ಚಿತ್ರದುರ್ಗ(ಮಾ.19): ಬೇಸಿಗೆ ಬಂತು ಅಂದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗೋದು ಗ್ಯಾರಂಟಿ. ಜನರಿಗೆ ಎದುರಾಗೋ ನೀರಿನ ಸಮಸ್ಯೆ ಬಗೆಹರಿಸೋಕೆ ವಾಣಿ ವಿಲಾಸ ಸಾಗರದ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಆ ನೀರು ಹರಿಸೋಕೆ ಜಿಲ್ಲಾ ಉಸ್ತುವಾರಿ ಸಚಿವ ಸಿಎಂ ಗೆ ಪತ್ರ ಬರೆದಿದ್ದಾರೆ. ಈಗ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ರೈತರ ನಡುವೆ ಒಳ ಜಗಳ ಶುರುವಾಗಿದೆ. ಬರದನಾಡು ಚಿತ್ರದುರ್ಗ ಜಿಲ್ಲೆ ಹಲವು ತಾಲ್ಲೂಕಿನ ಜನರಿಗೆ ಸದಾ ಜೀವನಾಡಿ ಹಿರಿಯೂರಿನ ವಾಣಿ ವಿಲಾಶ ಸಾಗರ ಜಲಾಶಯ. ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಬಾರಿ ವರ್ಷಧಾರೆಯಿಂದ ಡ್ಯಾಂಗೆ ಬಾರಿ ಪ್ರಮಾಣದ ನೀರು ಸಂಗ್ರಹವಾಗಿತ್ತು.
ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸಿದ್ದರಿಂದ ಜಲಾಶಯ ತುಂಬುವ ಹಂತ ತಲುಪಿತ್ತು. ಇದರಿಂದ ಜಿಲ್ಲೆಯ ಅನ್ನದಾತರು ಪುಲ್ ಖುಷ್ ಆಗಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ತರಕಾರಿ ಸೇರಿ ವಿವಿಧ ಬೆಳೆ ಬೆಳೆದಿದ್ದರು. ಆದರೆ ಬೇಸಿಗೆಯಲ್ಲಿ ಅಂತರ್ಜಲ ಕಡಿಮೆ ಆಗಿದ್ದರಿಂದ ಅಚ್ಚು ಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದ್ದರು.
ರೈತರ ಮನವಿಗೆ ಸ್ಪಂದಿಸಿದ್ದ ಜಿಲ್ಲಾಡಳಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆಗೊಳಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ ಚಿತ್ರದುರ್ಗ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕಿನ ವೇದಾವತಿ ನದಿ ಪಾತ್ರದ ರೈತರಿಗೆ ನೀರು ಹರಿಸುವಂತೆ ಸಿಎಂ ಗೆ ಮನವಿ ಮಾಡಿದ್ದರು.
Coronavirus: ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆಯ ಆತಂಕ; ಸರ್ಕಾರ ಎಡವಿದ್ದೆಲ್ಲಿ?
ಇದ್ರಿಂದ ಸಚಿವ ಬಿ.ಶ್ರೀರಾಮುಲು ವಿರುದ್ದ ಗರಂ ಆಗಿದ್ದ ಹಿರಿಯೂರು ಭಾಗದ ರೈತರು, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕಿಗೆ ನೀರು ಹರಿಸಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಅಲ್ಲದೇ ಜಲಾಶಯದ ಬಗ್ಗೆ ಉಸ್ತುವಾರಿ ಸಚಿವರಿಗೆ ಕಾಳಜಿ ಇಲ್ಲ, ಯಾವುದೇ ಕಾರಣಕ್ಕೂ ನೆರೆಯ ತಾಲ್ಲೂಕುಗಳಿಗೆ ನೀರು ಬಿಡಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಹಿರಿಯೂರು ರೈತ ಮುಖಂಡರ ಹೇಳಿಕೆ ಬೆನ್ನಲ್ಲೇ ಚಳ್ಳಕೆರೆ, ಮೊಳಕಾಲ್ಮೂರು ಭಾಗದ ರೈತರಲ್ಲಿ ಕೂಡ ಆಕ್ರೋಶ ಭುಗಿಲೆದ್ದಿದ್ದು, ರೈತ ಮುಖಂಡ ಕಸವನಹಳ್ಳಿ ರಮೇಶ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು. ಹಿರಿಯೂರಿನ ರೈತರ ಮುಖಂಡ ಕಸವನಹಳ್ಳಿ ರಮೇಶ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿ, ಚಿತ್ರದುರ್ಗ ಡಿಸಿ ಕವಿತಾ ಎಸ್.ಮನ್ನೀಕೇರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿವಿ ಸಾಗರ ಜಲಾಶಯ ಜಿಲ್ಲೆಯ ಜನರ ಸ್ವತ್ತು, ಭದ್ರಾ ಮೇಲ್ದಂಡೆ ನೀರಿಗಾಗಿ ಜಿಲ್ಲೆಯ ರೈತರೆಲ್ಲಾ ಹೋರಾಟ ಮಾಡಿದ್ದೇವೆ. ಇಂಥ ಗೂಂಡಾ ವರ್ತನೆ ತೋರುವವರ ವಿರುದ್ದ ಸರ್ಕಾರ ಶಿಸ್ತು ಕ್ರಮಕ್ಕೆ ಆಗ್ರಹ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ