ನವದೆಹಲಿ: ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ವಸತಿ ಸಚಿವ ವಿ.ಸೋಮಣ್ಣ (Minister V Somanna) ಕಾಂಗ್ರೆಸ್ (Congress) ಸೇರ್ಪಡೆಯ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಆದರೆ ಇಂದು ದಿಢೀರ್ ದೆಹಲಿಗೆ ತೆರಳಿರುವ ಸೋಮಣ್ಣ ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ (Former CM BS Yediyurapp) ಮತ್ತು ಪುತ್ರ ವಿಜಯೇಂದ್ರ (BY Vijayendra) ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸೋಮಣ್ಣ, ಯಾರ್ ರೀ ವಿಜಯೇಂದ್ರ? ಅವರ ವಯಸ್ಸು ಮತ್ತು ನನ್ನ ವಯಸ್ಸು ಎಷ್ಟು? ನನಗೆ 72, ವಿಜಯೇಂದ್ರಗೆ 42 ವರ್ಷ. ನನ್ನನ್ನು ಯಾಕೆ ಅವರಿಗೆ ಹೋಲಿಕೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು.
ವಿಜಯೇಂದ್ರ ಅವರಿಗೆ ನನ್ನ ಬಗ್ಗೆ ಏನು ಅನಿಸಿಕೆ ಇದೆಯೋ ಗೊತ್ತಿಲ್ಲ. ಅವರು ನಮ್ಮ ಮಾಜಿ ಸಿಎಂ ಯಡಿಯೂರಪ್ಪನವರ ಮಗ. ನನ್ನ ಮಗ ಮತ್ತು ವಿಜಯೇಂದ್ರ ಮಧ್ಯೆ ಏನಾಗಿದೆಯೋ ಗೊತ್ತಿಲ್ಲ. ಏನು ಗೊಂದಲ ಇದೆಯೋ ಅದನ್ನ ಅವರ ಬಳಿ ಕೇಳಿ. ನನ್ನ ಬಳಿ ಏಕೆ ಕೇಳುತ್ತೀರಿ. ಏನೇ ಸಮಸ್ಯೆ ಆಗಿದ್ರೆ ಕ್ರಮ ಕೈಗೊಳ್ಳಿ ಅಂತ ಈಗಾಗಲೇ ಹೇಳಿದ್ದೀನಿ. ನನ್ನ ದೊಡ್ಡ ಮಗ ವಿಜಯೇಂದ್ರನಕ್ಕಿಂತ ದೊಡ್ಡವನಿದ್ದಾನೆ. ವಿಜಯೇಂದ್ರ ಮಾಜಿ ಸಿಎಂ ಮಗ ಆಗಿದ್ದಾರೆ ಅನ್ನೋದು ಬಿಟ್ರೆ, ಅವರ ತರನೆ ಹಲವರು ನನ್ನ ಜೊತೆ ಇದ್ದಾರೆ ಎಂದು ಹರಿಹಾಯ್ದರು.
ದ್ವೇಷ ಮಾಡಿ ನನಗೇನು ಲಾಭ?
ಯಡಿಯೂರಪ್ಪನವರ ಬಗ್ಗೆ ದ್ವೇಷ ಮಾಡಿ ನನಗೆ ಏನು ಲಾಭ? ಅವರ ಬಗ್ಗೆ ವಿನಾಕಾರಣ ಮಾತಾಡೋದು ಅಪ್ರಸ್ತುತ ಎಂದ ಸೋಮಣ್ಣ ದಯವಿಟ್ಟು ನನ್ನ ಬಿಟ್ಟು ಬಿಡ್ರಪ್ಪ ಅಂತ ಹೇಳಿದರು.
ನನಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ನನ್ನ ಇಡೀ ಜೀವನವೇ ಅದರ ಜೊತೆ ಬೆರೆತು ಹೋಗಿದೆ. ವೀರಶೈವ ಧರ್ಮಕ್ಕೆ ಶತಮಾನಗಳ ಇತಿಹಾಸವಿದೆ. ಇನ್ನೊಬ್ಬರ ಬಗ್ಗೆ ದ್ವೇಷ ಮಾಡಬೇಡಿ ಎನ್ನವುದು ನಾನು ಕಳಿತುಕೊಂಡ ಧರ್ಮ. ಯಡಿಯೂರಪ್ಪನವರ ಬಗ್ಗೆ ನನಗೆ ಸಿಟ್ಟಿಲ್ಲ. ಅವರು ಕರೆದರೆ ಹೋಗುವೆ ಆದರೆ ಇವತ್ತಿನವರೆಗೆ ಅವರು ಕರೆದಿಲ್ಲ. ನನ್ನದು ಯಡಿಯೂರಪ್ಪನವರದ್ದು ತಂದೆ ಮಗ ಸಂಬಂಧ ಎಂದು ಹೇಳಿದರು.
ಅದು ನನ್ನ ವೈಯಕ್ತಿಕ ತೀರ್ಮಾನ
ನನ್ನಿಂದ ಬಿಜೆಪಿಗೆ ಯಾವುದೇ ಅಪಚಾರ ಆಗಲ್ಲ. ಸಿದ್ದಗಂಗಾ ಮಠಕ್ಕೂ ನನಗೂ ಯಾವುದೇ ಮನಸ್ತಾಪ ಇಲ್ಲ. ಅಲ್ಲಿನ ಕಾರ್ಯಕ್ರಮಕ್ಕೆ ಹೋಗದೇ ಇದ್ದದ್ದು ನನ್ನ ವೈಯಕ್ತಿಕ ತೀರ್ಮಾನ. ನನ್ನ ಬಿಟ್ಟು ಬಿಡಿ. ಇಲ್ಲಿ ಯಾರೂ ಶಾಶ್ವತರಲ್ಲ ಎಂದು ಸೋಮಣ್ಣ ಬೇಸರ ಹೊರ ಹಾಕಿದರು.
45 ವರ್ಷದಿಂದ ಜನಸೇವೆ ಮಾಡಿದ್ದೇನೆ. ನನಗೆ ವ್ಯಾಮೋಹ ಇಲ್ಲ. ಮಾಧ್ಯಮದವರು ಅಭಿವೃದ್ಧಿ ಬಗ್ಗೆ ಗಮನ ಕೊಡಿ. ದಿನಾ ಸೋಮಣ್ಣ, ಯಡಿಯೂರಪ್ಪ ಅಂತ ಸಮಯ ಹಾಳು ಮಾಡಬೇಡಿ ಎಂದು ಹೇಳಿ ಹೋದರು.
ರಾಜಾಹುಲಿ ಅಂತ ಕ್ರೆಡಿಟ್ ತಗೋತಾರೆ!
ಸೋಮಣ್ಣ ಏಳಿಗೆಯನ್ನು ಸಹಿಸಲಾಗದ ಒಂದು ಟೀಮ್ ಬಿಜೆಪಿಯಲ್ಲಿದೆ ಎಂದು ಸೋಮಣ್ಣ ಪುತ್ರ ಅರುಣ್ ಬಾಂಬ್ ಸಿಡಿಸಿದ್ದಾರೆ. ಅದೇ ಟೀಮ್ನಿಂದಲೇ ಇಷ್ಟೊಂದು ಗೊಂದಲ ನಿರ್ಮಾಣ ಆಗ್ತಿದೆ. ಹಿಂದೆ ಸೋಮಣ್ಣ ಅವರು ಎಷ್ಟು ಬೈ ಎಲೆಕ್ಷನ್ ಗೆಲ್ಲಿಸಿಲ್ಲ. ಆದರೆ ಇವಾಗ ಯಾರೋ ಒಂದು ಕ್ಷೇತ್ರ ಗೆದ್ದು ತಾವು ರಾಜಹುಲಿ, ಮರಿಹುಲಿ ಅಂತೆಲ್ಲ ಕ್ರೆಡಿಟ್ ತಗೊತ್ತಿದ್ದಾರೆ. ಬಿಜೆಪಿಯಲ್ಲಿ ಸೋಮಣ್ಣ ಆಲದ ಮರ ಇದ್ದಂತೆ ಎಂದಿದ್ದಾರೆ.
ಇದನ್ನೂ ಓದಿ: V Somanna: ಫೋಟೋ ವೈರಲ್ ಬಗ್ಗೆ ಸಚಿವರ ಪ್ರತಿಕ್ರಿಯೆ; ಯಾರ ಮುಲಾಜಲ್ಲೂ ಬದುಕಿಲ್ಲ ಅಂದ್ರು!
ಸಿದ್ದರಾಮಯ್ಯಗೆ ಕೃಷ್ಣನ ಶಾಪ
ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಬಹಳ ಸಲ ಉಡುಪಿಗೆ ಬಂದರು. ಒಮ್ಮೆಯೂ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿಲ್ಲ. ಕೃಷ್ಣ ಮಠದಲ್ಲಿ ಭಕ್ತ ಕನಕದಾಸರ ಪುತ್ಥಳಿ ಇದೆ. ಕನಕನಿಗೂ ಕೃಷ್ಣನಿಗೆ ವಿಶೇಷವಾದ ಸಂಬಂಧ ಇದೆ. ಇಂತಹ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಭೇಟಿ ಕೊಟ್ಟಿಲ್ಲ? ಎಂದು ಕಿಡಿಕಾರಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ