ಮನೆ ಗ್ರಾಂಟ್ ಹಣ ಬಿಡುಗಡೆ ಮಾಡಿ ಎಂದ ದಲಿತ ಯುವಕನಿಗೆ ಮನಬಂದತೆ ನಿಂದಿಸಿದ ಸಚಿವ ವಿ. ಸೋಮಣ್ಣ

ಸರ್ಕಾರದ ಆದೇಶ ನಂಬಿ ಇದ್ದ ಹಣದ ಜೊತೆಗೆ ಸಾಲದ ಹಣವನ್ನೂ ಮನೆ ನಿರ್ಮಾಣಕ್ಕಾಗಿ ಕರ್ಚು ಮಾಡಿರುವ ಪಲಾನುಭವಿಗಳು ಸರ್ಕಾರದಿಂದ ಹಣ ಬರದೆ ಇರುವ ಕಾರಣ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದರೂ ಸರ್ಕಾರದ ಪ್ರತಿನಿಧಿಗಳಾಗಿರುವ ಸಚಿವರು ಸಾರ್ವಜನಿಕರ ಹಿತದೃಷ್ಠಿ ಕಾಪಾಡಲು ಅವರ ಸಮಸ್ಯೆಗಳನ್ನ ಬಗೆಹರಿಸುವ ಕೆಲಸ ಮಾಡಬೇಕಿದೆ.

news18-kannada
Updated:June 3, 2020, 8:45 PM IST
ಮನೆ ಗ್ರಾಂಟ್ ಹಣ ಬಿಡುಗಡೆ ಮಾಡಿ ಎಂದ ದಲಿತ ಯುವಕನಿಗೆ ಮನಬಂದತೆ ನಿಂದಿಸಿದ ಸಚಿವ ವಿ. ಸೋಮಣ್ಣ
ಸಚಿವ ವಿ. ಸೋಮಣ್ಣ
  • Share this:
ಚಿತ್ರದುರ್ಗ(ಜೂ.03): ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ಮನೆ ಕಟ್ಟಿಕೊಳ್ಳಲು ಹಣ ಬಿಡುಗಡೆ ಮಾಡಿ ಎಂದು ಕೇಳಿದ ಯುವಕನಿಗೆ ವಸತಿ ಸಚಿವ ವಿ. ಸೋಮಣ್ಣ ಮನಬಂದಂತೆ ನಿಂದಿಸಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಹಿರೇ ಎಮ್ಮಿಗನೂರು ಗ್ರಾಮದ ದಲಿತ ವ್ಯಕ್ತಿ ಮಧು ಎಂಬಾತನಿಗೆ 2018ರಲ್ಲಿ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಮನೆ ಮಂಜೂರಾಗಿತ್ತು.ಅದರಂತೆ ಮೊದಲ ಹಂತದ ಹಣ ಬಿಡುಗಡೆಯಾಗಿ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ. ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎರಡನೇ ಹಂತದ ಹಣ ಮಂಜೂರಾಗಿಲ್ಲ. ಹೀಗಾಗಿ ಅಧಿಕಾರಿಗಳನ್ನ ಭೇಟಿ ಮಾಡಿದ ಯುವಕ ಅಲ್ಲಿ ನ್ಯಾಯ ಸಿಗದಿದ್ದಾಗ ವಸತಿ ಸಚಿವರಿಗೆ ಕರೆ ಮಾಡಿದ್ದಾರೆ.

ಆದರೆ ಆತನ ಮಾತನ್ನೇ ಅಲಿಸದ ಸಚಿವ ಸೋಮಣ್ಣ ನಿನ್ನ ಲೆವಲ್ ಏನು? ನೀನು ಅಧಿಕಾರಿಗಳ ಬಳಿ ಕೇಳು, ನನಗೆ ಕೇಳಿದ್ರೆ ದುಡ್ಡು ಪ್ರಿಂಟ್ ಮಾಡ್ತೀವಾ? ಮುಂಡೆ ಮಕ್ಕಳು ನೀವು, ಕಾಂಗ್ರೆಸ್ ಕಾಂಗ್ರೆಸ್ ಅಂತ ಸಾಯ್ತೀರಾ. ಎರಡು ಸಾವಿರ ಕೊಡಬೇಕಾದ ಕಡೆ ಕುಮಾರಸ್ವಾಮಿ ಸಿದ್ದರಾಮಯ್ಯ ಎರಡೆರಡು ಲಕ್ಷ ಮಂಜೂರು ಮಾಡಿ ಹೋಗಿದ್ದಾರೆ. ನಿಮಗೆ ಎಲ್ಲಿಂದ ತಂದು ಹಣ ಕೊಡೋದಕ್ಕೆ ಆಗತ್ತೆ ಎಂದೆಲ್ಲಾ ದರ್ಪದ ಮಾತುಗಳನ್ನಾಡಿ ನಿಂದಿಸಿದ್ದಾರೆ.

ಹೀಗಾಗಿ ಬೇಸತ್ತ ಯುವಕ ಮಧು ಸಚಿವರ ಜೊತೆ ಮಾತನಾಡಿದ ಆಡಿಯೋ ಕ್ಲಿಪಿಂಗ್ ಅನ್ನು ವೈರಲ್ ಮಾಡಿದ್ದು, ಅಸ್ಪೃಶ್ಯ ಜನಾಂಗಕ್ಕೆ ವಸತಿ ಸಚಿವ ಸೋಮಣ್ಣ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಚಿವರು ನಮ್ಮನ್ನು ಮುಂಡೇ ಮಕ್ಕಳ ಎಂದು ಜಾತಿ ನಿಂದನೆ ಮಾಡಿದ್ದಾರೆ. ಇದರ ವಿರುದ್ದ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಮಗೆ ಸರ್ಕಾರದ ಸೌಲತ್ತು ಯಾವುದೂ ಬೇಡ, ಆದರೆ ನಮ್ಮನ್ನ ಮುಂಡೆ ಮಕ್ಳು ಅಂತ ಯಾಕೆ ಬೈಯಬೇಕು. ಹೀಗೆ ಬೈದಿರುವ ಅವರು ನಮ್ಮ ಸಮಾಜದ ಮತಗಳನ್ನ ಹೇಗೆ ಹಾಕಿಸಿಕೊಳ್ಳುತ್ತಾರೆ ನೋಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Karnataka Coronavirus: ಕರ್ನಾಟಕದಲ್ಲಿ ಇಂದು 1 ಸಾವು, 267 ಕೊರೋನಾ ಕೇಸ್; 4 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಇನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರಿಗೆ, ನಿರ್ಗತಿಕರಿಗೆ, ಹಿಂದುಳಿದ ಸಮುದಾಯದ ಜನರಿಗೆ ಅನುಕೂಲ ಆಗಲಿ. ಅವರೂ ಸಮಾಜದಲ್ಲಿ ಸಾಮಾಜಿಕವಾಗಿ  ಅಭಿವೃದ್ದಿ ಆಗಲಿ ಅಂತ ಅನೆಕ ಹತ್ತಾರು ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತವೆ. ಆದರೆ ಆ ಯೋಜನೆಗಳಿ ಎಷ್ಟರ ಮಟ್ಟಿಗೆ ಜನರಿಗೆ ತಲುಪುತ್ತವೆ ಅನುಷ್ಠಾನಗೊಳ್ಳುತ್ತವೆ ಎಂಬುದನ್ನ ಸರ್ಕಾರದ ಪ್ರತಿನಿಧಿಗಳು ಮಾಡಬೇಕಿದೆ.ಆ ಕಾರ್ಯವನ್ನ ಮರೆತಿರುವ ವಸತಿ ಸಚಿವ ವಿ. ಸೋಮಣ್ಣ ಸರ್ಕಾರ ತನ್ನ ಕಾರ್ಯಕ್ರಮಗಳ ಮೂಲಕ ಮಂಜೂರು ಮಾಡಿರು ಯೋಜನೆಗಳಿಗೆ ಸರಿಯಾಗಿ ಸಮರ್ಪಕ ಹಣ ನೀಡದೆ ಪಲಾನುಭವಿಗೆ ಅವಾಚ್ಯವಾಗಿ ಮಾತಾನಾಡಿದ್ದಾರೆ. ಪ್ರತೀ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸರ್ವರಿಗೂ ಸಮಪಾಲು ಸಮ ಬಾಳು ಅಂತ ಬೊಬ್ಬೇ ಹೊಡೆಯೋ ಜನ ಪ್ರತಿನಿಧಿಗಳು ಆಡೋ ಮಾತಿಗೂ ಮಾಡೋ ಕಾಯಕಕ್ಕೂ ಸಂಬಂಧವೇ ಇಲ್ಲದಂತೆ ಮಾಡಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೋನಾ ಸಂಕಷ್ಟದಲ್ಲಿ ಸಮಯದಲ್ಲಿ ಕಷ್ಟಕ್ಕೆ ಸಿಲುಕಿರುವ ಪ್ರತೀ ಕುಟುಂಬಗಳಿಗೆ ಅನುಕೂಲ ಆಗಲಿ ಅಂತ ಪರಿಹಾರ ನೀಡಲು ಮುಂದಾಗಿವೆ. ಹಾಗಿರುವಾಗ ಸರ್ಕಾರವೇ ಪಲಾನುಭವಿ ಆಯ್ಕೆ ಮಾಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಹೇಳಿ ಇದೀಗ ಆ ಪಲಾನುಭವಿಗಳಿಗೆ ಯೋಜನೆಯ ಹಣ ಬಿಡುಗಡೆ ಮಾಡದೆ ತಾರತಮ್ಯ ಮಾಡುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ.

ಸರ್ಕಾರದ ಆದೇಶ ನಂಬಿ ಇದ್ದ ಹಣದ ಜೊತೆಗೆ ಸಾಲದ ಹಣವನ್ನೂ ಮನೆ ನಿರ್ಮಾಣಕ್ಕಾಗಿ ಕರ್ಚು ಮಾಡಿರುವ ಪಲಾನುಭವಿಗಳು ಸರ್ಕಾರದಿಂದ ಹಣ ಬರದೆ ಇರುವ ಕಾರಣ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದರೂ ಸರ್ಕಾರದ ಪ್ರತಿನಿಧಿಗಳಾಗಿರುವ ಸಚಿವರು ಸಾರ್ವಜನಿಕರ ಹಿತದೃಷ್ಠಿ ಕಾಪಾಡಲು ಅವರ ಸಮಸ್ಯೆಗಳನ್ನ ಬಗೆಹರಿಸುವ ಕೆಲಸ ಮಾಡಬೇಕಿದೆ.
First published: June 3, 2020, 8:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading