ವೀರಪ್ಪನ್ ಊರಲ್ಲಿ ತಮಿಳು ಬದಲು ಕನ್ನಡ ಮಾಧ್ಯಮ ಶಾಲೆ - ಸುರೇಶ್ ಕುಮಾರ್ ಆದೇಶ

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುರೇಶ್ ಕುಮಾರ್ ಅವರು ಗೋಪಿನಾಥಮ್ ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ಧಾಗ ಕನ್ನಡ ಶಾಲೆಯ ಅಲಭ್ಯತೆಯ ವಿಚಾರ ಗಮನಕ್ಕೆ ಬಂದಿತ್ತು.

news18
Updated:December 4, 2019, 11:43 AM IST
ವೀರಪ್ಪನ್ ಊರಲ್ಲಿ ತಮಿಳು ಬದಲು ಕನ್ನಡ ಮಾಧ್ಯಮ ಶಾಲೆ - ಸುರೇಶ್ ಕುಮಾರ್ ಆದೇಶ
ಗೋಪಿನಾಥಮ್ ಗ್ರಾಮದ ಶಾಲಾ ಮಕ್ಕಳೊಂದಿಗೆ ಸಚಿವ ಸುರೇಶ್ ಕುಮಾರ್
  • News18
  • Last Updated: December 4, 2019, 11:43 AM IST
  • Share this:
ಬೆಂಗಳೂರು(ಡಿ. 04): ಗಡಿಭಾಗದಲ್ಲಿ ಕನ್ನಡ ಶಾಲೆಗಳು ಇಳಿಮುಖವಾಗುತ್ತಿರುವ ಹೊತ್ತಲ್ಲಿ ವೀರಪ್ಪನ್ ಹುಟ್ಟೂರಾದ ಚಾಮರಾಜನಗರದ ಗೋಪಿನಾಥಮ್​ನಲ್ಲಿ ಕನ್ನಡ ಶಾಲೆ ಬಗ್ಗೆ ಸರ್ಕಾರ ಆಸಕ್ತಿ ತೋರಿದೆ. ಚಾಮರಾಜನಗರದ ತಮಿಳುನಾಡು ಗಡಿಭಾಗದ ಗೋಪಿನಾಥನ್ ಗ್ರಾಮದಲ್ಲಿ ತಮಿಳು ಬದಲು ಕನ್ನಡ ಮಾಧ್ಯಮದಲ್ಲಿ ಶಾಲೆ ಪ್ರಾರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ಧಾರೆ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುರೇಶ್ ಕುಮಾರ್ ಅವರು ಗೋಪಿನಾಥಮ್ ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ಧಾಗ ಕನ್ನಡ ಶಾಲೆಯ ಅಲಭ್ಯತೆಯ ವಿಚಾರ ಗಮನಕ್ಕೆ ಬಂದಿದೆ. ನಾಲ್ಕನೇ ತರಗತಿಯವರೆಗೆ ತಮಿಳು ಮಾಧ್ಯಮದ ಬದಲು ಕನ್ನಡ ಮಾಧ್ಯಮದಲ್ಲಿ ಕಲಿಯಲು ಅವಕಾಶ ಕಲ್ಪಿಸುವಂತೆ ಗ್ರಾಮದ ಮಕ್ಕಳು ಮತ್ತು ಪೋಷಕರು ಸಚಿವರ ಬಳಿ ಮನವಿ ಮಾಡಿಕೊಂಡಿದ್ದಂತೆ. ಅದರಂತೆ, ಈ ಶಾಲೆಯನ್ನು ಉನ್ನತೀಕರಿಸಿ ಕನ್ನ ಮಾಧ್ಯಮ ಪ್ರಾರಂಭಿಸಲು ಸುರೇಶ್ ಕುಮಾರ್ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಈ ವಿಚಾರವನ್ನು ಕರ್ನಾಟಕ ವಾರ್ತೆ ತನ್ನ ಟ್ವಿಟ್ಟರ್​ನಲ್ಲಿ ತಿಳಿಸಿದೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ