Chamarajanagara: ಸಿದ್ದರಾಮಯ್ಯ ಕೇವಲ ಉತ್ಸವ ಮೂರ್ತಿ ಎಂದ ಸಚಿವ ಶ್ರೀರಾಮುಲು

ಸಿದ್ದರಾಮೋತ್ಸವದ ಬಗ್ಗೆ ಪ್ರಸ್ತಾಪಿಸಿದ ಸಚಿವ ಶ್ರೀರಾಮುಲು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಉತ್ಸವ ಮೂರ್ತಿಗೆ ಹೋಲಿಸಿ  ವ್ಯಂಗ್ಯ ಮಾಡಿದರು.  ಸಿದ್ದರಾಮೋತ್ಸವದ ನಂತರ ಸಿದ್ದರಾಮಯ್ಯ ಕೇವಲ ಉತ್ಸವಮೂರ್ತಿಯಾಗಿಯೇ ಉಳಿಯಬೇಕಾಗುತ್ತೆ ಎಂದಿದ್ದಾರೆ.

ಬಿ. ಶ್ರೀರಾಮುಲು

ಬಿ. ಶ್ರೀರಾಮುಲು

  • Share this:
ಚಾಮರಾಜನಗರ(ಜು.12): ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೀಸಲಾತಿ (Reservation) ಹೆಚ್ಚಳ ಮಾಡುವ ಬಗ್ಗೆ ತಾವು ಕೊಟ್ಟ ಭರವಸೆ (Promise) ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಆಗುವುದಾಗಿ ಸಾರಿಗೆ ಸಚಿವ ಶ್ರೀರಾಮುಲು  (B. Sriramulu) ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮೋತ್ಸವದ ಬಗ್ಗೆ ಪ್ರಸ್ತಾಪಿಸಿದ ಸಚಿವ ಶ್ರೀರಾಮುಲು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಉತ್ಸವ ಮೂರ್ತಿಗೆ ಹೋಲಿಸಿ  ವ್ಯಂಗ್ಯ ಮಾಡಿದರು.  ಚಾಮರಾಜನಗರ (Chamarajanagara) ಜಿಲ್ಲೆಯ  ಕೊಳ್ಳೇಗಾಲದಲ್ಲಿ  ಮಾತನಾಡಿದ  ಅವರು ಮೀಸಲಾತಿ ಹೆಚ್ಚಳ ಮಾಡುವ ಪ್ರಕ್ರಿಯೆ   ಕಾನೂನು ತೊಡಕು ಹಾಗು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ, ಇದೆಲ್ಲವನ್ನೂ ಸರಿಪಡಿಸಿ ಆದಷ್ಟು ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುತ್ತೇವೆ ಎಂದರು.

ಎಸ್ಟಿ ಸಮುದಾಯಕ್ಕೆ ಹಾಲಿ ಇರುವ 3% ಮೀಸಲಾತಿಯನ್ನು 7.5% ಗೆ ಹಾಗು ಎಸ್ಸಿ ಸಮುದಾಯಕ್ಕೆ ಇರುವ  15% ಮೀಸಲಾತಿಯನ್ನು 17% ಗೆ ಹೆಚ್ಚಳ ಮಾಡಬೇಕೆಂಬುದು ಬಹುದಿನದ ಬೇಡಿಕೆಯಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡಲು ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಶಿಫಾರಸ್ಸು ಮಾಡಿದೆ.

ಕೊಟ್ಟ ಮಾತು ಉಳಿಸಿಕೊಳ್ತೇವೆ ಎಂದ ಸಚಿವ ರಾಮುಲು

ನಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಎಸ್ಸಿಗೆ 17%, ಎಸ್ಟಿಗೆ 7.5℅ ಕೊಡ್ತಿವಿ ಅಂತ ಭರವಸೆ ಕೊಟ್ಟಿದ್ದು ನಿಜ ರಕ್ತದಲ್ಲಿ ಬರೆದುಕೊಡ್ತೇನೆ ಎಂದು  ಆಶ್ವಾಸನೆ ನೀಡಿದ್ದೂ ಸತ್ಯ,  ಆದರೆ ಕಾನೂನು ತೊಡಕಿನಿಂದ ವಿಳಂಬವಾಗಿದೆ, ಈಗ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದ ಸಮಿತಿಯ ವರದಿಯು ಸಹ ಸರ್ಕಾರಕ್ಕೆ  ಸಲ್ಲಿಕೆಯಾಗಿದೆ. ಈ ವರದಿಯನ್ನು ಶೀಘ್ರದಲ್ಲೇ ಕ್ಯಾಬಿನೆಟ್ ಮುಂದೆ ಇಟ್ಟು ಸಾಧಕಬಾಧಕ ಚರ್ಚಿಸಿ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Power Cut: ರಾಜಧಾನಿಯಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ, ಯಾವ ಪ್ರದೇಶದಲ್ಲಿ ಎಂಬ ಮಾಹಿತಿ ಇಲ್ಲಿದೆ

ಕಾಂಗ್ರೆಸ್ ಮೇಲೆ ಆರೋಪ

ಎಸ್ಸಿ ಎಸ್ಟಿ ಜನಾಂಗವನ್ನು ಓಟ್ ಬ್ಯಾಂಕ್ ಮಾಡಿಕೊಂಡು 70  ವರ್ಷ ಆಳಿದ ಕಾಂಗ್ರೆಸ್ ಸರ್ಕಾರ  ನಮ್ಮ ಜನಕ್ಕೆ ಏನು ಮಾಡಿದೆ? ನಮ ಜನರನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಎಂಬಂತೆ ಲಘುವಾಗಿ ಪರಿಗಣಿಸಿತು, ನಮ್ಮ ಜನರ ಓಟು ಪಡೆದು ರಾಜಕೀಯ ನಾಟಕವಾಡಿತೆ ಹೊರತು ಏನನ್ನು ಮಾಡಲಿಲ್ಲ,

ಜಾತಿಗಳ ನಡುವೆ ವಿಷಬೀಜ

ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ತಮ್ಮ ಆಡಳಿತದ ಅವಧಿಯಲ್ಲಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ  ಬದಲು ಬದ್ದತೆಯಿಂದ  ಮೀಸಲಾತಿ ಹೆಚ್ಚಳ ಮಾಡಬೇಕಿತ್ತು ಎಂದ ಅವರು ಎಸ್ಸಿ ಎಸ್ಟಿ ಸಮುದಾಯಕ್ಕೆ  ಬಹಳಷ್ಟು  ಮಾಡಿರುವುದಾಗಿ ಹಾರಾಡುವ ಕಾಂಗ್ರೆಸ್ ವಿಧಾನಸೌಧದ ಆವರಣದಲ್ಲಿ ವಾಲ್ಮೀಕಿ ಪ್ರತಿಮೆ ಬಿಟ್ಟರೆ ಏನು ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Karnataka Weather Report: ನಿಲ್ಲುತ್ತಿಲ್ಲ ವರುಣನ ಆರ್ಭಟ, ಮುಂದಿನ ಮೂರು ದಿನ ಮಳೆ ಸಾಧ್ಯತೆ

2006 ರಲ್ಲಿ ನಮ ಸರ್ಕಾರ ಅಧಿಕಾರಕ್ಕೆ ಬಂದಾಗ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ರೂಪಿಸಿದೆವು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದೊ ಅವರನ್ನು ಭೇಟಿ ಮಾಡಿ  ನಾಯಕ ಸಮುದಾಯದ  ಪರ್ಯಾಯ ಪದಗಳಾದ ಪರಿವಾರ, ತಳವಾರಕ್ಕು ಎಸ್ಟಿ ಪ್ರಮಾಣ ಪತ್ರ ದೊರಕುವಂತೆ ಮಾಡಿದೆವು,  ಪರಿಶಿಷ್ಟ ಪಂಗಡಗಳ ವಸತಿ ಶಾಲೆಗಳಿಗೆ ಮಹರ್ಷಿ ವಾಲ್ಮೀಕಿ ವಸತಿ ಶಾಲೆಗಳೆಂದು ನಾಮಕರಣ ಮಾಡಿದೆವು ಎಂದು ಸಚಿವ ಶ್ರೀರಾಮುಲು ಹೇಳಿದರು

ಸಿದ್ದರಾಮಯ್ಯ ಕೇವಲ ಉತ್ಸವ ಮೂರ್ತಿಯಾಗುತ್ತಾರೆ

ಇದೇ ವೇಳೆ ಸಿದ್ದರಾಮೋತ್ಸವದ ಬಗ್ಗೆ ಪ್ರಸ್ತಾಪಿಸಿದ ಸಚಿವ ಶ್ರೀರಾಮುಲು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಉತ್ಸವ ಮೂರ್ತಿಗೆ ಹೋಲಿಸಿ  ವ್ಯಂಗ್ಯ ಮಾಡಿದರು.  ಸಿದ್ದರಾಮೋತ್ಸವದ ನಂತರ ಸಿದ್ದರಾಮಯ್ಯ ಕೇವಲ ಉತ್ಸವಮೂರ್ತಿಯಾಗಿಯೇ ಉಳಿಯಬೇಕಾಗುತ್ತೆ,  ಜಾತ್ರೆ ಮುಗಿದ ತಕ್ಷಣ ಉತ್ಸವ ಮೂರ್ತಿ ಹೇಗೆ  ಹೊರಗೆ ಇಡುತ್ತಾರೋ  ಹಾಗೆ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ನಿಂದ ಹೊರಗೆ ಇರುವ ಪರಿಸ್ಥಿತಿ ಬರುತ್ತೆ ಎಂದರು.
Published by:Divya D
First published: