ಪ್ರವಾಹದ ಕುರಿತ ಸಮೀಕ್ಷೆಯ ನಂತರ ಕೇಂದ್ರ ಸರ್ಕಾರ ಅವಶ್ಯವಿರುವಷ್ಟು ಹಣ ಬಿಡುಗಡೆ ಮಾಡುತ್ತದೆ; ಶ್ರೀರಾಮುಲು

ನೆರೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಸಿದ್ದವಾಗಿದೆ. ಆದರೆ, ಸಮೀಕ್ಷೆ ಮಾಡದೆ ಹಣ ಬಿಡುಗಡೆ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ದೆಹಲಿಯಿಂದ ಕೇಂದ್ರ ಸರ್ಕಾರ ಒಂದು ತಂಡವನ್ನು ಶೀಘ್ರದಲ್ಲಿ ರಾಜ್ಯಕ್ಕೆ ಕಳುಹಿಸಲಿದೆ. ಈ ತಂಡ ಸಮೀಕ್ಷೆ ಮಾಡಿದ ನಂತರ ಕೇಂದ್ರ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡಲಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

MAshok Kumar | news18
Updated:August 22, 2019, 11:16 AM IST
ಪ್ರವಾಹದ ಕುರಿತ ಸಮೀಕ್ಷೆಯ ನಂತರ ಕೇಂದ್ರ ಸರ್ಕಾರ ಅವಶ್ಯವಿರುವಷ್ಟು ಹಣ ಬಿಡುಗಡೆ ಮಾಡುತ್ತದೆ; ಶ್ರೀರಾಮುಲು
ಶ್ರೀರಾಮುಲು
  • News18
  • Last Updated: August 22, 2019, 11:16 AM IST
  • Share this:
ರಾಯಚೂರು (ಆಗಸ್ಟ್.22); ರಾಜ್ಯದಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಬಹುಪಾಲು ಜನ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಈ ಕುರಿತು ಸಂಪೂರ್ಣ ಸಮೀಕ್ಷೆ ನಡೆಸಿದ ನಂತರ ಅವಶ್ಯವಿರುವಷ್ಟು ಹಣ ಬಿಡುಗಡೆ ಮಾಡಲಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಆಡಳಿತ ಪಕ್ಷದ ಮೇಲೆ ಟೀಕಾ ಪ್ರಹಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಕ್ತ ನೆರೆ ಪರಿಹಾರದ ಹಣ ಈವರೆಗೆ ಬಿಡುಗಡೆ ಮಾಡಿಲ್ಲ. ಬರ ಪರಿಹಾರ ಹಣ ಈಗ ಬಿಡುಗಡೆಯಾಗಿದೆ ಇನ್ನೂ ನೆರೆ ಹಣ ಬರುವುದು ಎಂದೋ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಹ ಟ್ವೀಟ್ ಮಾಡುವ ಮೂಲಕ ಬಿಜೆಪಿ ಕಾಲೆಳೆದಿದ್ದರು.

ಈ ಕುರಿತ ಟೀಕೆಗಳಿಗೆ ಇಂದು ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, “ನೆರೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಸಿದ್ದವಾಗಿದೆ. ಆದರೆ, ಸಮೀಕ್ಷೆ ಮಾಡದೆ ಹಣ ಬಿಡುಗಡೆ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ದೆಹಲಿಯಿಂದ ಕೇಂದ್ರ ಸರ್ಕಾರ ಒಂದು ತಂಡವನ್ನು ಶೀಘ್ರದಲ್ಲಿ ರಾಜ್ಯಕ್ಕೆ ಕಳುಹಿಸಲಿದೆ. ಈ ತಂಡ ಸಮೀಕ್ಷೆ ಮಾಡಿದ ನಂತರ ಕೇಂದ್ರ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡಲಿದೆ” ಎಂದು ಅವರು ತಿಳಿಸಿದ್ದಾರೆ.

“ನಿನ್ನೆಯಿಂದ ಎಲ್ಲಾ ಸಚಿವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇವೆ. ವಿದ್ಯುತ್ ಸಂಪರ್ಕ ಕಡಿತವಾಗಿರುವ ಪ್ರದೇಶಗಳಲ್ಲಿ ಇನ್ನೂ 5 ದಿನಗಳಲ್ಲಿ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಭತ್ತ ವಿಮೆ ನಿಡುವ ಬಗ್ಗೆಯೂ ಸರ್ಕಾರದಿಂದ ಸೂಚನೆ ನೀಡುತ್ತೇವೆ” ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ವರದಿ-ಶರಣಪ್ಪ ಬಾಚಲಾಪೂರ)

ಇದನ್ನೂ ಓದಿ : 10 ದಿನಗಳಲ್ಲಿ ಪ್ರವಾಹಪೀಡಿತ ಸ್ಥಳಗಳ ಸಮೀಕ್ಷೆ; ವಿಜಯಪುರದಲ್ಲಿ ಸಚಿವ ಕೆ.ಎಸ್​. ಈಶ್ವರಪ್ಪ ಸುದ್ದಿಗೋಷ್ಠಿ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published:August 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ