ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದ 500 ಕೋಟಿ ಭ್ರಷ್ಟಾಚಾರ: ಸಚಿವ ಸುಧಾಕರ್ ಹೊಸ ಬಾಂಬ್

ಕಳೆದ ಕೆಲ ತಿಂಗಳಿಂದ ಮಾಜಿ ಸ್ಪೀಕರ್ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸಿತ್ತಿರುವ ಆರೋಗ್ಯ ಸಚಿವ ಸುಧಾಕರ್, ರಮೇಶ್ ಕುಮಾರ್ ವರ್ತನೆ ಚುನಾವಣೆ ಸಮಯದಲ್ಲಿ ಬದಲಾಗುತ್ತದೆ, ಉಳಿದ ಸಮಯದಲ್ಲಿ ನೀತಿ ಪಾಠ ಹೇಳುತ್ತಾರೆ ಅವರ ಮೈಮೇಲೆ ಕಾವಿ ಇಲ್ಲ ಆದರೂ ಅವರು ಸ್ವಾಮಿಗಳಂತೆ ವರ್ತಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಕೋಲಾರದಲ್ಲಿ ಬಿಜೆಪಿ ಸುದ್ದಿಗೋಷ್ಠಿ

ಕೋಲಾರದಲ್ಲಿ ಬಿಜೆಪಿ ಸುದ್ದಿಗೋಷ್ಠಿ

  • Share this:
ವಿಧಾನ ಪರಿಷತ್ ಚುನಾವಣೆ (MLC Election)  ಹಿನ್ನೆಲೆ  ಕೋಲಾರ ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ ಅವರ ಗೆಲುವಿಗಾಗಿ ಬಿಜೆಪಿ ನಾಯಕರು (BJP Campaign) ತಮ್ಮ ಕಸರತ್ತು  ಮುಂದುವರೆಸಿದ್ದಾರೆ,. ಕೋಲಾರ ಪತ್ರಕರ್ತರ ಭವನದಲ್ಲಿ  ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ನಾಯಕರ ದಂಡು,  ವಿಪಕ್ಷಗಳ ಮೇಲೆ ಮುಗಿಬಿದ್ದರು,  ಸಚಿವರಾದ ಸುಧಾಕರ್, ಮುನಿರತ್ನ, ಸಂಸದ ಮುನಿಸ್ವಾಮಿ, ಅಭ್ಯರ್ಥಿ ವೇಣುಗೋಪಾಲ, ಮಾಜಿ ಶಾಸಲ ವೈ ಸಂಪಂಗಿ, ಮಾಜಿ ಸಚಿವ ವರ್ತೂರು ಪ್ರಕಾಶ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು, ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್ (Minister K Sudhakar), ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.

ದೇಶದಲ್ಲಿ  ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಮರ್ಥ ಆಡಳಿತದಿಂದ ಇಂದು ಕೋವಿಡ್ ಪರಿಸ್ಥಿತಿಯನ್ನ ಎದುರಿಸಿದ್ದೇವೆ. ಪ್ರಪಂಚದಲ್ಲೆ ಕೋವಿಡ್ ಎದುರಿಸುವುದರಲ್ಲಿ ಭಾರತ ದೇಶ ಮಾದರಿಯಾಗಿದೆ. ದೇಶದಲ್ಲಿ ಕರ್ನಾಟಕ ರಾಜ್ಯವೂ ಕೋವಿಡ್ ನಿಗ್ರಹಣೆ ಮಾಡುವುದರಲ್ಲಿ ಮಾದರಿಯಾಗಿದೆ. ಇದು ಭಾರತೀಯ ಜನತಾ ಪಾರ್ಟಿಯ ಸಾಧನೆ.

ಕೋಲಾರ, ಚಿಕ್ಕಬಳ್ಳಾಪುರಕ್ಕೆ 5 ಟಿಎಂಸಿ ಕುಡಿಯುವ ನೀರು

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರು ಹರಿಸುವ ಉದ್ದೇಶವನ್ನ ರಾಜ್ಯ ಸರ್ಕಾರ ಹೊಂದಿದೆ. ಕೋಲಾರ ಜಿಲ್ಲೆಯ  ಆಂಧ್ರದ ಗಡಿಯಲ್ಲಿ  ಗೊದಾವರಿ ಹಾಗು ಕೃಷ್ಣಾ ನದಿ ನಾಲೆಯಿಂದ ಜಿಲ್ಲೆಗಳಿಗೆ ಸರ್ಕಾರ ನೀರು ಹರಿಸುತ್ತಿದೆ.  ಅದರಲ್ಲಿನ 5 ಟಿಎಂಸಿ ಕುಡಿಯುವ ನೀರನ್ನ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ಬಗ್ಗೆ ಆಂದ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಜೊತೆಗೆ ಮಾತುಕತೆ ಆಗಿದೆ.

ಇದನ್ನೂ ಓದಿ:  ಅನಂತಕುಮಾರ್ ಹೆಗಡೆಯನ್ನ ಜನ ಐದು ಬಾರಿ ಹೇಗೆ ಆರಿಸಿದ್ರೋ: ಶಾಸಕಿ ಅಂಜಲಿ ಟೀಕೆ

ಇನ್ನೊಂದು ತಿಂಗಳಲ್ಲಿ ಈ ಬಗ್ಗೆ ಅಧಿಕೃತ ಸಭೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಆಂಧ್ರ ಸಿಎಂ  ಜೊತೆಗೆ ನಡೆಸಲಿದ್ದಾರೆ ಎಂದು ತಿಳಿಸಿದರು,

ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರು ಮೀಟಿಂಗ್ ನಡೆಸೋಕು ಅಧಿಕಾರ ಇಲ್ಲ - ಸಚಿವ ಮುನಿರತ್ನ

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದರು, ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಸಚಿವ ಮುನಿರತ್ನ ಮೇಲೆ ಕೇಳಿಬಂದಿದೆ. ಕೋಲಾರದಲ್ಲಿ ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿ ಆದರು ಸಚಿವ ಮುನಿರತ್ನ ಜಿಲ್ಲೆಯ ಕಡೆಗೆ ತಿರುಗಿ ನೋಡಿಲ್ಲ,  ಈ ಬಗ್ಗೆ ಉತ್ತರ ನೀಡಿದ ಸಚಿವರು, ಬೆಳೆಹಾನಿ ಆದಾಗ ನೀತಿ ಸಂಹಿತೆ ಜಾರಿಯಲ್ಲಿತ್ತು, ಇನ್ನು ಕೋವಿಡ್ ಸಂಧರ್ಭವನ್ನು ಎದುರಿಸಲು ಮಾತ್ರ ಕೋಲಾರ ಜಿಲ್ಲಾ ಉಸ್ತುವಾರಿ ನೀಡಲಾಗಿದೆ,

ನನಗೆ ಒಂದು ಮೀಟಿಂಗ್ ಕರೆಯೋಕು ಅಧಿಕಾರವಿಲ್ಲ ಎಂದು  ಉಸ್ತುವಾರಿ ಸಚಿವ ಮುನಿರತ್ನ ತಮ್ಮ ಅಸಹಾಯಕತೆಯನ್ನ ವ್ಯಕ್ತಪಡಿಸಿದರು,  ರಾಜ್ಯದಲ್ಲಿ ಅಧಿಕೃತವಾಗಿ ಯಾರಿಗೂ, ಯಾವ ಜಿಲ್ಲೆಗೂ ಉಸ್ತುವಾರಿಯನ್ನ ನೇಮಿಸಿಲ್ಲ. ಆದ್ರೆ ಇದು ಸರ್ಕಾರದ ವೈಫಲ್ಯ ಅಲ್ಲವೆಂದು ಸಚಿವರು, ಸಿಎಂ ಬಸವರಾಜ ಬೊಮ್ಮಾಯಿಯನ್ನ ಸಮರ್ಥನೆ ಮಾಡಿಕೊಂಡರು‌.

ಇದನ್ನೂ ಓದಿ:  ಅಯ್ಯೋ ದೇವರೇ.. ಡಿಕೆ ಶಿವಕುಮಾರ್ BJPಗೆ ಬಂದರೆ ನಾವ್ಯಾರು ಪಕ್ಷದಲ್ಲಿ ಇರೋಲ್ಲ: ಸಚಿವ ಈಶ್ವರಪ್ಪ

ರಮೇಶ್ ಕುಮಾರ್ ಅವಧಿಯಲ್ಲಿ 500 ಕೋಟಿ ವ್ಯವಹಾರ ಆಗಿದೆ

ಇಷ್ಟುದಿನ ರಾಜಕೀಯವಾಗಿ ಮಾಜಿ ಸ್ಪೀಕರ್ ರ‌ಮೇಶ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದ ಆರೋಗ್ಯ ಸಚಿವ ಸುಧಾಕರ್, ಇದೀಗ ರಮೇಶ್ ಕುಮಾರ್ ಮೇಲೆ ಅವ್ಯವಹಾರದ ಆರೊಪವನ್ನು  ಮಾಡಿದ್ದಾರೆ, " ಕೆಲವರು ಆಗಾಗ್ಗ ನೀತಿ ಪಾಠವನ್ನ ಹೇಳುತ್ತಾರೆ,  ಕಾವಿ ಧರಿಸಿಲ್ಲ  ಅಷ್ಟೆ ಎಂದು ರಮೇಶ್ ಕುಮಾರ್ ರನ್ನ ಸುಧಾಕರ್ ಕೆಣಕಿದರು.

ರಮೇಶ್ ಕುಮಾರ್ ಈ ಹಿಂದೆ  ಚುನಾವಣೆಗಳಲ್ಲಿ  ಬೇರೆ ಬೇರೆ ಕಡೆ ಬೆಂಬಲ ನೀಡ್ತಾರೆ. ನಾವು ನುಡಿದಿದ್ದನ್ನೆ ಮಾಡುತ್ತೀವಿ, ನಾನು ಆರೊಗ್ಯ ಸಚಿವನಾಗಿದ್ದ ವೇಳೆ ಯಾವುದೇ ಅವ್ಯವಹಾರ ಆಗಿಲ್ಲ, ಒಂದೇ ಒಂದು ಪದವೂ ಸಿ,ಎ,ಜಿ ವರದಿಯಲ್ಲಿ ದಾಖಲಾಗಿಲ್ಲ,

ಹಿಂದೆ ರಮೇಶ್‍ಕುಮಾರ್ ಆರೋಗ್ಯ ಸಚಿವರಾಗಿದ್ದ ವೇಳೆ 500 ಕೋಟಿ ಅವ್ಯವಹಾರ ಆಗಿದೆ ಎಂದು ಸಿ.ಎ.ಜಿ ವರದಿಯಲ್ಲಿ ಉಲ್ಲೇಖಿಸಿಲಾಗಿದೆ,  ಆದರೆ ಪಿ,ಎ,ಸಿ ಕಮಿಟಿಯಲ್ಲಿ ಇದು ಚರ್ಚೆ ಆಗಿಲ್ಲ, ಆದರೆ ರಾಜಕೀಯ ದುರುದ್ದೇಶದಿಂದ ಪಿ,ಎ,ಸಿ ಕಮಿಟಿಯಲ್ಲಿ ನನ್ನ ಸಚಿವ ಅವಧಿಯ ಚರ್ಚೆ ಆಗಿದೆ.  ಇದಕ್ಕೆ ಬೇರೊಂದು ವೇದಿಕೆಯಲ್ಲಿ ಉತ್ತರ ನೀಡುವೆ ಎಂದರು.
Published by:Mahmadrafik K
First published: