ಬೆಂಗಳೂರು: ಅರಣ್ಯ ಸಚಿವ (Forest Minister) ಉಮೇಶ್ ಕತ್ತಿ (Umesh katti) ಅವರಿಗೆ ಹೃದಯಾಘಾತ (Heart Attack) ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ರಾಜ್ಯ ಸರ್ಕಾರದಲ್ಲಿ (State Government) ಉಮೇಶ್ ಕತ್ತಿ ಅರಣ್ಯ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಇಂದಿಡೀ ದಿನ ಚೆನ್ನಾಗಿಯೇ ಇದ್ದ ಉಮೇಶ್ ಕತ್ತಿ, ಬೆಂಗಳೂರಿನ (Bengaluru) ಡಾಲರ್ಸ್ ಕಾಲನಿಯ (Dollars Colony) ತಮ್ಮ ನಿವಾಸದಲ್ಲಿ (House) ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇಂದು ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ಎದೆನೋವು (Pain) ಕಾಣಿಸಿಕೊಂಡಿದೆ. ಕೂಡಲೇ ಮನೆಯವರು, ಅವರ ಸಹಾಯಕರು ಅವರನ್ನು ಅಲ್ಲಿಯೇ ಹತ್ತಿರದಲ್ಲಿದ್ದ ಎಂಎಸ್ ರಾಮಯ್ಯ ಆಸ್ಪತ್ರೆಗೆ (MS Ramaiah Hospital) ಕರೆದುಕೊಂಡು ಹೋಗಿದ್ದಾರೆ. ಕೂಡಲೇ ಅವರನ್ನು ಪರೀಕ್ಷಿಸಿದ ವೈದ್ಯರು (Doctors), ಸದ್ಯ ತುರ್ತು ನಿಗಾ ಘಟಕಕ್ಕೆ (Emergency Care Unit) ದಾಖಲಿಸಿ, ಚಿಕಿತ್ಸೆ (Treatment) ನೀಡುತ್ತಿದ್ದಾರೆ.
ಬಾತ್ ರೂಂನಲ್ಲಿ ಕುಸಿದು ಬಿದ್ದಿದ್ದ ಸಚಿವರು
ಸಚಿವ ಉಮೇಶ್ ಕತ್ತಿ ಇಂದು ತಮ್ಮ ಮನೆಯ ಬಾತ್ ರೂಮ್‌ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು ಎನ್ನಲಾಗುತ್ತಿದೆ. ರಾತ್ರಿ 10.30ರ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದೆ. ಸದ್ಯ ಅವರಿಗೆ ಎಂಎಸ್ ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಈ ಹಿಂದೆ ಎರಡು ಬಾರಿ ಹೃದಯಾಘಾತ
ಸಚಿವ ಉಮೇಶ್ ಕತ್ತಿ ಅವರಿಗೆ ಹೃದಯಾಘಾತವಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಎರಡು ಬಾರಿ ಉಮೇಶ್ ಕತ್ತಿ ಅವರಿಗೆ ಹಾರ್ಟ್ ಆಟ್ಯಾಕ್ ಆಗಿತ್ತು. ಈ ಹಿಂದೆ ಹೃದಯಾಘಾತವಾದಾಗ ಅವರ ಹಾರ್ಟ್‌ಗೆ ಸ್ಟಂಟ್ ಅಳವಡಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ಉಮೇಶ್ ಕತ್ತಿ ಅವರಿಗೆ ಹೃದಯಾಘಾತವಾಗಿದೆ.
ವೈದ್ಯರ ಜೊತೆ ಮಾತನಾಡಿದ ಸಿಎಂ
ಇನ್ನು ಹಿರಿಯ ಸಹೋದ್ಯೋಗಿ ಉಮೇಶ್ ಕತ್ತಿ ಅನಾರೋಗ್ಯದ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದಿದ್ದಾರೆ. ಈಗಾಗಲೇ ಎಂಎಸ್ ರಾಮಯ್ಯ ಆಸ್ಪತ್ರೆ ವೈದ್ಯರೊಂದಿಗೆ ಸಿಎಂ ಮಾತನ್ನಾಡಿದ್ದಾರೆ. ಈ ಕುರಿತಂತೆ ದೂರವಾಣಿ ಕರೆ ಮಾಡಿ ವಿಚಾರಿಸಿದ ಬಸವರಾಜ ಬೊಮ್ಮಾಯಿ, ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ. ಇನ್ನು ಸಾಧ್ಯವಾದರೆ ನಾನು ಸಹ ಆಸ್ಪತ್ರೆಗೆ ಭೇಟಿ ನೀಡಿ, ಉಮೇಶ್ ಕತ್ತಿ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವುದಾಗಿ ಸಿಎಂ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ