HOME » NEWS » State » MINISTER SURESH KUMAR GAVE INDICATION TO TAKE ACTION WHO VIRAL STUDENTS VIDEO RH

ಪಕ್ಕೆಲುಬು ಪದ ತಪ್ಪು ಉಚ್ಚಾರಣೆ ಮಾಡುವ ಬಾಲಕನ ವಿಡಿಯೋ ವೈರಲ್; ಶಿಕ್ಷಕನ ವಿರುದ್ಧ ಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಸೂಚನೆ

ಮಕ್ಕಳ ಬಗ್ಗೆ ಶಿಕ್ಷಕರು ವ್ಯಂಗ್ಯವಾಗಿ ತೋರಿಸುವುದು, ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವಂತ ಕೃತ್ಯಕ್ಕೆ ಮುಂದಾದರೆ ಅಂತಹ ಶಿಕ್ಷಕರು, ಶಾಲಾ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ. 

HR Ramesh | news18-kannada
Updated:January 9, 2020, 9:42 PM IST
ಪಕ್ಕೆಲುಬು ಪದ ತಪ್ಪು ಉಚ್ಚಾರಣೆ ಮಾಡುವ ಬಾಲಕನ ವಿಡಿಯೋ ವೈರಲ್; ಶಿಕ್ಷಕನ ವಿರುದ್ಧ ಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಸೂಚನೆ
ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬರೆದಿರುವ ಪತ್ರ.
  • Share this:
ಬೆಂಗಳೂರು: ಶಾಲಾ ಬಾಲಕನೊಬ್ಬ ಪಕ್ಕೆಲುಬು ಎಂಬ ಪದ ಹೇಳಲು ಸಾಧ್ಯವಾಗದೆ ತೊದಲುವುದನ್ನು ವಿಡಿಯೋ ಮಾಡಿದ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಶಾಲೆಯ ಶಿಕ್ಷಕನೊರ್ವ ಬಾಲಕನನ್ನು ತರಗತಿಯಲ್ಲಿ ಕೂರಿಸಿಕೊಂಡು ಪಕ್ಕೆಲುಬು ಪದವನ್ನು ಉಚ್ಛಾರ ಮಾಡುವಂತೆ ಹೇಳುತ್ತಾರೆ. ಆದರೆ ಆ ಬಾಲಕ ಎಷ್ಟೇ ಪ್ರಯತ್ನಿಸಿದರೂ ಪಕ್ಕೆಲುಬು ಪದವನ್ನು ಉಚ್ಚಾರ ಮಾಡಲು ಸಾಧ್ಯವಾಗುವುದಿಲ್ಲ. ಕೆಲವು ಬಾರಿ ತಾಳ್ಮೆ ಕಳೆದುಕೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಅವಾಚ್ಯ ಶಬ್ದದಿಂದ ನಿಂದಿಸುತ್ತಾ, ಬೆದರಿಸಿ ಪಕ್ಕೆಲುಬು ಪದ ಉಚ್ಚಾರಣೆ ಮಾಡುವಂತೆ ಬಲವಂತ ಮಾಡುತ್ತಾರೆ. ಆದರೆ, ಮೊದಲೇ ಭಯಗೊಂಡಿದ್ದ ಬಾಲಕ ಪದ ಹೇಳಲು ಸಾಧ್ಯವಾಗದೆ ಆಳುತ್ತಾ, ತಪ್ಪು ಪದ ಉಚ್ಚಾರಣೆ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ವಿಡಿಯೋವನ್ನು ನೋಡಿರುವ ಸಚಿವ ಸುರೇಶ್ ಕುಮಾರ್ ಅವರು, "ಮಕ್ಕಳಿಗೆ ಶಿಕ್ಷಕರು ಸರಿಯಾಗಿ ಉಚ್ಛಾರ ಮಾಡುವುದನ್ನು ಕಲಿಸಬೇಕು. ಆದರೆ ಅದನ್ನೇ ದೊಡ್ಡ ಅಪರಾಧವೆಂದು ಬಿಂಬಿಸಿ, ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಅಪರಾಧ. ತಕ್ಷಣ ಮೇಲ್ಕಂಡ ಕೃತ್ಯ ಯಾವ ಶಾಲೆಯಲ್ಲಿ ನಡೆದಿದೆ ಮತ್ತು ಯಾವ ಶಿಕ್ಷಕರು ಈ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ ಎಂಬುದನ್ನು ಪತ್ತೆ ಮಾಡಿ, ಈ ಬಗ್ಗೆ ಸೈಬರ್ ಕ್ರೈಮ್ ಗೆ ದೂರು ನೀಡಬೇಕು. ಹಾಗೂ ಆ ಶಿಕ್ಷಕರು, ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು," ಎಂದು ಸೂಚನೆ ನೀಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಮಕ್ಕಳ ಬಗ್ಗೆ ಶಿಕ್ಷಕರು ವ್ಯಂಗ್ಯವಾಗಿ ತೋರಿಸುವುದು, ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವಂತ ಕೃತ್ಯಕ್ಕೆ ಮುಂದಾದರೆ ಅಂತಹ ಶಿಕ್ಷಕರು, ಶಾಲಾ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ.

ಇದನ್ನು ಓದಿ: ರಾಯಚೂರು ಬಾಲಕಿಯೋರ್ವಳ ಕಣ್ಣಿನಲ್ಲಿ ಉರುಳುತ್ತಿವೆ ಹರಳು; ಆತಂಕದಲ್ಲಿ ಪೋಷಕರು
Published by: HR Ramesh
First published: January 9, 2020, 9:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories