HDK ಈ ರೀತಿ ಬಾಯಿಗೆ ಬಂದಂತೆ ಮಾತನಾಡಬಾರದು: ST Somashekhar ತಿರುಗೇಟು

ಯಾವೊಬ್ಬ RSS ನಾಯಕರು ಈ ಬಗ್ಗೆ ಚಿಂತನೆ ಮಾಡಲ್ಲ. ಕುಮಾರಸ್ವಾಮಿ ಅವರು ಏನೇ ಮಾತನಾಡಿದ್ರೂ ಯೋಚನೆ ಮಾಡಿ ಮಾತಾಡಬೇಕು ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ಎಸ್ ಟಿ ಸೋಮಶೇಖರ್

ಎಸ್ ಟಿ ಸೋಮಶೇಖರ್

  • Share this:
RSSಗೆ ಬಿಜೆಪಿ ನಾಯಕರು (BJP Leaders) ಪರ್ಸೆಂಟೇಜ್ ಕೊಡಬೇಕು ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy) ಅವರ ಹೇಳಿಕೆಗೆ ದಾವಣಗೆರೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar) ತಿರುಗೇಟು ನೀಡಿದರು. ಹೆಚ್ ಡಿ ಕುಮಾರಸ್ವಾಮಿ ಅವರು ಇತ್ತೀಚಿಗೆ ಹತಾಶೆರಾಗಿದ್ದಾರೆ. ಅವರು ಈ ರೀತಿ ಬಾಯಿಗೆ ಬಂದಂತೆ ಮಾತನಾಡಬಾರದು. ಕುಮಾರಸ್ವಾಮಿ ಒಬ್ಬ ಕಮಿಟ್ಮೆಂಟ್ ಇರುವ ರಾಜಕೀಯ ನಾಯಕರು. ಈ ರೀತಿ ಮಾತನಾಡಬಾರದು. ಏನಾದ್ರೂ ಸಲಹೆ ಇದ್ದರೆ ನೀಡಲಿ. ಆದರೆ ಈ ಮಟ್ಟದ ಕೀಳು ರಾಜಕಾರಣ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.

ಯಾವೊಬ್ಬ RSS ನಾಯಕರು ಈ ಬಗ್ಗೆ ಚಿಂತನೆ ಮಾಡಲ್ಲ. ಕುಮಾರಸ್ವಾಮಿ ಅವರು ಏನೇ ಮಾತನಾಡಿದ್ರೂ ಯೋಚನೆ ಮಾಡಿ ಮಾತಾಡಬೇಕು ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

3 ಲಕ್ಷ ಹೊಸಬರಿಗೆ ಸಾಲ

ರಾಜ್ಯದಲ್ಲಿ 33 ಲಕ್ಷ ರೈತರಿಗೆ ಸಾಲ ಕೊಡಬೇಕು ಅನ್ನೋ ಚಿಂತನೆ ಇದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆ. ಈಗಾಗಲೇ ಸಾಲ ಕೊಡೊದಕ್ಕೆ ಚಾಲನೆ ನೀಡಿದ್ದೇವೆ. 3 ಲಕ್ಷ ಹೊಸಬರಿಗೆ ಸಾಲ ಕೊಡಬೇಕು ತೀರ್ಮಾನ ಮಾಡಿದ್ದೇವೆ ಎಂಬ ಮಾಹಿತಿ ನೀಡಿದರು.

ಇದನ್ನೂ ಓದಿ:  Mandya Politics: ರಾಜಕಾರಣದಲ್ಲಿ ಮಗನಿಗೆ ಸ್ಟೂಲ್ ಹಿಡಿಯಲ್ಲ, ಕೆಲವರಿಂದ ಚೀಪ್ ಪಾಲಿಟಿಕ್ಸ್: ಸಂಸದೆ ಸುಮಲತಾ ಅಂಬರೀಶ್

ಈಗಾಗಲೇ ಎಲ್ಲ ಡಿಸಿಸಿ ಬ್ಯಾಂಕ್  ನಲ್ಲಿ ಚಾಲನೆ ನೀಡಲಾಗಿದೆ. ಡಿಸಿಸಿ ಅವರು ಹೇಳ್ತಾ ಇದ್ದರು ಯಶಸ್ವಿನಿ ಜಾರಿ ಮಾಡಿ ಅಂತ. ಈ ಬಗ್ಗೆ ಎಲ್ಲ ಪ್ರೊಸೆಸ್ ಮುಗಿದಿದೆ. ಅಕ್ಟೋಬರ್ 2 ರಂದು ಯಶಸ್ವಿನಿ ಜಾರಿ ಮಾಡಬೇಕು ಅನ್ನೋ ಚಿಂತನೆ ಇದೆ ಎಂದರು.

ಶ್ರೀರಂಗಪಟ್ಟಣದಲ್ಲಿ ಉರುಸು ಮಾಡಬಹುದು

ಇನ್ನೂ ಶ್ರೀರಂಗಪಟ್ಟಣದಲ್ಲಿ ಉರುಸು ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೈಸೂರಿನಲ್ಲಿ ಉರುಸು ನಡೆಸುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಶ್ರೀರಂಗಪಟ್ಟಣದಲ್ಲಿ ಉರುಸು ಮಾಡಬಹುದು. ನಿನ್ನೆ ನಾನು ಡಿಸಿ- ಪೊಲೀಸ್ ಕಮಿಷನರ್ ಸಭೆ ಮಾಡಿದ್ದೇವೆ. ಇದ್ಯಾವುದು ವಿಚಾರ ಗಮನಕ್ಕೆ ಬಂದಿಲ್ಲ. ಹಾಗೆನಾದ್ರೂ ಇದ್ರೆ ಅದನ್ನ ಅಲ್ಲಿನ ಕಮಿಷನರ್ ನೋಡಿಕೊಳ್ತಾರೆ ಎಂದು ಹೇಳಿದರು.

ಸಚಿವ ಬೈರತಿ ಬಸವರಾಜ್ ಹೇಳಿಕೆ

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬೈರತಿ ಬಸವರಾಜ್, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದರು. ಪರಮ ಪೂಜ್ಯರ ಜೊತೆ ಸಿಎಂ ಬಳಿ ನಾನು ಹೋಗಿದ್ದೆ. ಅದಕ್ಕೆ ಬೇರೆ ಆರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಹಿಂದಿನ ಅವಧಿಯಲ್ಲಿ ಕೂಡ ಅನೇಕ ತಪ್ಪು ಆಗಿವೆ. ಅದನ್ನು ಸರಿಪಡಿಸಿದ ಅದನ್ನು ವಿತರಣೆ ಮಾಡುವಂತಾಗಿದೆ. ಸಿಎಂ ಸಕಾರಾತ್ಮಕವಾಗಿ ಒಪ್ಪಿ ಮಾಡಿಕೊಡುವುದಾಗಿ ಹೇಳಿದ್ದಾರೆ.

ಪರಮ ಪೂಜ್ಯರು ಕೂಡ ಸಂತೋಷದಿಂದ ಒಪ್ಪಿದ್ದಾರ.  ಕಾಂಗ್ರೆಸ್ ನವರು ಪಠ್ಯ ಪುಸ್ತಕ ವಿಚಾರದಲ್ಲಿ ವೈಭವೀಕರಣ ಮಾಡುತ್ತಿದ್ದಾರೆ. ಅವರ ಅವಧಿಯಲ್ಲಿ ತಪ್ಪು ಆಗಿದೆ, ಅವರ ಬೆನ್ನನ್ನು ಕೂಡ ಅವರು ನೋಡಿಕೊಳ್ಳಬೇಕು. ಏನಾದ್ರು ತಪ್ಪು ಇದ್ದರೆ ಅದನ್ನು ಸರಿಪಡಿಸಲು ಸರ್ಕಾರ ಮುಕ್ತವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:  KM Shivalinge Gowda: ನನಗೆ ರಾಜಕೀಯವಾಗಿ ಶಕ್ತಿ ತುಂಬಿ ಅಂತೇಳಿ ದಳಪತಿಗಳಿಗೆ ಶಾಕ್ ಕೊಟ್ರು ಶಾಸಕ ಶಿವಲಿಂಗೇಗೌಡರು

ಕಾಂಗ್ರೆಸ್ ನಿಂದ ಬಿಜೆಪಿಗೆ ಬರ್ತಾರೆ

ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸ್ಪರ್ಧೆ ವಿಷಯಕ್ಕೆ ಕೇಳಿದ ಪ್ರಶ್ನೆಗೆ ಅವರನ್ನೇ ಕೇಳಿ ಎಂದು ಉತ್ತರಿಸಿದರು. ಮುಂದಿನ ಸಿಎಂ ಕುಮಾರಸ್ವಾಮಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರ ಪಕ್ಷಕ್ಕೆ ಸೇರಿದ ವಿಚಾರ ಯಾರನ್ನಾದರೂ ಸಿಎಂ ಮಾಡಿಕೊಳ್ಳಲಿ. ಕಾಂಗ್ರೆಸ್ ನಿಂದ ಬಿಜೆಪಿಗೆ ಬಹಳಷ್ಟು ಜನರ ಬರ್ತಾರೆ. ಅವರು ಯಾರು ಅನ್ನೋ ವಿಚಾರ ಮುಂದಿನ ದಿನಗಳಲ್ಲ ಬಹಿರಂಗವಾಗಲಿದೆ ಎಂದರು.
Published by:Mahmadrafik K
First published: