ಕೊವಿಡ್ ಆಸ್ಪತ್ರೆ ತೆರೆಯಲು ನಿರ್ಧಸಿರುವ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜಿಗೂ ಸೋಮಣ್ಣ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮೆಡಿಕಲ್ ಕಾಲೇಜಿನಲ್ಲಿ ಸೋಂಕಿತರಿಗಾಗಿ ಸಿದ್ಧಗೊಳಿಸಿರುವ ಹಾಸಿಗೆಗಳಿಗೆ ಕಳಪೆ ಗುಣಮಟ್ಟದ ಬೆಡ್ ಶೀಟ್ ಗಳನ್ನು ಹಾಕಿರುವುದನ್ನು ಗಮನಿಸಿದ ಸಚಿವ ಸೋಮಣ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಕಾರ್ಯಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಹಾಸಿಗೆ ಮೇಲೆ ನೀನೆ ಒಂದು ಬಾರಿ ಮಲಗಿ ಎಷ್ಟು ಕಂಫರ್ಟ್ ಇದೆ ಅಂತ ಹೇಳು ಅಂತ ಪ್ರಶ್ನಿಸಿದರು. ಬಳಿಕ ಇವೆಲ್ಲವನ್ನು ಸರಿಪಡಿಸುವಂತೆಯೂ ಸೂಚಿಸಿದರು.
Youtube Video
ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳೊಂದಿಗೆ ಚರ್ಚಿಸಿದ ಸಚಿವ ಸೋಮಣ್ಣ ಸೋಂಕಿತರನ್ನು ಸರಿಯಾಗಿ ಹೋಂ ಕ್ವಾರಂಟೈನ್ ಮಾಡದಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಪ್ರಶ್ನಿಸಿದರು. ಇದರಿಂದ ಸರಿಯಾದ ಮಾಹಿತಿ ನೀಡದಿದ್ದಾಗ ಅಧಿಕಾರಿಗಳಿಗೆ ಮತ್ತೆ ಚಳಿ ಬಿಡಿಸಿದರು. ಸೋಂಕಿತರನ್ನು ಸರಿಯಾಗಿ ಕ್ವಾರಂಟೈನ್ ಮಾಡಿದರುವುದೇ ಜಿಲ್ಲೆಯಲ್ಲಿ ಸೋಂಕು ಹೆಚ್ಚಳವಾಗೋದಕ್ಕೆ ಕಾರಣ. ಅದನ್ನು ಮೊದಲು ಸರಿಪಡಿಸಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
Published by: Latha CG
First published: May 15, 2021, 11:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories