ಪಕ್ಷದ ವಿರುದ್ಧ ಕಾರ್ಯಕರ್ತರೇ ನಡೆಸುತ್ತಿರುವ ಯಾವುದೇ ಪ್ರತಿಭಟನೆಯನ್ನು ನಾನು ಖಂಡಿಸುತ್ತೇನೆ; ಶ್ರೀರಾಮುಲು ಸ್ಪಷ್ಟನೆ!

ಬಿಜೆಪಿ ಹೈಕಮಾಂಡ್​ನ ಈ ನಿರ್ಧಾರವನ್ನು ವಿರೋಧಿಸಿ ರಾಜ್ಯದ ಹಲವೆಡೆ ಶ್ರೀರಾಮುಲು ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಎಸ್​ಸಿ ಸಮುದಾಯದ ಮುಖಂಡರು ಇಂದು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ಅಭಿಮಾನಿಗಳ ಹಾಗೂ ಸಮಾಜದವರ ಇಂತಹ ನಡೆಯನ್ನು ಸಚಿವ ಶ್ರಿರಾಮುಲು ಖಂಡಿಸಿದ್ದಾರೆ.

Updated:August 27, 2019, 3:40 PM IST
ಪಕ್ಷದ ವಿರುದ್ಧ ಕಾರ್ಯಕರ್ತರೇ ನಡೆಸುತ್ತಿರುವ ಯಾವುದೇ ಪ್ರತಿಭಟನೆಯನ್ನು ನಾನು ಖಂಡಿಸುತ್ತೇನೆ; ಶ್ರೀರಾಮುಲು ಸ್ಪಷ್ಟನೆ!
ಶ್ರೀರಾಮುಲು
  • Share this:
ಬೆಂಗಳೂರು (ಆಗಸ್ಟ್.27); ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ ಎಂದು ಹಲವಾರು ಕಡೆಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಪಕ್ಷದ ವಿರುದ್ಧ ನಡೆಯುತ್ತಿರುವ ಇಂತಹ ಯಾವುದೇ ಪ್ರತಿಭಟನೆಗಳನ್ನು ನಾನು ಖಂಡಿಸುತ್ತೇನೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಸಚಿವ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಗೂ ಮುಂಚೆಯೇ ಬಿಜೆಪಿ ಪಕ್ಷದ ಹಿಂದುಳಿದ ಸಮುದಾಯದ ಪ್ರಬಲ ನಾಯಕರಾಗಿರುವ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದು ಬಹುತೇಕ ಖಚಿತ ಎನ್ನಲಾಗಿತ್ತು. ಅಲ್ಲದೆ, ಕಳೆದ ಚುನಾವಣೆ ವೇಳೆಯೇ ಯಡಿಯೂರಪ್ಪ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ, ಇದೀಗ ಖಾತೆ ಹಂಚಲಾಗಿದ್ದು, ರಾಮುಲು ಅವರಿಗೆ ಡಿಸಿಎಂ ಸ್ಥಾನವನ್ನು ನೀಡಲಾಗಿಲ್ಲ.

ಬಿಜೆಪಿ ಹೈಕಮಾಂಡ್​ನ ಈ ನಿರ್ಧಾರವನ್ನು ವಿರೋಧಿಸಿ ರಾಜ್ಯದ ಹಲವೆಡೆ ಶ್ರೀರಾಮುಲು ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಎಸ್​ಸಿ ಸಮುದಾಯದ ಮುಖಂಡರು ಇಂದು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ಅಭಿಮಾನಿಗಳ ಹಾಗೂ ಸಮಾಜದವರ ಇಂತಹ ನಡೆಯನ್ನು ಸಚಿವ ಶ್ರಿರಾಮುಲು ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ತನ್ನ ಖಂಡನೆಯನ್ನು ವ್ಯಕ್ತಪಡಿಸಿರುವ ಶ್ರೀರಾಮುಲು, “ನನಗೆ ಅಸಮಾಧಾನವಾಗಿದೆ ಎಂದು ನಮ್ಮ ಪಕ್ಷದ ವಿರುದ್ಧ ನಡೆಯುತ್ತಿರುವ ಯಾವುದೇ ಪ್ರತಿಭಟನೆಯನ್ನು ನಾನು ಖಂಡಿಸುತ್ತೇನೆ. ಇದು ಸರಿಯಲ್ಲ, ದಯವಿಟ್ಟು ಯಾರೂ ಹೀಗೆ ಮಾಡಬಾರದು ಎಂದು ನಾನು ಮನವಿ ಮಾಡುತ್ತೇನೆ. ಬಿಜೆಪಿ ಕಾರ್ಯಕರ್ತರಿಗೆ ಪಕ್ಷ ಮೊದಲು! ಪಕ್ಷದ ಎಲ್ಲಾ ತೀರ್ಮಾನಗಳಿಗೆ ನಾನು ಯಾವಾಗಲೂ ಬದ್ಧನಾಗಿರುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಮಾತೆತ್ತಿದರೆ ರೈತರ ಹೆಸರೇಳ್ತಾರೆ ಆದರೆ, ಈ ಸರ್ಕಾರ ರೈತರ ಪರ ಇರುವಂತೆ ಕಾಣುತ್ತಿಲ್ಲ; ಬಿಜೆಪಿ ಸರ್ಕಾರದ ವಿರುದ್ಧ ಖರ್ಗೆ ಕಿಡಿ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:August 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ