• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bike Rally: ಹೆಲ್ಮೆಟ್ ಧರಿಸದೆ ಮುಸ್ಲಿಂ ಮಾಲೀಕತ್ವದ ಬೈಕ್ ಚಲಾಯಿಸಿದ ಸಚಿವ ಸುನೀಲ್ ಕುಮಾರ್ ಟ್ರೋಲ್‌

Bike Rally: ಹೆಲ್ಮೆಟ್ ಧರಿಸದೆ ಮುಸ್ಲಿಂ ಮಾಲೀಕತ್ವದ ಬೈಕ್ ಚಲಾಯಿಸಿದ ಸಚಿವ ಸುನೀಲ್ ಕುಮಾರ್ ಟ್ರೋಲ್‌

ಸಚಿವ ಸುನೀಲ್ ಕುಮಾರ್

ಸಚಿವ ಸುನೀಲ್ ಕುಮಾರ್

ಸಚಿವ ಸುನೀಲ್ ಕುಮಾರ್ ನಡೆಯನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡುತ್ತಿದ್ದು, ಮುಸ್ಲಿಮರ ಜೊತೆ ವ್ಯವಹಾರ ಮಾಡಬಾರದು, ಜಾತ್ರೆಗಳಲ್ಲಿ ಅಂಗಡಿ ಹಾಕಲು ಅವಕಾಶ ಕೊಡಬಾರದು ಎಂದೆಲ್ಲ ಕಾರ್ಯಕರ್ತರಿಗೆ ಹೇಳುತ್ತೀರಿ. ಆದರೆ ನೀವು ಮಾತ್ರ ಮುಸ್ಲಿಮರ ಜೊತೆ ಸಂಬಂಧ ಇಟ್ಟುಕೊಳ್ಳುತ್ತೀರಿ. ಮುಸ್ಲಿಮರ ಬೈಕ್ ಉಪಯೋಗಿಸಿದ್ದು ತಪ್ಪಲ್ಲ, ಆದರೆ ನೀವು ಹೇಳೋದೊಂದು ಮಾಡೋದೊಂದು ಎಂದು ಟ್ರೋಲಿಗರು ಕಿಚಾಯಿಸಿದ್ದಾರೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Karkal, India
  • Share this:

ಉಡುಪಿ: ಇತ್ತೀಚೆಗೆ ಕಾರ್ಕಳ (Karkala Constituency) ತಾಲೂಕಿನಲ್ಲಿ ನಡೆದ ವಿಜಯ ಸಂಕಲ್ಪ ಬೈಕ್ ರ್ಯಾಲಿ (Vijay Sankalp Bike Rally) ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೆಲ್ಮೆಟ್ (Helmet) ಧರಿಸದೆ ಬೈಕ್ ಸಂಚಾರ ನಡೆಸಿದ್ದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ (V Sunil Kumar) ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಕಳೆದ ಕೆಲ ದಿನಗಳ ಹಿಂದೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಭಾಗವಾಗಿ ವಿಜಯ ಸಂಕಲ್ಪ ಬೈಕ್‌ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಆದರೆ ಈ ಬೈಕ್‌ ರ್ಯಾಲಿಯಲ್ಲಿ ಭಾಗವಹಿಸಿದ ಬಹುತೇಕ ಜನರು ಬೈಕ್ ಜಾಥಾ ನಡೆಸುವ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ. ಕಾರ್ಯಕರ್ತರು ಬಿಡಿ, ಸ್ವತಃ ಸಚಿವ ಸುನೀಲ್ ಕುಮಾರ್ ಸಹ ಹೆಲ್ಮೆಟ್ ಧರಿಸಿರಲಿಲ್ಲ.


ಇದನ್ನೂ ಓದಿ: Pramod Mutalik: ಸಚಿವ ಸುನೀಲ್ ಕುಮಾರ್ ಸುತ್ತಮುತ್ತ ಇರುವವರೆಲ್ಲ ಕಾಂಗ್ರೆಸ್ಸಿನವರು: ಪ್ರಮೋದ್ ಮುತಾಲಿಕ್ ಕಿಡಿ


ಅಣ್ಣಾಮಲೈ, ತೇಜಸ್ವಿ ಸೂರ್ಯ ಭಾಗಿ


ಇನ್ನು ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಬೈಕ್‌ ಜಾಥಾದಲ್ಲಿ ಸಚಿವ ವಿ ಸುನೀಲ್ ಕುಮಾರ್‌ ಮಾತ್ರವಲ್ಲದೇ, ಬಿಜೆಪಿಯ ರಾಜ್ಯ ಸಹ ಸಂಚಾಲಕ ಅಣ್ಣಾಮಲೈ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಸಹ ಪಾಲ್ಗೊಂಡಿದ್ದರು. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಹುತೇಕರು ಹೆಲ್ಮೆಟ್ ಧರಿಸದೆ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


ಮುಸ್ಲಿಂ ಮಾಲಕತ್ವದ ಬೈಕ್‌ನಲ್ಲಿ ಚಲಿಸಿದ್ದ ಸುನೀಲ್ ಕುಮಾರ್!


ಇನ್ನು ಈ ವಿಜಯ ಸಂಕಲ್ಪ ಬೈಕ್‌ ಜಾಥಾದಲ್ಲಿ ಸಚಿವ ವಿ ಸುನೀಲ್ ಕುಮಾರ್‌ ಭಾಗವಹಿಸಿದ್ದು ಮಾತ್ರವಲ್ಲದೇ ಅವರು ಚಲಾವಣೆ ನಡೆಸಿದ ಬೈಕ್ ಮುಸ್ಲಿಂ ಮಾಲಕತ್ವದ್ದು ಎಂದು ತಿಳಿದು ಬಂದಿದೆ. ಕೆ ಅಮೀದ್ ಅಲಿ ಎಂಬ ವ್ಯಕ್ತಿಗೆ ಸೇರಿದ್ದ ಬುಲೆಟ್‌ ಇದಾಗಿದ್ದು, ಅದೇ ಬೈಕ್‌ನ್ನು ಸಚಿವ ಸುನೀಲ್ ಕುಮಾರ್ ಅವರು ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಚಿವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಸಚಿವ ಸುನೀಲ್ ಕುಮಾರ್ ನಡೆಯ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡುತ್ತಿದ್ದು, ಮುಸ್ಲಿಮರ ಜೊತೆ ವ್ಯವಹಾರ ಮಾಡಬಾರದು, ಜಾತ್ರೆಗಳಲ್ಲಿ ಅಂಗಡಿ ಹಾಕಲು ಅವಕಾಶ ಕೊಡಬಾರದು ಎಂದೆಲ್ಲ ಕಾರ್ಯಕರ್ತರಿಗೆ ಹೇಳುತ್ತೀರಿ. ಆದರೆ ನೀವು ಮಾತ್ರ ಮುಸ್ಲಿಮರ ಜೊತೆ ಸಂಬಂಧ ಇಟ್ಟುಕೊಳ್ಳುತ್ತೀರಿ. ಮುಸ್ಲಿಮರ ಬೈಕ್ ಉಪಯೋಗಿಸಿದ್ದು ತಪ್ಪಲ್ಲ, ಆದರೆ ನೀವು ಹೇಳೋದೊಂದು ಮಾಡೋದೊಂದು ಎಂದು ಟ್ರೋಲಿಗರು ಕಿಚಾಯಿಸಿದ್ದಾರೆ.


ಇದನ್ನೂ ಓದಿ: Pramod Muthalik: ಡೋಂಗಿ ಹಿಂದುತ್ವ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕಾರ್ಕಳಕ್ಕೆ ಬಂದಿದ್ದೇನೆ: ಮುತಾಲಿಕ್


ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಕುಮಾರ್ ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿರುವ ಫೋಟೋವನ್ನು ವೈರಲ್ ಮಾಡಲಾಗಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಒಂದಷ್ಟು ಜನ ‘ಉಡುಪಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನಗಳಿಗೆ ಹೆಲ್ಮೆಟ್ ನಿಷೇಧಿಸಲಾಗಿದೆಯಾ?’ ಎಂದು ಪ್ರಶ್ನಿಸಿದ್ರೆ ಇನ್ನೂ ಕೆಲವರು, ಬೊಮ್ಮಾಯಿ ಸರ್ಕಾರ ಹೆಲ್ಮೆಟ್ ನಿಷೇದ ಮಾಡಿದೆ, ಸರ್ಕಾರಿ ಆಸ್ಪತ್ರೆಯಲ್ಲಿ ನ್ಯೂರೋ ಸರ್ಜರಿ ವಿಭಾಗ ಅಗತ್ಯವಿಲ್ಲ, ಪರಶುರಾಮನ ಕ್ಷೇತ್ರದಲ್ಲಿ ಅಪಘಾತಗಳೇ ಆಗುವುದಿಲ್ಲವೇ? ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ.


ಮುಸ್ಲಿಂ ಪೇಜ್‌ಗಳಲ್ಲೂ ಸುನೀಲ್‌ ಕುಮಾರ್‌ದೇ ಹವಾ!


ಇನ್ನು ವಿಜಯ ಸಂಕಲ್ಪ ಬೈಕ್‌ ಜಾಥಾದಲ್ಲಿ ಸಚಿವ ವಿ ಸುನೀಲ್ ಕುಮಾರ್‌ ಬಳಸಿದ್ದ ಬೈಕ್ ಮುಸ್ಲಿಂ ಮಾಲಕರದ್ದು ಎಂದು ಸುದ್ದಿಯಾಗುತ್ತಿದ್ದಂತೆ ಮುಸ್ಲಿಂ ಪೇಜ್‌ಗಳಲ್ಲೂ ಕೂಡ ಫೋಟೋ ಹಾಕಿ ಟ್ರೋಲ್ ಮಾಡಲಾಗಿದ್ದು, ನಮ್ಮ ಪ್ರೀತಿಯ ಸುನಿಲ್ ಕುಮಾರ್ ಅವರು ಮುಸಲ್ಮಾನರ ಬೈಕ್ ಚಲಾಯಿಸಿ ನಮ್ಮೊಂದಿಗೆ ಉತ್ತಮ ಭಾಂದವ್ಯ ಇಟ್ಟುಕೊಂಡಿದ್ದಾರೆ’ ಎಂದು ಲೇವಡಿ ಮಾಡಲಾಗಿದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು