ಸರ್ಕಾರಿ ಶಾಲೆ ದತ್ತು ಪಡೆದ ಡಿ ಬಾಸ್​ ದರ್ಶನ್ ಅಭಿಮಾನಿಗಳ​ ಕಾರ್ಯಕ್ಕೆ ಶಹಬ್ಬಾಸ್​ ಹೇಳಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್​​

ದರ್ಶನ್​​ ಅಭಿಮಾನಿಗಳು  ಕೇವಲ ನಾಯಕರ ಆರಾಧನೆಯಲ್ಲಿ ತೊಡಗದೆ ಈ ರೀತಿಯ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಎಲ್ಲರಿಗೂ  ಆದರ್ಶಪ್ರಾಯವಾಗಿದ್ದಾರೆ.

Seema.R | news18-kannada
Updated:September 25, 2019, 4:31 PM IST
ಸರ್ಕಾರಿ ಶಾಲೆ ದತ್ತು ಪಡೆದ ಡಿ ಬಾಸ್​ ದರ್ಶನ್ ಅಭಿಮಾನಿಗಳ​ ಕಾರ್ಯಕ್ಕೆ ಶಹಬ್ಬಾಸ್​ ಹೇಳಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್​​
ಸುರೇಶ್​ ಕುಮಾರ್​-ನಟ ದರ್ಶನ್​
  • Share this:
ಬೆಂಗಳೂರು (ಸೆ.25):  ಸರ್ಕಾರಿ ಶಾಲೆಯನ್ನು ದತ್ತು ಪಡೆಯುವ ಮೂಲಕ ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಅವರ ಅಭಿಮಾನಿಗಳು ಸದ್ದಿಲ್ಲದಂತೆ ಸಮಾಜ ಮುಖಿ ಕಾರ್ಯದಲ್ಲಿ ನಿರತರಾಗಿದ್ದು, ಅವರ ಸಾಮಾಜಿಕ ಸೇವೆ ಎಲ್ಲೆಡೆ ಈಗ ಪ್ರಶಂಸೆ ವ್ಯಕ್ತವಾಗಿದೆ.

ಇತ್ತೀಚೆಗೆ ದರ್ಶನ್​ ಅಭಿಮಾನಿಗಳ ಸಂಘ 'ಡಿಬಾಸ್ ಕಂಪನಿ ​' ಹಾಸನ ಜಿಲ್ಲೆಯ ಸಕಲೇಶಪುರದ ಕುಗ್ರಾಮವಾದ ರಾಮೇನಹಳ್ಳಿಯ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ತೆಗೆದುಕೊಂಡಿದ್ದಾರೆ.

ಈ ಮೂಲಕ ಇನ್ನೇರಡು ವರ್ಷ ಶಾಲೆಗೆ ಬೇಕಾದ ಮೂಲ ಸೌಕರ್ಯ, ಪಿಠೋಪಕರಣ, ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳನ್ನು ಪೂರೈಸುವ ಭರವಸೆ ನೀಡಿದ್ದು, ಈಗಾಗಲೇ ಈ ಪಟ್ಟಿಯನ್ನು ಪಡೆದು ಶೀಘ್ರದಲ್ಲಿಯೇ ಶಾಲೆಗೆ ಪುನರ್​ಕಾಯಕಲ್ಪ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ.

suresh kumar tweet
ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಟ್ವೀಟ್​​


ಈ ಕಾರ್ಯ ಈಗ  ಎಲ್ಲೆಡೆ ಪ್ರಶಂಸೆಗೆ ಒಳಗಾಗಿದ್ದು, ಇದರಿಂದ ರಾಮೇನಹಳ್ಳಿಯ ಜನ ಹಾಗೂ ಶಾಲೆಯ ಸಿಬ್ಬಂದಿಗಳಲ್ಲಿ ಹರ್ಷ ಮೂಡಿದೆ. ಇವರ ಈ ಕಾರ್ಯ ಈಗ ಶಿಕ್ಷಣ ಸಚಿವರ ಗಮನಕ್ಕೂ ಬಂದಿದ್ದು, ಅವರ ಕೆಲಸಕ್ಕೆ ಶಹಬ್ಬಾಸ್​ ಗಿರಿ ಹೇಳಿದ್ದಾರೆ. ಅವರ ಈ ಕೆಲಸಕ್ಕೆ ಹೃದಯತುಂಬಿ ಧನ್ಯವಾದಗಳನ್ನು ಹೇಳಿದ್ದಾರೆ.

ದರ್ಶನ್​​ ಅಭಿಮಾನಿಗಳು  ಕೇವಲ ನಾಯಕರ ಆರಾಧನೆಯಲ್ಲಿ ತೊಡಗದೆ ಈ ರೀತಿಯ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಎಲ್ಲರಿಗೂ  ಆದರ್ಶಪ್ರಾಯವಾಗಿದ್ದಾರೆ.

ಇದನ್ನು ಓದಿ: Odeya: ದರ್ಶನ್​ ಅಭಿನಯದ ಒಡೆಯ ಚಿತ್ರದ ಪೋಸ್ಟರ್​ ಔಟ್​: ಸಾಮಾಜಿಕ ಜಾಲತಾಣದಲ್ಲಿ ಫೋಟೋ ಬದಲಿಸಿದ ದರ್ಶನ್ಕನ್ನಡ ಸಿನಿಮಾದಲ್ಲಿಯೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದರ್ಶನ್​ ಹೊಂದಿದ್ದಾರೆ. ಈಗಾಗಲೇ ದರ್ಶನ್​ ಹೆಸರಿನಲ್ಲಿ ಅನೇಕ ಸಮಾಜಿಕ ಕಾರ್ಯದಲ್ಲಿ ಅವರು ನಿರತರವಾಗಿದ್ದು, ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ರಾಮೇನಹಳ್ಳಿ ಗ್ರಾಮಸ್ಥರು ಕೂಡ ಆಶಿಸಿದ್ದಾರೆ.

First published:September 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading