• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sriramulu: ರಾಜ್ಯದಲ್ಲಿ ವಿಕ್ರಮ ಬೇತಾಳ ಕಥೆಯಂತೆ ಕಾಂಗ್ರೆಸ್ ಪಕ್ಷದ ಸ್ಥಿತಿ ಆಗಿದೆ: ಶ್ರೀರಾಮುಲು ವ್ಯಂಗ್ಯ

Sriramulu: ರಾಜ್ಯದಲ್ಲಿ ವಿಕ್ರಮ ಬೇತಾಳ ಕಥೆಯಂತೆ ಕಾಂಗ್ರೆಸ್ ಪಕ್ಷದ ಸ್ಥಿತಿ ಆಗಿದೆ: ಶ್ರೀರಾಮುಲು ವ್ಯಂಗ್ಯ

ಶ್ರೀರಾಮುಲು

ಶ್ರೀರಾಮುಲು

ವಿಕ್ರಮನನ್ನು ಬೇತಾಳ ಕಾಡಿದಂತೆ ಕಾಂಗ್ರೆಸ್ ಕಾಡುತ್ತಿದೆ. ಕಾಂಗ್ರೆಸ್ ಪಾರ್ಟಿಯಲ್ಲಿ ವಿಕ್ರಮ್ ಬೇತಾಳದ ಸಾಕಷ್ಟು ಜನರು ಇದ್ದಾರೆ. ಅಧಿಕಾರದ ಆಸೆಯ ಕನಸು ಕಾಂಗ್ರೆಸ್ ಕಾಣುತ್ತಿದೆ ಎಂದು ಸಚಿವ ಬಿ ಶ್ರೀರಾಮುಲು ವ್ಯಂಗ್ಯವಾಡಿದರು.

  • Share this:

ಬಳ್ಳಾರಿ: ರಾಜ್ಯದಲ್ಲಿ ವಿಕ್ರಮ ಬೇತಾಳ (Vikarama Bethala Story) ಕಥೆಯಂತೆ ಕಾಂಗ್ರೆಸ್ ಪಕ್ಷದ (Congress) ಸ್ಥಿತಿ ಆಗಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು (Sriramulu) ವ್ಯಂಗ್ಯವಾಡಿದ್ದಾರೆ. ಬಳ್ಳಾರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ರಮನನ್ನು ಬೇತಾಳ ಕಾಡಿದಂತೆ ಕಾಂಗ್ರೆಸ್ ಕಾಡುತ್ತಿದೆ. ಕಾಂಗ್ರೆಸ್ ಪಾರ್ಟಿಯಲ್ಲಿ ವಿಕ್ರಮ್ ಬೇತಾಳದ ಸಾಕಷ್ಟು ಜನರು ಇದ್ದಾರೆ. ಅಧಿಕಾರದ ಆಸೆಯ ಕನಸು ಕಾಂಗ್ರೆಸ್ ಕಾಣುತ್ತಿದೆ ಎಂದು ಹೇಳಿದರು.


ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಕಡಿದು ಕಟ್ಟಿ ಹಾಕಿದ್ದಾರೆ ಅನ್ನೋದು ಗೊತ್ತಿಲ್ಲ ಎಂದ ಸಚಿವ ಶ್ರೀರಾಮುಲು, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಅವರನ್ನು ಬ್ರಾಹ್ಮಣ ಅನ್ನುವ ಕಾರಣಕ್ಕೆ ಸಿಎಂ ಮಾಡುತ್ತಾರೆ ಎಂಬ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಯ ವಿರುದ್ಧವೂ ಅಸಮಾಧಾನದ ಅಭಿಪ್ರಾಯ ವ್ಯಕ್ತಪಡಿಸಿದರು.


ಇದನ್ನೂ ಓದಿ: ಕೊಡವರ ಮನವಿಗೆ ಸ್ಪಂದಿಸಿದ ಆರೋಗ್ಯ ಸಚಿವರು; ಕೊಡಗಿನಲ್ಲಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ಕುರಿತ ಚರ್ಚೆಗೆ ಮುಂದಾದ ಶ್ರೀರಾಮುಲು


ರಾಜಕಾರಣ ಮಾಡೋದು ಸರಿಯಲ್ಲ


ಬಳ್ಳಾರಿ ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಶಾಲೆ ನಿರ್ಮಾಣಕ್ಕೆ ಮಾಜಿ ಸಚಿವ ದಿವಾಕರ ಬಾಬು ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಶಿಥಿಲಗೊಂಡ ಶ್ರೀರಾಂಪುರ ಕಾಲೋನಿ ಶಾಲೆಗೆ ಡಿಎಂಎಫ್‌ನಿಂದ 3.60 ಕೋಟಿ ಅನುದಾನ ನೀಡಲಾಗಿದೆ. ಇದು ಎಸ್ ಸಿ, ಎಸ್ ಟಿ ಜನಾಂಗದವರಿಗೆ ಮಾದರಿ ಶಾಲೆ ನಿರ್ಮಾಣ ಉದ್ದೇಶ ಹೊಂದಿದೆ. ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ್ದೇವೆ, ಮೈದಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಮಾಜಿ ಸಚಿವರು ಕೆಲಸ ನಿಲ್ಲಿಸಿ, ರಾಜಕಾರಣ ಮಾಡುವುದು ಸರಿಯಲ್ಲ. ಶಾಲೆಯಲ್ಲಿ ಎಲೆಕ್ಷನ್ ಬೂತ್ ಆಗಿರುವುದರಿಂದ ಚುನಾವಣೆ ನಂತರ ಹಳೆ ಕಟ್ಟಡ ತೆರವು ಗೊಳಿಸಲಾಗುತ್ತದೆ ಎಂದರು.


ಹಣ ಹಿಂದಕ್ಕೆ ಹೋಗುತ್ತೆ


ಇನ್ನು, ಮಾಜಿ ಸಚಿವ ದಿವಾಕರ ಬಾಬು ನಡೆಯಿಂದ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದ ಶ್ರೀರಾಮುಲು, ಶಾಲೆ ನಿಲ್ಲಿಸಬೇಡಿ, ಶಾಲೆಯ ಕಾಮಗಾರಿ‌ ಆರಂಭಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರಲ್ಲದೇ, ಕಾಮಗಾರಿ ಆರಂಭಿಸದಿದ್ದರೆ ಹಣ ಹಿಂದಕ್ಕೆ ಹೋಗುತ್ತೆ. ಮಾಜಿ ಸಚಿವರೊಂದಿಗೆ ಜಗಳ ಮಾಡಲು ಹೋಗೋದಿಲ್ಲ, ಆದರೆ ಮನವಿ ಮಾಡುತ್ತೇನೆ. ಧರ್ಮ ಮತ್ತು ಸತ್ಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.


ಇದನ್ನೂ ಓದಿ: Top-5 News: ಶ್ರೀರಾಮುಲು ಒಬ್ಬ ಪೆದ್ದ ಎಂದ್ರು ಸಿದ್ದರಾಮಯ್ಯ, ಮುರುಘಾಮಠದ ಅಧಿಕಾರ ಹಸ್ತಾಂತರ; ಇಂದಿನ ಟಾಪ್ ನ್ಯೂಸ್ ಇಲ್ಲಿವೆ


ಪಕ್ಷ ತೀರ್ಮಾನ ಮಾಡಲಿ


ಇದೇ ವೇಳೆ, ಮಾಜಿ ಸಚಿವ ರೆಡ್ಡಿ ವಿರುದ್ದ ಗಂಗಾವತಿಯಲ್ಲಿ ಸರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ರೆಡ್ಡಿ ವಿರುದ್ದ ಗಂಗಾವತಿಯಲ್ಲಿ ಸ್ಪರ್ಧೆ ಮಾಡೋದು ತೀರಾ ಬೇಗ ಆಯ್ತು, ಪಕ್ಷ ತೀರ್ಮಾನ ಮಾಡಿದ ಮೇಲೆ ನಂತರ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.


ಇನ್ನು, ಜಿಲ್ಲೆಯ ಮೈನಿಂಗ್ ಸ್ಕೂಲ್ ಭೂಮಿ ಪೂಜೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡುತ್ತೇವೆ ಎಂದ ಶ್ರೀರಾಮುಲು, ಪ್ರಾದೇಶಿಕ ಪಕ್ಷದಿಂದ ರಾಗಿ ಕಾಳಷ್ಟು ಬಿಜೆಪಿಗೆ ತೊಂದರೆಯಾಗಲ್ಲ. ಸೋಮಶೇಖರ ರೆಡ್ಡಿ ಸ್ಪರ್ಧೆ 100% ಗ್ಯಾರಂಟಿ. ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಧೂಳಿ ಪಟ ಆಗುತ್ತೆ ಎಂದು ಭವಿಷ್ಯ ನುಡಿದರು.


ಇದನ್ನೂ ಓದಿ: Assembly Election: ಬಳ್ಳಾರಿಯಲ್ಲಿ ಸಹೋದರನ ವಿರುದ್ಧವೇ ತೊಡೆ ತಟ್ಟಿದ ಗಣಿಧಣಿ! ಸೋಮಶೇಖರ್ ರೆಡ್ಡಿ ವಿರುದ್ಧ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಕಣಕ್ಕೆ!

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು