ಹುಬ್ಬಳ್ಳಿ: ಸ್ನೇಹವನ್ನು ರಾಜಕೀಯಕ್ಕೆ (Politics) ಬೆರೆಸೋಕೆ ಆಗಲ್ಲ. ಸ್ನೇಹವೇ (Friends) ಬೇರೆ, ರಾಜಕೀಯವೇ ಬೇರೆ ಅಂತ ಅನುಗಾಲದ ಗೆಳೆಯ ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ಬಗ್ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು (Minister B.Sriramulu) ಮುಗುಮ್ಮಾಗಿ ಮಾತನಾಡಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅನುಗಾಲದ ಗೆಳೆಯ ಜನಾರ್ದನ ರೆಡ್ಡಿ ಮನವೊಲಿಕೆಯ ಪ್ರಯತ್ನ ಮುಂದುವರಿದಿದೆ. ಬಿಜೆಪಿ ನಾಯಕರು (BJP Leaders) ರೆಡ್ಡಿಯ ಮನವೊಲಿಸ್ತಾರೆ ಅನ್ನೊ ವಿಶ್ವಾಸವಿದೆ ಎಂದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಸ್ನೇಹ ಯಾವತ್ತೂ ಶಾಶ್ವತ. ಬಿಜೆಪಿ ನನಗೆ ರಾಜಕೀಯ ಸ್ಥಾನಮಾನ ಕೊಟ್ಟಿದೆ. ಸ್ನೇಹವನ್ನೂ ಬಿಡಲ್ಲ, ರಾಜಕಾರಣವನ್ನೂ ಬಿಡಲ್ಲ. ಕೇಂದ್ರದ ನಾಯಕರ ಜತೆ ಈ ಬಗ್ಗೆ ಮಾತನಾಡಿದ್ದೇನೆ. ನಮಗೆ ಬಿಜೆಪಿಯಲ್ಲಿ ಗೌರವ, ಸ್ಥಾನಮಾನ ಸಿಕ್ಕಿದೆ. ಜನಾರ್ಧನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಯಾವತ್ತೂ ಮಾತನಾಡಿಲ್ಲ.
ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀನಿ ಅಂತ ಹೇಳಿಲ್ಲ. ಕೇವಲ ಸಾರ್ವಜನಿಕ ಜೀವನದಲ್ಲಿ ಬೆರೆಯಬೇಕು. ಸಾರ್ವಜನಿಕ ಜೀವನಕ್ಕೆ ಬರಬೇಕೆಂದಿದ್ದಾರೆ ಎಂದುಕೊಂಡಿದ್ದಾರೆ. ಜನಾರ್ದನ ರಡ್ಡಿ ಅವರನ್ನ ಉಳಿಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತೆ ಅನ್ನೋ ವಿಶ್ವಾಸ ಇದೆ ಎಂದರು
ಜನಾರ್ದನ ರೆಡ್ಡಿ ಬೇರೆ ದಾರಿ ಹಿಡಿಯಲ್ಲ ಅನ್ನೋ ಖಾತ್ರಿ ಇದೆ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ ಆದರೆ ಹೊಸ ಪಕ್ಷ ಕಟ್ಟಿದರೆ ರೆಡ್ಡಿ ಜೊತೆಗೆ ಹೋಗ್ತಿರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಲು ಶ್ರೀರಾಮುಲು ನಿರಾಕರಿಸಿದರು.
ಪರಿಶಿಷ್ಟರ ಮೀಸಲಾತಿ ಬಿಲ್ ಚರ್ಚಿಸದೇ ಪಾಸ್ ಮಾಡಲು ಆಗ್ರಹ
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದ ಬಿಲ್ ಸದನದಲ್ಲಿ ಯಾವುದೇ ಚರ್ಚೆ ಮಾಡದೇ ಪಾಸ್ ಮಾಡಬೇಕು ಎಂದು ಪ್ರತಿಪಕ್ಷಗಳಿಗೆ ಬಿ.ಶ್ರೀರಾಮುಲು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
ವಿಪಕ್ಷದ ಸದಸ್ಯರು ಚರ್ಚೆಯಲ್ಲಿ ಭಾಗಿಯಾಗಬೇಕು. ಸಿದ್ದರಾಮಯ್ಯ ಅವರು ಚರ್ಚೆಗೆ ಅವಕಾಶ ಕೊಡದೇ ಬಿಲ್ ಪಾಸ್ ಆಗಲು ಸಹಕಾರ ಕೊಡಬೇಕು. ಅದನ್ನೇ ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು. ಈ ವಿಚಾರದಲ್ಲಿ ನಮ್ಮ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳಬೇಕು ಎಂದುಕೊಂಡಿದೆ.
ವಿಪಕ್ಷಗಳಿಂದ ಸಮಯ ವ್ಯರ್ಥ
ಇದೇ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸಿದ್ದೇವೆ. ಸದನದಲ್ಲಿ ತೀರ್ಮಾನವಾದ ನಂತರ ಶೆಡ್ಯೂಲ್ 9 ರಲ್ಲಿ ಕೇಂದ್ರಕ್ಕೆ ಕಳಿಸಲಾಗುತ್ತೆ. ಸದನದಲ್ಲಿ ವಿಪಕ್ಷಗಳು ಸಮಯ ವ್ಯರ್ಥ ಮಾಡ್ತಿವೆ. ನಿನ್ನೆ, ಮೊನ್ನೆ ನಡೆದ ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ತೆಗಳ ಚರ್ಚೆ ಆಗಬೇಕಿತ್ತು.
ಸಣ್ಣ ಸಣ್ಣ ಕಾರಣಗಳಿಗೆ ಜಗಳವಾಡಿ ದಿನ ಹಾಳು ಮಾಡುತ್ತಿದ್ದಾರೆ. ಗೋವಿಂದ ಕಾರಜೋಳ ಕಾಂಗ್ರೆಸ್ ಶಾಸಕರೊಬ್ಬರಿಗೆ ಅಂದ ಮಾತನ್ನೇ ದೊಡ್ಡದು ಮಾಡ್ತಿದಾರೆ. ಸದನ ಹಾಳು ಮಾಡ್ತಿದಾರೆ. ಇದು ಸರಿಯಾದುದಲ್ಲ ಎಂದರು.
ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮೆಲ್ಲ ಹಿರಿಯರು ಸೇರಿ ಒಳ್ಳೆ ನಿರ್ಧಾರ ತೆಗೆದುಕೊಳ್ತಾರೆ ಎಂದರು.
ದರ್ಗಾಕ್ಕೆ ಜನಾರ್ದನ ರೆಡ್ಡಿ ಭೇಟಿ
ಕೊಪ್ಪಳದ ಗಂಗಾವತಿಯಲ್ಲಿರೋ ದರ್ಗಾಕ್ಕೆ ಜನಾರ್ದನ ರೆಡ್ಡಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ರು. ಟೋಪಿ ಧರಿಸಿ ದರ್ಗಾದಲ್ಲಿ ರೆಡ್ಡಿ ಪೂಜೆ ಸಲ್ಲಿಸಿದ್ರು. ಈ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರಿಗೆ ಟಾಂಗ್ ಕೊಡಲು ರೆಡ್ಡಿ ಸಜ್ಜಾಗಿದ್ದಾರೆ ಎನ್ನಲಾಗಿದೆ.
ಅಲ್ಲದೇ ಗಂಗಾವತಿಯಿಂದಲೇ ಸ್ಪರ್ಧಿಸುತ್ತಾರೆ ಅನ್ನೋದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಇನ್ನು ಮುಸ್ಲಿಂ ಸಮಾಜದ ಪ್ರಮುಖರ ಜೊತೆ ರಾಜಕೀಯ ಬೆಳವಣಿಗೆ ಕುರಿತು ಜನಾರ್ದನ ರೆಡ್ಡಿ ಚರ್ಚಿಸಿದ್ರು. ಡಿಸೆಂಬರ್ 25ಕ್ಕೆ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡ್ತಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ