Bandipur Highway: ಬಂಡೀಪುರ ಹೆದ್ದಾರಿ ಅಗಲೀಕರಣಕ್ಕೆ ಅನುಮತಿ ನೀಡಲ್ಲ: ಅರಣ್ಯ ಸಚಿವ ಉಮೇಶ್ ಕತ್ತಿ

ಅರಣ್ಯ ಹಾಗೂ ವನ್ಯಪ್ರಾಣಿಗಳ ಹಿತದೃಷ್ಟಿಯಿಂದ ಹೆದ್ದಾರಿ ಅಗಲೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಉಮೇಶ್​ ಕತ್ತಿ.

ಉಮೇಶ್​ ಕತ್ತಿ.

  • Share this:
ಚಾಮರಾಜನಗರ (ಆ 27): ಬಂಡೀಪುರ ಹುಲಿ ಸಂರಕ್ಷಿತಾರಣ್ಯದ (Bandipur Tiger Reserve And National Park) ನಡುವೆ ಹಾದು ಹೋಗಿರುವ  ಹೆದ್ದಾರಿ ಅಗಲೀಕರಣಕ್ಕೆಅ ನುಮತಿ ಕೊಡುವ ಪ್ರಶ್ನೆಯೇ ಇಲ್ಲ ಎಂದು ಆಹಾರ ಮತ್ತುಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.  ಹೆದ್ದಾರಿ ಅಗಲೀಕರಣಕ್ಕೆ ಅನುಮತಿ ಕೋರಿ ಜೂನ್ ಗು ಮೊದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (national highway authority) ದಿಂದ  ಪ್ರಸ್ತಾವನೆ ಬಂದಿತ್ತು ಅನುಮತಿ ಕೊಡಲು ಸಾಧ್ಯವಿಲ್ಲ ಎಂದು ಹೆದ್ದಾರಿ ಪ್ರಾಧಿಕಾರ ಕ್ಕೆ ಪತ್ರ ಬರೆದಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಕೆ. ಗುಡಿಯಲ್ಲಿ ಮಾತನಾಡಿದ ಸಚಿವರು, ಅರಣ್ಯ ಹಾಗೂ ವನ್ಯಪ್ರಾಣಿಗಳ ಹಿತದೃಷ್ಟಿಯಿಂದ ಹೆದ್ದಾರಿ ಅಗಲೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಬಂಡೀಪುರ ಮೂಲಕ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 181 ರಲ್ಲಿ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳದವರೆಗೆ ಅಗಲೀಕರಣಕ್ಕೆ ಅನುಮತಿ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅರಣ್ಯ ಇಲಾಖೆ ಗೆ ಪ್ರಸ್ತಾವನೆ ಸಲ್ಲಿಸಿತ್ತು.  ಇದಕ್ಕಾಗಿ 24 ಎಕರೆ ಅರಣ್ಯ ಭೂಮಿಯನ್ನು ನೀಡುವಂತೆ ಅದು ಕೇಳಿತ್ತು ಆದರೆ ಇದಕ್ಕೆ ಪರಿಸರವಾದಿಗಳು ಹಾಗು ವನ್ಯಜೀವಿ ತಜ್ಞರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಹುಲಿ ಆನೆ ಸೇರಿದಂತೆ ವನ್ಯಜೀವಿಗಳ ಆವಾಸಸ್ಥಾನವಾಗಿರುವ ಬಂಡೀಪುರಕ್ಕೆ ಹೆದ್ದಾರಿ ಅಗಲೀಕರಣದಿಂದ ಕುತ್ತು ಬರಲಿದೆ. ಶಬ್ಧಮಾಲಿನ್ಯ, ವಾಯು ಮಾಲಿನ್ಯ ಉಂಟಾಗಿ ಪ್ರಾಣಿ ಪಕ್ಷಿ ಗಳಿಗೆ ಕಂಟಕವಾಗಲಿದೆ. ವಾಹನಗಳು ವೇಗವಾಗಿ ಚಲಿಸುವುದರಿಂದ  ರಸ್ತೆ ದಾಟುವ ವೇಳೆ ವನ್ಯಜೀವಿ ಗಳು ವಾಹನಗಳಿಗೆ ಸಿಲುಕಿ.  ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗಲಿವೆ   ಎಂಬ ಆತಂಕವು ಇತ್ತು. ಅರಣ್ಯ ಸಚಿವರ ಹೇಳಿಕೆಯಿಂದ ಸದ್ಯಕ್ಕೆ ಈ  ಆತಂಕ ದೂರವಾಗಿದೆ

ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯ ಸಾಕು.

ಮನುಷ್ಯ ಪ್ರಾಣಿ ಬದುಕಲು ತಿಂಗಳಿಗೆ 5 ಕೆ.ಜಿ. ಆಹಾರ ಧಾನ್ಯ  ಸಾಕು ಎಂಬ ಅವರ ಹೇಳಿಕೆ ಪುನರ್​​ ಉಚ್ಚರಿಸಿದ ಅವರು, ನನಗೆ 60 ವರ್ಷದ ಮೇಲೆ ವಯಸ್ಸಾಗಿದೆ, ನನಗೆ  2 ಚಪಾತಿ ಮೇಲೆ ಒಂದಿಷ್ಟು ಅನ್ನ ಸಾಕು ಎನ್ನುವ ಮೂಲಕ 5 ಕೆಜಿ ಆಹಾರ ಧಾನ್ಯ ನೀಡುವ ಬಗ್ಗೆ   ಸಮರ್ಥನೆ ಮಾಡಿಕೊಂಡರು

ಮುಖ್ಯಮಂತ್ರಿ ಆದರೆ 10 ಕೆಜಿ ಕೊಡ್ತೀನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡುತ್ತಾರೆ.  ಆದರೆ ಆತ ಯಾಕೆ ಹಿಂದೆ ಮುಖ್ಯಮಂತ್ರಿ  ಆಗಿದ್ದಾಗ 10 ಕೆಜಿ ಅಕ್ಕಿ  ಕೊಡಲಿಲ್ಲ ಎಂದು  ಇದೇ ವೇಳೆ ಪ್ರಶ್ನಿಸಿದರು.  ಸಿದ್ದರಾಮಯ್ಯ  ತಮ್ಮ ಸರ್ಕಾರದಲ್ಲಿ 7 ಕೆಜಿ ಅಕ್ಕಿ ಕೊಟ್ಟರು ಕೊಟ್ಟ, ಕುಮಾರಸ್ವಾಮಿ ಅವಧಿಯಲ್ಲಿ 5 ಕೆ.ಜಿ ಆಯ್ತು . ಒಬ್ಬ ಮನುಷ್ಯ ನಿಗೆ  ಒಂದು ತಿಂಗಳಿಗೆ ಅಕ್ಕಿ ರಾಗಿ ಸೇರಿ  5 ಕೆಜಿ ಸಾಕು ಆಹಾರ ಧಾನ್ಯ ಎಂದು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದರು

ಅತ್ಯಾಚಾರ ಪ್ರಕರಣ: ಏನೂ ಮಾಡಕ್ಕಾಗಲ್ಲ ಸಚಿವ ಕತ್ತಿ ವಿವಾದಾತ್ಮಕ ಹೇಳಿಕೆ

ಇದೇ ವೇಳೆ ಮೈಸೂರು ವಿದ್ಯಾರ್ಥಿನಿ ಮೇಲೆ  ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ  ಪ್ರತಿಕ್ರಿಯಿಸಿದ ಅವರು ಏನೂ ಮಾಡಕ್ಕಗಲ್ಲಾ, ಸಮಾಜದಲ್ಲಿ‌ ಇಂತಹ ಘಟನೆ ನಡೆಯುತ್ತಿರುತ್ತವೆ. ಇಂತಹ ಘಟನೆಗಳು‌ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ನಾನು ಗೃಹ ಸಚಿವನಲ್ಲಾ, ಗೃಹ ಸಚಿವರು ಸರಿಯಾದ ಕ್ರಮ ಕೈಗೊಳ್ಳುತ್ತಾರೆ ಎಂದರು.ನ್ಯೂಸ್​​​18 ಕನ್ನಡ ಕಳಕಳಿ: ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: