ತಮಾಷೆಗೆ ಹೇಳಿದ ಮಾತನ್ನು ನಾರಾಯಣ ಗೌಡರು ನಿಜ ಮಾಡಿದ್ರು: ಸಚಿವ ST Somashekhar

ಜೆಡಿಎಸ್‌‌ ನಾಯಕರು ನಾವು ಮಣ್ಣಿನ ಮಕ್ಕಳು. ಮಣ್ಣಿನ ಮಕ್ಕಳು ಅಂತಾರೆ ಎಂದು ನಾರಾಯಣಗೌಡ ಹೇಳಿದ್ದರು. ಆಗ ನೀನು ನಿಜವಾದ ಮಣ್ಣಿನ ಮಗ ಆಗಿದ್ರೆ ಸರ್ಕಾರ ತೆಗಿ ಎಂದು ಹೇಳಿದ್ದೆ. ತಮಾಷೆಗೆ ಹೇಳಿದ ಮಾತನ್ನು ನಾರಾಯಣಗೌಡರು ನಿಜ ಮಾಡಿದರು. 

ಎಸ್.ಟಿ.ಸೋಮಶೇಖರ್ ಮತ್ತು ನಾರಾಯಣ ಗೌಡ

ಎಸ್.ಟಿ.ಸೋಮಶೇಖರ್ ಮತ್ತು ನಾರಾಯಣ ಗೌಡ

  • Share this:
ಮಂಡ್ಯ: ನಾನು ಮಣ್ಣಿನ ಮಗ  ಅಂತಾ ಪದೇ ಪದೇ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಹೇಳಿಕೊಳ್ಳುತ್ತಾರೆ. ನೀವು ನಿಜವಾದ ಮಣ್ಣಿನ ಮಕ್ಕಳೇ ಆಗಿದ್ದರೆ ಸರ್ಕಾರದಲ್ಲಿ (Government) ಯಾವ ಖಾತೆ ಕೇಳಬೇಕಿತ್ತು? ಆದ್ರೆ ನೀವು ಕೇಳಿದ್ದು ಇಂಧನಮ ಲೋಕೋಪಯೋಗಿ, ಹಣಕಾಸು ಖಾತೆಗಳನ್ನು. ನೀವು ಮಣ್ಣಿನ ಮಕ್ಕಳು ಆಗಿದ್ದರೆ ಕೃಷಿ ಅಥವಾ ಸಹಕಾರ ಖಾತೆಗಳನ್ನು ಕೇಳ ಬೇಕಿತ್ತು. ಆದ್ರೆ ಮಣ್ಣಿನ ಮಕ್ಕಳು ಈ ಎರಡೂ ಖಾತೆಗಳನ್ನು ಕೇಳಲೇ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar) ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ನಡೆದ ಜನ ಸ್ವರಾಜ ಯಾತ್ರೆ (BJP  Jan Swaraj Yatre)ಯಲ್ಲಿ ಸಚಿವರು ಭಾಗಿಯಾಗಿದ್ದರು.

ಮಂಡ್ಯದಲ್ಲಿ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ಜೆಡಿಎಸ್‌‌ ನಾಯಕರು ನಾವು ಮಣ್ಣಿನ ಮಕ್ಕಳು. ಮಣ್ಣಿನ ಮಕ್ಕಳು ಅಂತಾರೆ ಎಂದು ನಾರಾಯಣಗೌಡ ಹೇಳಿದ್ದರು. ಆಗ ನೀನು ನಿಜವಾದ ಮಣ್ಣಿನ ಮಗ ಆಗಿದ್ರೆ ಸರ್ಕಾರ ತೆಗಿ ಎಂದು ಹೇಳಿದ್ದೆ. ತಮಾಷೆಗೆ ಹೇಳಿದ ಮಾತನ್ನು ನಾರಾಯಣಗೌಡರು ನಿಜ ಮಾಡಿದರು.

ಇದನ್ನೂ ಓದಿ:  ಮಳೆಯಿಂದ ಜನ ಸಂಕಷ್ಟದಲ್ಲಿದ್ದರೆ, BJPಯವರಿಗೆ ಪರಿಷತ್ ಚುನಾವಣೆಯದ್ದೇ ಚಿಂತೆ; HDK ಟೀಕೆ

ನಮಗಿಂತ ಮುಂಚೆ ಬಾಂಬೆಗೆ ಹೋಗಿ ಕುಳಿತಿದ್ದರು. ಬಾಂಬೆಯಲ್ಲಿ ನಾರಾಯಣಗೌಡ ನಮ್ಮನ್ನೆಲ್ಲಾ ಬಹಳ ಚೆನ್ನಾಗಿ ನೋಡಿಕೊಂಡರು. ಬೆಳಿಗ್ಗೆ ತಿಂಡಿ ಇಡ್ಲಿ ಕಾಲ್ ಸೂಪ್, ಮಧ್ಯಾಹ್ನ ಊಟ ಮುದ್ದೆ ತಲೆಮಾಂಸ ಕೊಡಿಸಿದ್ದರು. ನಾವು ಬಾಂಬೆಯಲ್ಲಿ ಇರೋದೆ ಮರೆತು ಬಿಟ್ಟಿದ್ದೇವು ಎಂದು ಸಮ್ಮಿಶ್ರ ಸರ್ಕಾರ ಉರುಳಿಸಿದ ಘಟನೆಯನ್ನು ಮೆಲುಕು ಹಾಕಿದರು.

ಎಸ್​ಎಂ ಕೃಷ್ಣ ವಿರುದ್ಧ ಎಸ್​ಟಿ ಸೋಮಶೇಖರ್ ಅಸಮಾಧಾನ

ಹಾಲಿ MLC ಅಪ್ಪಾಜಿ ಗೌಡ ಯಾವೊಬ್ಬ ಗ್ರಾ.ಪಂ ಸದಸ್ಯರ ಮನೆಗೆ ತೆರಳಿ ಒಂದು ಸ್ವೀಟ್ ಬಾಕ್ಸ್ ಕೂಡ ನೀಡಿಲ್ಲ. ಎಲ್ಲಿ ಜಮೀನಿದೆ, ಎಲ್ಲಿ ಸೈಟ್ ಮಾಡಬಹುದು ಎಂಬ ಬಗ್ಗೆ ಗಮನ ಕೊಟ್ಟವನು ಅಪ್ಪಾಜಿಗೌಡ. ಜನಸೇವೆ ಮಾಡುವ ಭಾವನೆ ಆತನಲ್ಲಿ ಇಲ್ಲ. ಇನ್ನು ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ನಮ್ಮ ಪಕ್ಷದ ಹಿರಿಯರು ಕರೆ ಮಾಡಿ ನಮ್ಮ ಹುಡುಗನನ್ನು ನಿಮ್ಮ ಇಲಾಖೆಗೆ ತೆಗೆದುಕೊಳ್ಳಿ ಎಂದ್ರು.

ಇದನ್ನೂ ಓದಿ:  ಪಂಜಾಬ್ ಸಿಧು, ಕರ್ನಾಟಕ ಸಿದ್ದು ಇಬ್ಬರಿಂದಲೂ ಕಾಂಗ್ರೆಸ್ ಗೆ ನಷ್ಟ: ಕೋಲಾರದಲ್ಲಿ ಮಾಜಿ ಸಿಎಂ Jagadish Shettar

ಅವರ ಮಾತಿಗೆ ಗೌರವ ಕೊಟ್ಟು ಆತನನ್ನು ವಿಶೇಷ ಅಧಿಕಾರಿ ಮಾಡಿಕೊಂಡೆ. ವಾರದ ಹಿಂದೆ ನಮ್ಮ ಮನೆಗೆ ಬಂದವನು MLC ಟಿಕೆಟ್ ಆಕಾಂಕ್ಷಿ ಎಂದು ಹೇಳಿದ. ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದೇನೆ ಎಂದು ಹೇಳಿದ್ದ. ತಕ್ಷಣ ಆತನನ್ನು ನನ್ನ ವಿಶೇಷ ಕರ್ತವ್ಯಾಧಿಕಾರ ಸ್ಥಾನದಿಂದ ತೆಗೆದುಹಾಕಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಸ್‌ಎಂ ಕೃಷ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಬಗ್ಗೆ ಅಸಮಾಧಾನ ಹೊರಹಾಕಿದರು.

ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆ ಇಲ್ಲದ ವ್ಯಕ್ತಿ ನಂಬಬೇಡಿ ಎಂದು ಶೋಭಾ ಕರಂದ್ಲಾಜೆ

ಜನ ಸ್ವರಾಜ್ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡು, ರಾಜಕಾರಣದಲ್ಲಿ ವ್ಯಕ್ತಿ ಅಥವಾ ಪಕ್ಷ ನಿಷ್ಠೆ ಇರಬೇಕು. ಹೆಚ್ಚಿನವರಿಗೆ ಪಕ್ಷ ನಿಷ್ಠೆ, ಕೆಲವರಿಗೆ ವ್ಯಕ್ತಿ ನಿಷ್ಠೆ ಇರುತ್ತದೆ. ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಅವರನ್ನು ಕೇಳಬೇಕು. ಅವರಿಗೆ ಪಕ್ಷ ನಿಷ್ಠೆನೂ ಇಲ್ಲ, ವ್ಯಕ್ತಿ ನಿಷ್ಠೆಯೂ ಇಲ್ಲ. ಪಕ್ಷ ನಿಷ್ಠೆ ಇದ್ದಿದ್ರೆ ಕಾಂಗ್ರೆಸ್ ಬಿಟ್ಟು ಸೋಮಶೇಖರ್ ಬಳಿ ಬರುತ್ತಿರಲಿಲ್ಲ. ಇಲ್ಲ ವ್ಯಕ್ತಿ ನಿಷ್ಠೆ ಇದ್ದಿದ್ರೆ ಸೋಮಶೇಖರ್ ಬಿಟ್ಟು ಹೋಗ್ತಾ ಇರಲಿಲ್ಲ. ಎರಡು ಇಲ್ಲದ ವ್ಯಕ್ತಿಯನ್ನ ಮಂಡ್ಯದ ಜನ ನಂಬ್ತಾರಾ? ನಂಬಬಾರದು ಎನ್ನುವ ವಿನಂತಿ ನಿಮ್ಮಲ್ಲಿ ಮಾಡುತ್ತೇನೆ. ಲಾಭಕ್ಕಾಗಿ ಬರುವ ಅವಕಾಶವಾದಿಗಳನ್ನು ಮಂಡ್ಯದ ಜನ ಹತ್ತಿರ ಸೇರಿಸಬಾರದು ಎಂದು ಹೇಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ವಿರುದ್ಧ ಕಿಡಿಕಾರಿದರು.
Published by:Mahmadrafik K
First published: