ಬೆಳಗಾವಿ: ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ಅವರು ಹೊಸ ಪಕ್ಷ ಘೋಷಣೆ ಮಾಡದಂತೆ ತಡೆಯಲು ಸಾರಿಗೆ ಸಚಿವ ಶ್ರೀರಾಮುಲು (Minister B Sriramulu) ಪ್ರಯತ್ನಿಸಿದ್ದರು. ಕೊನೆ ಗಳಿಗೆವರೆಗೂ ಶ್ರೀರಾಮುಲು ಗೆಳೆಯನನ್ನು ಬಿಜೆಪಿ (BJP) ಬಿಟ್ಟುಕೊಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದ್ರೆ ನಿನ್ನೆ (ಡಿಸೆಂಬರ್ 25) ಸುದ್ದಿಗೋಷ್ಠಿ ನಡೆಸಿದ್ದ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ಮಾಡಿದ್ದರು. ಸುದ್ದಿಗೋಷ್ಠಿಯಲ್ಲಿ ಗೆಳೆಯ ಶ್ರೀರಾಮುಲು ಮತ್ತು ಸೋದರ ಸೋಮಶೇಖರ್ ರೆಡ್ಡಿ (MLA Somashekhar Reddy) ಅವರನ್ನು ನೂತನ ಪಕ್ಷಕ್ಕೆ ಆಹ್ವಾನಿಸಲ್ಲ ಎಂದು ಹೇಳಿದ್ದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಅವರಿಗೆ ಬಹುಪರಾಕ್ ಹೇಳಿದ್ದರು.
ಇದರ ಜೊತೆ ಬಿಜೆಪಿಯಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಅತೃಪ್ತ ನಾಯಕರನ್ನು ಸೆಳೆಯುವ ಸಣ್ಣ ಸುಳಿವು ನೀಡಿ, ರಾಜ್ಯದಲ್ಲಿರೋದು ವಲಸಿಗ ಮತ್ತು ಮೂಲ ಎಂಬ ಮೈತ್ರಿ ಸರ್ಕಾರ ಎಂದು ಲೇವಡಿ ಮಾಡಿದ್ದರು. ಇದೀಗ ಸಾರಿಗೆ ಸಚಿವ ಶ್ರೀರಾಮುಲು, ಗೆಳೆಯ ಜನಾರ್ದನ ರೆಡ್ಡಿ ನೂತನ ಪಕ್ಷದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಾಣ ಸ್ನೇಹಿತನಾಗಿ ಒಳ್ಳೆಯದಾಗಲಿ
ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ರೆಡ್ಡಿ ಬುದ್ದಿವಂತರು, ಅನುಭವಸ್ಥರೂ ಇದ್ದಾರೆ. ಅವರ ಪ್ರಾಣ ಸ್ನೇಹಿತನಾಗಿ ಒಳ್ಳೆಯದಾಗಲಿ ಅಂತ ಬಯಸುತ್ತೇನೆ. ಹಿರಿಯ ನಾಯಕರು, ಸಿಎಂ ಜೊತೆ ಮಾತನಾಡಿದ್ದೆ. ಒಂದು ವೇಳೆ ಮತ್ತೆ ಅವಕಾಶ ಸಿಕ್ರೆ ಮಾತನಾಡುತ್ತೇನೆ ಎಂದು ಶ್ರೀರಾಮುಲು ಹೇಳಿದರು.
ನಾನು ಡಿಬೇಟ್ ಮಾಡಲ್ಲ
ಸಿಎಂ ಬಸವರಾಜ್ ಬೊಮ್ಮಾಯಿ ಮಂತ್ರಿ ಮಂಡಲದಲ್ಲಿ ಸಚಿವನಾಗಿದ್ದೇನೆ. ನಮ್ಮ ಉದ್ದೇಶ ಕಾಂಗ್ರೆಸ್ ಮುಕ್ತ ಆಗಬೇಕು. 2023ಕ್ಕೆ ಮತ್ತೆ ಬಿಜೆಪಿ ಪಕ್ಷ ಆಡಳಿತಕ್ಕೆ ಬರಬೇಕು. ನಮ್ಮದು ರಾಷ್ಟ್ರೀಯ ರಾಜಕೀಯ ಪಕ್ಷ. ನಾನು ಡಿಬೇಟ್ ಮಾಡಲ್ಲ ಎಂದರು.
ಸಿದ್ಧಾಂತದ ಮೇಲೆ ರಾಜಕೀಯ
ಪಕ್ಷ ಸ್ಥಾಪನೆಯ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ನಾನು ಮಾತನಾಡಲ್ಲ. ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತೇವೆ ಎಂದು ಹೇಳಿ ಜನಾರ್ದನ್ ರೆಡ್ಡಿ ಸುದ್ದಿಗೋಷ್ಠಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಹೊಸ ಪಕ್ಷ ಸ್ಥಾಪನೆಯಿಂದ ಶ್ರೀರಾಮುಲುಗೆ ಧರ್ಮ ಸಂಕಟ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾಲ್ಕು ಬಾರಿ ಶಾಸಕ, ಸಂಸದ, ಸಚಿವನಾಗಿದ್ದೇನೆ. ಸಿದ್ದಾಂತದ ಮೇಲೆ ರಾಜಕೀಯ ಮಾಡುತ್ತಿದ್ದೇನೆ ಎಂದು ಹೇಳಿದರು.
ಬಳ್ಳಾರಿ ಭಾಗದಲ್ಲಿ ಬಿಜೆಪಿಯ ಪ್ರಭಾವಿ ನಾಯಕರೆಂದರೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್ ರೆಡ್ಡಿ. ಹೀಗಾಗಿ ಇಬ್ಬರು ನಾಯಕರಿಗೆ ಉನ್ನತ ಸ್ಥಾನ ನೀಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಚುನಾವಣೆ ಎದುರಿಸಲು ಮುಂದಾಗಬಹುದು.
ಬಳ್ಳಾರಿ ಭಾಗದಲ್ಲಿ ಬಿಜೆಪಿಯ ಪ್ರಭಾವಿ ನಾಯಕರೆಂದರೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್ ರೆಡ್ಡಿ. ಹೀಗಾಗಿ ಇಬ್ಬರು ನಾಯಕರಿಗೆ ಉನ್ನತ ಸ್ಥಾನ ನೀಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಚುನಾವಣೆ ಎದುರಿಸಲು ಮುಂದಾಗಬಹುದು.
ಇಬ್ಬರಿಗೂ ಸಿಗುತ್ತಾ ಉನ್ನತ ಸ್ಥಾನಮಾನ?
ಬಳ್ಳಾರಿ ಭಾಗದಲ್ಲಿ ಜನಾರ್ಧನ ರೆಡ್ಡಿ ಅವರನ್ನು ರಾಜಕೀಯವಾಗಿ ಎದುರಿಸಲು ಶ್ರೀರಾಮುಲು ಅವರನ್ನು ಡಿಸಿಎಂ ಮಾಡಿದ್ರೂ ಅಚ್ಚರಿಪಡಬೇಕಿನಲ್ಲ. ಶ್ರೀರಾಮುಲು ಮತ್ತು ಸೋಮಶೇಖರ್ ರೆಡ್ಡಿ ಅವರಿಗೆ ಉನ್ನತ ಹುದ್ದೆ ನೀಡುವ ಮೂಲಕ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗದಂತೆ ನೋಡಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ