ಬಳ್ಳಾರಿ (ಡಿ.07): ವಿಧಾನಸಭೆ ಚುನಾವಣೆ (Assembly Election) ಹತ್ತಿರ ಬರ್ತಿದ್ದಂತೆ ಮತ್ತೆ ರಾಜಕೀಯವಾಗಿ ಸಕ್ರಿಯರಾಗಲು ಜನಾರ್ದನ ರೆಡ್ಡಿ ಶತಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಬಿಜೆಪಿ ನಾಯಕರಿಂದ (BJP Leaders) ಯಾವುದೇ ಆಹ್ವಾನ ಸಿಕ್ಕಿಲ್ಲ. ಇದ್ರಿಂದ ರಾಜ್ಯ ಬಿಜೆಪಿ ಬಗ್ಗೆ ಕೊಂಚ ಬೇಸತ್ತಿರುವ ಜನಾರ್ದನ ರೆಡ್ಡಿ, ಹೊಸ ಪಕ್ಷ (News Party) ಕಟ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ. ಜನಾರ್ದನ ರೆಡ್ಡಿ (Janardhana Reddy) ರೆಬಲ್ ಹೇಳಿಕೆ ನೀಡ್ತಿದ್ದಂತೆ ಬೆನ್ನಲ್ಲೇ ಸಚಿವ ಹಾಗೂ ರೆಡ್ಡಿ ದೋಸ್ತು ಶ್ರೀರಾಮುಲು (Minister Sriramulu) ಅವರು ಮತ್ತೆ ಸ್ನೇಹದ ಮಂತ್ರ ಪಟಿಸಿದ್ದಾರೆ.
ಸ್ನೇಹಕ್ಕಾಗಿ ಜೀವ ಕೊಡಲು ಸಹ ನಾನು ರೆಡಿ
ಜನಾರ್ದನ ರೆಡ್ಡಿ ಮನವೊಲಿಸಲು ಸಚಿವ ಶ್ರೀರಾಮುಲು ಮುಂದಾಗಿದ್ದಾರೆ. ಬಳ್ಳಾರಿಯ ಕಂಪ್ಲಿಯಲ್ಲಿ ಈ ಬಗ್ಗೆ ಮಾತಾಡಿದ ಸಾರಿಗೆ ಸಚಿವ ಶ್ರೀರಾಮುಲು ಅವರು ಸ್ನೇಹಕ್ಕಾಗಿ ಜೀವ ಕೊಡಲು ಸಹ ನಾನು ರೆಡಿ ಎಂದು ಹೇಳಿದ್ದಾರೆ. ಜನಾರ್ದನ ರೆಡ್ಡಿ ಅಸಮಾಧಾನ ಕೇಳಿ ಸಮಸ್ಯೆ ಬಗೆಹರಿಸೋದಾಗಿ ಹೇಳಿದ್ದಾರೆ.
ಸ್ನೇಹಕ್ಕೆ ಪ್ರಾಣ ಕೊಡೋ ವ್ಯಕ್ತಿ ನಾನು
ಜನಾರ್ದನ ರೆಡ್ಡಿ ಅವರು ನನ್ನ ಆತ್ಮೀಯ ಸ್ನೇಹಿತರು, ಸ್ನೇಹ ಅಂದ್ರೆ ಜನಾರ್ದನ ರೆಡ್ಡಿ ಮತ್ತು ರಾಮುಲು ಎನ್ನುವಂತೆ ಎಲ್ಲರೂ ಮಾತಾಡ್ತಾರೆ. ಸ್ನೇಹಕ್ಕೆ ಪ್ರಾಣ ಕೊಡೋ ವ್ಯಕ್ತಿ ನಾನು ಎಂದು ರಾಮುಲು ಹೇಳಿದ್ದಾರೆ.
ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ
ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ, ಬಿಜೆಪಿ ಪಕ್ಷ ನನಗೆ ತಾಯಿ ಸಮಾನ, ಸ್ನೇಹ ಮತ್ತು ಪಾರ್ಟಿ ವಿಚಾರ ಬಂದಾಗ ಎರಡನ್ನೂ ಕೂಡ ಸರಿದೂಗಿಸಿಕೊಂಡು ಹೋಗುವೆ. ಜನಾರ್ದನ ರೆಡ್ಡಿ ಅವರ ಬಗ್ಗೆ ಅಲ್ಲಿ ಇಲ್ಲಿ ಸುದ್ದಿಗಳನ್ನ ಕೇಳ್ತಾ ಇದ್ದೇವೆ. ನಾನಿನ್ನೂ ಜನಾರ್ದನ ರೆಡ್ಡಿ ಅವರನ್ನ ಭೇಟಿಯಾಗಿಲ್ಲ. ಜನಾರ್ದನ ರೆಡ್ಡಿ ಅವರ ಸದ್ಯದ ರಾಜಕೀಯದ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ರಾಮುಲು ಹೇಳಿದ್ರು.
ಪಕ್ಷಕ್ಕೆ ಮುಜುಗರವಾಗದಂತೆ ನೋಡಿಕೊಳ್ಳುವೆ
ಜನಾರ್ದನ ರೆಡ್ಡಿ ಸಿಕ್ಕ ಬಳಿಕ ಅವರನ್ನ ಕೂರಿಸಿಕೊಂಡು ಮಾತಾಡುವೆ. ನನ್ನ ಸ್ನೇಹಿತ ಅಸಮಾಧಾನಗೊಳ್ಳದಂತೆ ನಾನು ಕೂರಿಸಿ ಮಾತಾಡುವೆ. ಅವರ ಮನವೊಲಿಸುವ ಕೆಲಸ ಮಾಡುವೆ. ಪಕ್ಷಕ್ಕೆ ಮುಜುಗರವಾಗದಂತೆ ಎಲ್ಲವನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ.
ಅಪಾರ್ಥ ಕಲ್ಪಿಸೋದು ಬೇಡ
ಗಂಗಾವತಿಯಲ್ಲಿ ರೆಡ್ಡಿ ಜೊತೆ ಬಿಜೆಪಿ ನಾಯಕರು ಕಾಣಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಅವರೆಲ್ಲರು ಹನುಮನ ಜಯಂತಿಗೆ ಬಂದಿದ್ದರು. ಸಾರ್ವಜನಿಕ ಕಾರ್ಯಕ್ರಮ ಆಗಿರೋದ್ರಿಂದ ಎಲ್ಲರೂ ಪಕ್ಷಾತೀತವಾಗಿ ಬರುತ್ತಾರೆ. ಈ ಬಗ್ಗೆ ಅಪಾರ್ಥ ಕಲ್ಪಿಸೋದು ಬೇಡ ಎಂದ ಸಚಿವ ಶ್ರೀರಾಮುಲು.
ರಾಜಕೀಯ ವಲಯದಲ್ಲಿ ಗುಸುಗುಸು
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಣಿ ಉದ್ಯಮಿ ಗಾಲಿ ಜನಾರ್ದನರೆಡ್ಡಿ ಅವರ ಕುಟುಂಬದ ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಗೈರುಹಾಜರಾಗಿದ್ದು, ಈ ಬೆಳವಣಿಗೆಯು ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಗುಸುಗುಸುಗಳು ಶುರುವಾಗಿತ್ತು.
ಇದನ್ನೂ ಓದಿ: Maharashtra Villages: ನಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ; ಜಿಲ್ಲಾಧಿಕಾರಿ ಪತ್ರ ಬರೆದ ಗ್ರಾಮಸ್ಥರು
ಆದರೆ, ಶ್ರೀರಾಮುಲು ಅವರು ಪೂರ್ವ ನಿಗದಿತ ಕೆಲಸದ ಮೇಲೆ ಜೈಪುರದಲ್ಲಿರುವ ಕಾರಣ ರೆಡ್ಡಿ ಅವರ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕುತೂಹಲಕಾರಿ ವಿಚಾರವೆಂದರೆ, ರೆಡ್ಡಿ ಇತ್ತೀಚೆಗೆ ತಮ್ಮ ರಾಜಕೀಯ ನಡೆ ಕುರಿತು ಶೀಘ್ರದಲ್ಲೇ ತಿಳಿಸುವುದಾಗಿ ಘೋಷಿಸಿದ್ದರು. ಈ ವೇಳೆ ಶ್ರೀರಾಮುಲು ಅವರೊಂದಿಗೆ ಇರಲಿಲ್ಲ.
ಗಾಲಿ ಜನಾರ್ದನ ರೆಡ್ಡಿಯವರ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ನ್ಯಾಯಾಲಯದ ಅನುಮತಿ ಇಲ್ಲದೆ ಅವರು ಜಿಲ್ಲೆ ಪ್ರವೇಶಿಸುವಂತಿಲ್ಲ. ಬಿಜೆಪಿ ಕೂಡ ಇವರಿಂದ ದೂರ ಸರಿಯುತ್ತಿದೆ. ಈ ಬೆಳವಣಿಗೆಗಳು ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಭಿನ್ನಾಭಿಪ್ರಾಯ ಮೂಡಿಸಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ