ಗದಗ: ಅಗ್ನಿಪಥ ಯೋಜನೆ (Agnipath Scheme) ಜಾರಿಯಿಂದ ಕಾಂಗ್ರೆಸ್ ಗೆ (Congress) ಉರಿ ಬಿದ್ದಿದೆ ಎಂದು ಗದಗದಲ್ಲಿ ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು (Minister Sriramulu) ಕೆಂಡಾಮಂಡಲರಾಗಿದ್ದಾರೆ. ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿದೆ. ಅಗ್ನಿಪಥ ವಿಚಾರದಲ್ಲಿ ಬಹಳ ಜನ್ರು ರಾಜಕೀಯ ನಡೆಸಿದ್ದಾರೆ. ಇಸ್ರೇಲ್ ದೇಶ ಹೋಲಿಸಿ ನೋಡಿದ್ರೆ ಅಲ್ಲಿ ಪ್ರತಿಯೊಂದು ಮನೆಯಲ್ಲಿ ಸೇನೆಗೆ ಸೇರ್ತಾರೆ. ನಮ್ಮ ಪ್ರಧಾನಿಗಳು 18 ವರ್ಷದ ಯುವಕರಿಗೆ ಆಸಕ್ತಿ ಇದ್ರೆ, ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಮಾಡಬೇಕು ಅಂದ್ರೆ ಇವ್ರಿಗೆ ಯಾಕೆ ಇಷ್ಟೊಂದು ಉರಿ ಅಂತ ಗೊತ್ತಾಗುತ್ತಿಲ್ಲ ಅಂತ ಕಿಡಿಕಾರಿದರು. ಪ್ರತಿಯೊಬ್ಬರಿಗೂ ದೇಶದ ಮೇಲೆ ಪ್ರೀತಿ, ಅಭಿಮಾನ, ಗೌರವ ಇರಬೇಕು. ಅಗ್ನಿಪಥ ಯೋಜನೆ ಒಳ್ಳೆಯ ಕಾರ್ಯಕ್ರಮವಾಗಿದೆ. ದೇಶದ ಯುವಕರಲ್ಲಿ ದೇಶ ಪ್ರೇಮ ಮೂಡಿಸುವ ಕೆಲಸ ಮಾಡ್ತಾಯಿದ್ದಾರೆ ಸಹಿಸೋಕೆ ಆಗ್ತಾಯಿಲ್ಲ.ಯುವಕರಿಗೆ ದಿಕ್ಕು ತಪ್ಪಿಸುವ ಕೆಲಸ ಆಗ್ತಾಯಿದೆ. ಬೀದಿಗಿಳಿಸುವ ಕೆಲಸ ಮಾಡಲಾಗುತ್ತಿದೆ. ಸಾಕಷ್ಟು ಅನಕೂಲ ಈ ಯೋಜನೆಯಲ್ಲಿದೆ ಎಂದರು.
ದೇಶದಲ್ಲಿ ಭ್ರಷ್ಟಾಚಾರದ ದೊಡ್ಡ ಪಿತಾಮಹ ಕಾಂಗ್ರೆಸ್ ಪಕ್ಷ
ಇನ್ನು 40% ಕಮೀಷನ್ ನಲ್ಲಿ ಪ್ರಧಾನಿಗೂ ಪಾಲು ಕಾಂಗ್ರೆಸ್ ಆರೋಪ ವಿಚಾರಕ್ಕೆ ಮಾತನಾಡಿದ ರಾಮುಲು ಅವರು ದೇಶದಲ್ಲಿ ಭ್ರಷ್ಟಾಚಾರದ ದೊಡ್ಡ ಪಿತಾಮಹ ಅಂದ್ರೆ ಅದು ಕಾಂಗ್ರೆಸ್ ಪಕ್ಷ ಎಂದು ತಿರುಗೇಟು ನೀಡಿದ್ದಾರೆ. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ. ಬಿಜೆಪಿ ಸರ್ಕಾರ ಸಂಪೂರ್ಣ ಪಾರದರ್ಶಕ ಆಡಳಿತ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡು ಈ ರೀತಿ ಆರೋಪಮಾಡುತ್ತಿದೆ.
ಇದನ್ನೂ ಓದಿ: Agnipath: ಯುವಕ 21 ವರ್ಷಕ್ಕೆ ಮದುವೆಯಾಗಿ ಮಕ್ಕಳು ಮಾಡ್ತಾನಾ? ಕೆ ಎಸ್ ಈಶ್ವರಪ್ಪ
ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಆರೋಪ
ಇನ್ನು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಲಾಭಕ್ಕೆ ಆಗಮನ ಕಾಂಗ್ರೆಸ್ ಆರೋಪ ವಿಚಾರಕ್ಕೆ ಮಾತನಾಡಿದ ಅವರು ರಾಜ್ಯದಲ್ಲಿ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿ ಅದು ರಾಜ್ಯಕ್ಕೆ ಶಕ್ತಿ ತರುತ್ತದೆ. ಇಂಥ ವಿಚಾರದಲ್ಲಿ ಕಾಂಗ್ರೆಸ್ ಈ ರೀತಿಯ ಟೀಕೆ ಮಾಡುವ ಕೆಲಸ ನೋಡಿ ನೈತಿಕ ದಿವಾಳಿ ತೋರಿಸುತ್ತದೆ. ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಇಷ್ಟು ವರ್ಷ ಕೆಲಸ ಮಾಡಿಲ್ಲಾ. ಕಾಂಗ್ರೆಸ್ ನ ಸಾಕಷ್ಟು ಪ್ರಧಾನಿಗಳು ಇದ್ರೂ ರಾಜ್ಯದ ಬಗ್ಗೆ ಕೇಳಿಲ್ಲ. ಬೀದಿಗಿಳಿದು ರಂಪಾಟ ಮಾಡುವ ವಿಚಾರದಲ್ಲಿ ರಾಹುಲ್ ಗಾಂಧಿ ಹೋರಾಟವಾಗಿದೆ. ಕಾನೂನಿಗಿಂತ ರಾಹುಲ್ ಗಾಂಧಿ ದೊಡ್ಡವರಲ್ಲ. ತನಿಖೆ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಇಂಥವ್ರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಶ್ರೀರಾಮುಲು ತಿಳಿಸಿದ್ರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡ ಅನೀಲ ಮೆಣಸಿನಕಾಯಿ, ಬಿಜೆಪಿ ಮುಖಂಡ ಶಿವನಗೌಡ ಶಿವನಗೌಡರ ಹಾಗೂ ಬಿಜೆಪಿ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಅಗ್ನಿಪಥ್ ಹಿಂಸಾತ್ಮಕ ಹೋರಾಟ ಪ್ರತಿಪಕ್ಷದ ಪಿತೂರಿ
ಅಗ್ನಿಪಥ್ ಹಿಂಸಾತ್ಮಕ ಹೋರಾಟದ ಹಿಂದೆ ಪ್ರತಿಪಕ್ಷಗಳ ಪಿತೂರಿ ಇದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೆಲವರು ಈ ಯೋಜನೆ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅಂಥವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡ್ತೇವೆ. ಕೆಲವರು ಟೂಲ್ ಕಿಟ್ ಇತ್ಯಾದಿ ಪ್ರಚಾರ ಮಾಡಿ ಜಗತ್ತಿನ ವಿವಿಧೆಡೆ ಅಪ ಪ್ರಚಾರ ಮಾಡ್ತಿದಾರೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿಯೂ ಈ ವ್ಯವಸ್ಥೆ ಜಾರಿಯಲ್ಲಿದೆ. ಈ ಹಿಂದೆಯೂ ಈ ಬಗ್ಗೆ ಅನೇಕ ರೀತಿಯ ಅಧ್ಯಯನ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ