ಬುದ್ಧಿಮಾಂದ್ಯ ಮಗಳಿಗಾಗಿ ವರ್ಗಾವಣೆ ವಿರುದ್ಧ ಶಿಕ್ಷಕಿ ಹೋರಾಟ; ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರೆದ ಸಚಿವ ಸುರೇಶ್​ ಕುಮಾರ್​​

ಹೌದು, ಮಾಧ್ಯಮಗಳಲ್ಲಿ ಶಿಕ್ಷಕಿಯ ಅಳಲು ವಿಚಾರ ಪ್ರಸಾರವಾಗುತ್ತಿದ್ದಂತೆಯೇ ಶಿಕ್ಷಣ ಸಚಿವ ಸುರೇಶ್​​ ಕುಮಾರ್ ಎಚ್ಚೆತ್ತುಕೊಂಡಿದ್ದಾರೆ. ಈ ಬೆನ್ನಲೇ ಶಿಕ್ಷಕಿಗೆ ಕರೆ ಮಾಡಿದ ಸುರೇಶ್​ ಕುಮಾರ್​​ ಸಮಸ್ಯೆ ಆಲಿಸಿದ್ದಾರೆ.

news18-kannada
Updated:December 9, 2019, 3:24 PM IST
ಬುದ್ಧಿಮಾಂದ್ಯ ಮಗಳಿಗಾಗಿ ವರ್ಗಾವಣೆ ವಿರುದ್ಧ ಶಿಕ್ಷಕಿ ಹೋರಾಟ; ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರೆದ ಸಚಿವ ಸುರೇಶ್​ ಕುಮಾರ್​​
ಸಚಿವ ಸುರೇಶ್ ಕುಮಾರ್
  • Share this:
ಬೆಂಗಳೂರು(ಡಿ.08): ಬುದ್ಧಿಮಾಂದ್ಯ ಮಗಳ ಜೀವನಕ್ಕಾಗಿ ವರ್ಗಾವಣೆ ಕೋರಿ ಕಚೇರಿಯಿಂದ ಕಚೇರಿಗೆ ಅಲಿಯುತ್ತಿದ್ದ ರಾಯಚೂರು ಮೂಲದ ಶಿಕ್ಷಕಿ ಸಮಸ್ಯೆಗೆ ಶಿಕ್ಷಣ ಸಚಿವ ಸುರೇಶ್​​ ಕುಮಾರ್ ಸ್ಪಂದಿಸಿದ್ಧಾರೆ. ಖುದ್ದು ಸುರೇಶ್​ ಕುಮಾರ್​​ ಅವರೇ ಶಿಕ್ಷಕಿಗೆ ಕರೆ ಮಾಡಿ ತಮ್ಮ ಮನವಿಯಂತೆ ವರ್ಗಾವಣೆ ಮಾಡುವುದಾಗಿ ಹೇಳಿದ್ದಾರೆ.

ಹೌದು, ಮಾಧ್ಯಮಗಳಲ್ಲಿ ಶಿಕ್ಷಕಿಯ ಅಳಲು ವಿಚಾರ ಪ್ರಸಾರವಾಗುತ್ತಿದ್ದಂತೆಯೇ ಶಿಕ್ಷಣ ಸಚಿವ ಸುರೇಶ್​​ ಕುಮಾರ್ ಎಚ್ಚೆತ್ತುಕೊಂಡಿದ್ದಾರೆ. ಈ ಬೆನ್ನಲೇ ಶಿಕ್ಷಕಿಗೆ ಕರೆ ಮಾಡಿದ ಸುರೇಶ್​ ಕುಮಾರ್​​ ಸಮಸ್ಯೆ ಆಲಿಸಿದ್ದಾರೆ. ಹಾಗೆಯೇ ತಮ್ಮ ಸಮಸ್ಯೆ ಬಗ್ಗೆ ವಿವರವಾಗಿ ಮೇಸೇಜ್​​ವೊಂದು ಕಳಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ತನಗೆ ಬೇಕಾದ ಕಡೆಗೆ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿರುವ ವಿಚಾರ ಸುರೇಶ್ ಕುಮಾರ್​​​ ಟ್ವೀಟ್​​ ಮೂಲಕ ಹಂಚಿಕೊಂಡಿದ್ದಾರೆ.




ರಾಯಚೂರು ನಗರದ ಜಹೀರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಶಾಂತಾಲಕ್ಷ್ಮಿ ಎಂಬುವರನ್ನು ಮೇಲಾಧಿಕಾರಿಗಳು ಬೇರೆಡೆಗೆ ವರ್ಗಾವಣೆ ಮಾಡಿದ್ದರು. ರಾಯಚೂರಿನಿಂದ ಸುಮಾರು 25 ಕಿಲೋ ಮೀಟರ್​ ದೂರದ ಮಾಟಮಾರಿ ಎಂಬ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಈಗಾಗಲೇ ಗಂಡನನ್ನು ಕಳೆದುಕೊಂಡಿದ್ದ ಶಿಕ್ಷಕಿ ಮಾತ್ರ ತನ್ನ ಬುದ್ಧಿಮಾಂದ್ಯ ಮಗಳಿಗಾಗಿ ದೀಢೀರ್​​ ಮಾಡಿದ ವರ್ಗಾವಣೆ ವಿರೋಧಿಸಿ ಪ್ರತಿಭಟಿಸುತ್ತಿದ್ದರು. ತನ್ನ ವರ್ಗಾವಣೆ ಆದೇಶ ಹಿಂಪಡೆಯುವಂತೆ ಮೇಲಾಧಿಕಾರಿಗಳಿಗೆ ಮನವಿಯೂ ಮಾಡಿದ್ದರು.

ಇದನ್ನೂ ಓದಿ: ‘ಗೋವು ಸಾಕಾಣಿಕೆ ಮಾಡಿದರೆ ಕೈದಿಗಳ ಮನಸ್ಥಿತಿ ಬದಲಾಗುತ್ತದೆ: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್​​ ಭಾಗವತ್​​

ಕಡ್ಡಾಯ ವರ್ಗಾವಣೆ ಮಾಡಲು ಶಿಕ್ಷಕರು ಕನಿಷ್ಠ 10 ವರ್ಷ ಒಂದು ಶಾಲೆಯಲ್ಲಿ ಕೆಲಸ ಮಾಡಿರಬೇಕು. ಇಲ್ಲದೇ ಹೋದರೆ ಮೇಲಾಧಿಕಾರಿಗೆ ಶಿಕ್ಷರನ್ನು ಕಡ್ಡಾಯ ವರ್ಗಾವಣೆ ಮಾಡುವ ಅಧಿಕಾರವಿಲ್ಲ. ಆದರೀಗ, ಶಾಂತಲಕ್ಷ್ಮಿ ಎಂಬುವರು 8 ವರ್ಷಗಳಿಂದ ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಹೀಗೆ ಹೇಳದೆ ಕೇಳದೆ ಶಿಕ್ಷಕಿಯನ್ನು ವರ್ಗಾಯಿಸಿದ ಮೇಲಾಧಿಕಾರಿ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಶಿಕ್ಷಣ ಸಚಿವ ಸುರೇಶ್​ ಕುಮಾರ್​​ ಶಿಕ್ಷಕಿ ಮನವಿಗೆ ಸ್ಪಂದಿಸಿದ್ದಾರೆ.
First published: December 8, 2019, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading